Viral video: ವೀರಗಾಸೆ ಕಲಾವಿದರಿಗೆ ಸ್ಪರ್ಧೆಯೊಡ್ಡುವಂತೆ ನೃತ್ಯ ಮಾಡಿದ ಬಾಲಕ
ರಾಜ್ಯದ ಜಾನಪದ ಕಲೆಗಳಲ್ಲಿ ಒಂದಾದ ವೀರಗಾಸೆ ನೃತ್ಯ ಎಲ್ಲರಿಗೂ ಗೊತ್ತೇ ಇರುತ್ತದೆ. ಈ ನೃತ್ಯ ನೋಡಿದಾಗ ನಿಜಕ್ಕೂ ದೇವರೇ ನಮಗೆ ಒಲಿದಾಗೇ ಅನಿಸುತ್ತದೆ. ಈ ನೃತ್ಯವನ್ನು ಓರ್ವ ಬಾಲಕ ನಿಜಕ್ಕೂ ಎಲ್ಲರ ಮೈ ಜುಂ ಅನ್ನುವಂತೆ ನರ್ತಿಸಿರುವ ವೀಡಿಯೋ ವೈರಲ್ ಆಗಿದೆ. ಹಾಗೆನೇ ಈ ಬಾಲಕ ವೀರಗಾಸೆ ಕಲಾವಿದರಿಗೆ ಸ್ಪರ್ಧೆಯೊಡ್ಡುವಂತೆ ರಸ್ತೆ ಮಧ್ಯೆ ನೃತ್ಯ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವೀರಗಾಸೆ ಕಲಾವಿದರು ನೃತ್ಯ ಮಾಡುತ್ತಿದ್ದ ವೇಳೆ ಸೂಟು ತೊಟ್ಟು ಬಂದ ಪುಟ್ಟ ಬಾಲಕನೊಬ್ಬ ಕಲಾವಿದರಿಗೆ ಸ್ಪರ್ಧೆಯೊಡ್ಡುವ ರೀತಿಯಲ್ಲಿ ವೀರಗಾಸೆ ನೃತ್ಯ ಮಾಡಿ ಅಚ್ಚರಿ ಮೂಡಿಸಿದ್ದಾನೆ. ಸಾಕ್ಷಾತ್ ಶಿವನೇ ಬಾಲಕನ ರೂಪದಲ್ಲಿ ಅವತಾರವೆತ್ತಿ ಬಂದು ವೀರಗಾಸೆ ಕುಣಿತ ಮಾಡಿದಂತಿದೆ. ಬಾಲಕನ ಪ್ರತಿಭೆ ಕಂಡು ನೆರೆದಿದ್ದ ಜನರು ಬೆರಗಾಗಿದ್ದಾರೆ.