ಶೇಕಡಾ 88ರಷ್ಟು ಮುಸಲ್ಮಾನರಿರುವ ಈ ಇಸ್ಲಾಂ ರಾಷ್ಟ್ರದ ನೋಟಿನ ಮೇಲೆ ಗಣಪತಿ ದೇವರ ಫೋಟೋ ಇದೆ? ಯಾವುದು ಆ ರಾಷ್ಟ್ರ ಗೊತ್ತೆ??

ಭಾರತದ ನೋಟಿನಲ್ಲಿ ಗಾಂಧೀಜಿಯ ಚಿತ್ರಣವಿದ್ದರೆ, ಇಲ್ಲೊಂದು ದೇಶದ ನೋಟುಗಳಲ್ಲಿ ಗಣಪತಿಯ ಫೋಟೋ ಇದೆ. ಆದರೆ ವಿಶೇಷ ಏನಪ್ಪಾ ಅಂದ್ರೆ ಅ ರಾಷ್ಟ್ರ ಕಟ್ಟರ್ ಮುಸ್ಲಿಂ ರಾಷ್ಟ್ರ. ಹೌದು. ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಸಮುದಾಯದ ಜನರು ಇದ್ದರೂ ಹಿಂದುಗಳ ಸಂಪ್ರದಾಯವನ್ನು ಗೌರವಿಸುತ್ತಾರೆ ಪಾಲಿಸುತ್ತಾರೆ.

 

ನಿಮಗೆಲ್ಲಾ ಗೊತ್ತಿರೋ ಹಾಗೆ ಭೂಮಿಯ ಮೇಲೆ ಅತೀ ಹೆಚ್ಚು ಮುಸ್ಲಿಂ ಧರ್ಮಿಯರು ವಾಸಿಸುತ್ತಿರುವ ರಾಷ್ಟ್ರ ಇಂಡೋನೇಷ್ಯಾ. ಅದು ಜಗತ್ತಿನ ಮೂರನೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೂ ಹೌದು. ಮಲೇಷ್ಯಾ ಹಾಗೂ ಆಸ್ಟ್ರೇಲಿಯಾ ನಡುವೆ ಇರುವ ಸಾವಿರಾರು ದ್ವೀಪಗಳ ಸಮೂಹ ಸೇರಿ ಇಂಡೋನೇಷ್ಯಾ ರಾಷ್ಟ್ರ ಸ್ಥಾಪನೆಯಾಗಿದೆ. ಇಂಡೋನೇಷ್ಯಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 88ರಷ್ಟು ಮುಸ್ಲಿಂ ಧರ್ಮಿಯರು. ಹಿಂದೂಗಳ ಸಂಖ್ಯೆ ಕೇವಲ 2ರಷ್ಟು ಮಾತ್ರ.

ಇಂಟರೆಸ್ಟಿಂಗ್ ಸಂಗತಿ ಏನಂದ್ರೆ, ಇಂಡೋನೇಷ್ಯಾದಲ್ಲಿ 88ರಷ್ಟು ಮುಸ್ಲಿಂ ಧರ್ಮಿಯರಿದ್ದರೂ ಅಲ್ಲಿ ಹಿಂದೂ ಧರ್ಮ ಗಟ್ಟಿಯಾಗಿ ನೆಲೆನಿಂತಿದೆ. ಅಲ್ಲಿಯ ಜನ ಗಣಪತಿಯನ್ನ ಕಲೆ, ಬುದ್ಧಿ ಹಾಗೂ ಸಮೃದ್ಧಿಯ ಸಂಕೇತವೆಂದು ಆರಾಧಿಸುತ್ತಾರೆ. ಅದೇ ಕಾರಣಕ್ಕೆ ದೇಶದ ಕರೆನ್ಸಿಯಲ್ಲಿ ಗಣಪತಿಯ ಚಿತ್ರವನ್ನ ಮುದ್ರಿಸಿದ್ದಾರೆ.

ಈ ಗಣೇಶನ ಚಿತ್ರವಿರುವ ನೋಟು ಇಂಡೋನೇಷ್ಯಾ ದೇಶದ್ದಾಗಿದ್ದು, 20,000 ರೂಪಾಯಿ ಮುಖಬೆಲೆಯ ಇಂಡೊನೇಷ್ಯಾದ ಹಳೆಯ ನೋಟಿನಲ್ಲಿ ಗಣೇಶನ ಫೋಟೋ ಇದೆ. ಗಣೇಶ ಎಂದರೆ ಬುದ್ಧಿವಂತ, ಕಲೆ ಮತ್ತು ವಿಜ್ಞಾನದ ಸಂಕೇತ ಎಂದು ಇಲ್ಲಿ ನಂಬಲಾಗಿದೆ. ಈ ಕಾರಣಕ್ಕಾಗಿಯೇ ನೋಟಿನಲ್ಲಿ ಮುದ್ರಿಸಲಾಗಿದೆ ಎಂದು ಹೇಳಲಾಗುತ್ತದೆ.

ಭಾರತದಲ್ಲಿನ ಹಿಂದುಗಳು ಆಚರಿಸುವ ಪದ್ಧತಿಗಿಂತಲೂ ಕಟ್ಟುನಿಟ್ಟಾಗಿ ಆ ರಾಷ್ಟ್ರದ ಮುಸಲ್ಮಾನರು ಹಿಂದುಗಳ ಆಚರಣೆಗಳನ್ನು ಪಾಲಿಸುತ್ತಾರೆ. ಇದು ಅಚ್ಚರಿ ಎನಿಸಿದರೂ ನಿಜ. ಇಂದು ಕಟ್ಟರ್ ಇಸ್ಲಾಮಿಕ್ ರಾಷ್ಟ್ರವಾಗಿರುವ ಅದು ಹಿಂದೆ ಹಿಂದೂ ರಾಷ್ಟ್ರವಾಗಿತ್ತು. 12ನೇ ಶತಮಾನದವರೆಗೂ ಆ ದೇಶ ಹಿಂದೂ ರಾಷ್ಟ್ರವೇ ಆಗಿತ್ತು. 12ನೇ ಶತಮಾನದ ನಂತರ ಆ ದೇಶ ಮುಸಲ್ಮಾನ ರಾಷ್ಟ್ರವಾಗಿ ಮಾರ್ಪಾಡಾಯಿತು. ಆದರೆ ಮೊದಲಿನ ಆಚರಣೆಗಳನ್ನು ಮಾತ್ರ ಆ ಜನ ಬಿಡದೇ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಹಿಂದೂ ಧರ್ಮಕ್ಕೆ ತುಂಬಾ ಗೌರವ ಕೊಡುವ ಜನ ಅವರು ನಮ್ಮ ಋಷಿ ಮುನಿಗಳ ಬಗ್ಗೆ ನಾವು ತಿಳಿದದ್ದಕ್ಕಿಂತಲ 10 ಪಟ್ಟು ಹೆಚ್ಚು ಅಲ್ಲಿನ ಜನ ಅರಿತುಕೊಂಡಿದ್ದಾರೆ. ಅಲ್ಲಿ ಹಿಂದೂ ದೇವರುಗಳ ಆರಾಧನೆಯನ್ನು ಸಮಾನ್ಯವಾಗಿ ಕಾಣಬಹುದು. ಹಾಗೆಯೇ ಆ ರಾಷ್ಟ್ರ ಜಗತ್ತಿನ 4ನೇ ದೊಡ್ಡ ಹಿಂದೂ ರಾಷ್ಟ್ರವೂ ಹೌದು!!…

Leave A Reply

Your email address will not be published.