ನೆಲದ ಮೇಲೆ ಮೂತ್ರ ಮಾಡಿ, ನೆಕ್ಕುವಂತೆ ಕೆಲಸದಾಳಿಗೆ ಚಿತ್ರಹಿಂಸೆ : ಬಿಜೆಪಿ ನಾಯಕಿ ಅಮಾನತು, ವೀಡಿಯೋ ವೈರಲ್

ಜಾರ್ಖಂಡ್ ಬಿಜೆಪಿ (Jharkhand BJP) ನಾಯಕಿ, ಸೀಮಾ ಪತ್ರಾ (Seema Patra) ಅವರು ತನ್ನ ಮನೆಕೆಲಸದ ಸಹಾಯಕಿಗೆ ಕ್ರೂರವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ ವರದಿಯೊಂದು ಪ್ರಕಟವಾಗಿತ್ತು. ಮನೆಕೆಲಸದ ಸಹಾಯಕಿಗೆ ಕ್ರೂರವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ ಮಾಧ್ಯಮ ವರದಿಗಳನ್ನು ಗಮನಿಸಿದ ರಾಷ್ಟ್ರೀಯ ಮಹಿಳಾ ಆಯೋಗ (NCW)ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

 

ಪತ್ರಾ ಅವರು ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯೆ, ಜೊತೆಗೆ ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದ ರಾಜ್ಯ ಸಂಚಾಲಕರಾಗಿದ್ದಾರೆ. ಇವರ ಪತಿ ಮಹೇಶ್ವರ್ ಪಾತ್ರಾ ಅವರು ನಿವೃತ್ತ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿ. ಪತ್ರಾ ಅವರ ಬಗ್ಗೆ ನ್ಯಾಯಯುತ ತನಿಖೆಗಾಗಿ ಜಾರ್ಖಂಡ್ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿರುವುದಾಗಿ ಎನ್‌ಸಿಡಬ್ಲ್ಯು ಹೇಳಿದೆ. ಆರೋಪ ನಿಜವಾಗಿದ್ದರೆ ಮಹಿಳೆಯನ್ನು ಬಂಧಿಸುವಂತೆ ಹೇಳಲಾಗಿದೆ.

ಮನೆ ಕೆಲಸದ ಸಹಾಯಕಿಗೆ ಕಿರುಕುಳ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿದ್ದು ಪತ್ರಾ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಜಾರ್ಖಂಡ್ ಬಿಜೆಪಿ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್ ಅಮಾನತು ಆದೇಶ ಹೊರಡಿಸಿದ್ದಾರೆ.

ಪತ್ರಾ ಅವರು ಮನೆಗೆಲಸದವರ ಮೇಲೆ ಸುಮಾರು ಎಂಟು ವರ್ಷಗಳಿಂದ ಚಿತ್ರಹಿಂಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಬಿಸಿಯಾದ ‘ತವಾ’ ಮತ್ತು ಲೋಹದ ರಾಡ್‌ಗಳಿಂದ ಕೆಲಸದವಳಿಗೆ ಥಳಿಸಲಾಗಿದ್ದು, ನೆಲದಲ್ಲಿ ಬಿದ್ದ ಮೂತ್ರವನ್ನು ನೆಕ್ಕುವಂತೆ ಒತ್ತಾಯ ಮಾಡಲಾಗಿದೆಯಂತೆ. ವೈರಲ್ ವೀಡಿಯೊದಲ್ಲಿ ಮಹಿಳೆಯ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದು, ತನ್ನೊಂದಿಗೆ ಮಾತನಾಡುತ್ತಿರುವ ವ್ಯಕ್ತಿಗೆ ಏನೋ ಹೇಳಲು ಪ್ರಯತ್ನವನ್ನು ಮಾಡುತ್ತಿರುವುದು ಕಾಣುತ್ತದೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ ಆಕೆಯ ಹಲ್ಲುಗಳು ಮುರಿದುಹೋಗಿವೆ ಮತ್ತು ಆಕೆಯ ದೇಹದ ಮೇಲಿರುವ ಗಾಯಗಳು ಆಕೆ ಮೇಲೆ ಪದೇ ಪದೇ ಹಲ್ಲೆ ನಡೆದಿತ್ತು ಎಂಬುದನ್ನು ತೋರಿಸುತ್ತದೆ. .

ಲೈವ್ ಹಿಂದೂಸ್ತಾನ್ ಪ್ರಕಾರ, ಜಾರ್ಖಂಡ್‌ನ ಗುಲ್ಲಾ ನಿವಾಸಿ ಸುನೀತಾ ಸುಮಾರು 10 ವರ್ಷಗಳ ಹಿಂದೆ ಪತ್ರಾ ಮನೆಯಲ್ಲಿ ಕೆಲಸದಾಳಾಗಿ ಸೇರಿಕೊಂಡಿದ್ದಾರೆ. ನಂತರ ಆಕೆ ಪತ್ರಾ ಅವರ ಮಗಳು ವತ್ಸಲಾ ಜೊತೆ ದೆಹಲಿಗೆ ಹೋಗಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ವತ್ಸಲಾ ಮತ್ತು ಸುನೀತಾ ಇಬ್ಬರೂ ವಾಪಾಸ್ ರಾಂಚಿಗೆ ಬಂದಿದ್ದಾರೆ.

ಈ ಕೆಲಸದಾಕೆ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಪತ್ರಾ ಆಕೆಗೆ ಸುಮಾರು ಆರು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ಅವರು ಯಾಕೆ ಹಾಗೆ ಮಾಡುತ್ತಿದ್ದರು ಮತ್ತು ತಾನೇನು ತಪ್ಪು ಮಾಡಿದ್ದೇನೆ ಎಂದು ಆಕೆಗೂ ತಿಳಿದಿಲ್ಲ. ಹಾಗೇ ನೋಡೋಕೆ ಹೋದರೆ ಪತ್ರಾರ ಮಗ ಆಯುಷ್ಮಾನ್ ಸುನೀತಾಳನ್ನು ರಕ್ಷಿಸಿದ್ದಾನೆ ಎಂದು ವರದಿಯಾಗಿದೆ.

Leave A Reply

Your email address will not be published.