ತಾಯಿಯ ಸಮಾಧಿಗೆ ರಂಧ್ರ ಮಾಡಿ “ಅಮ್ಮಾ ಅಮ್ಮಾ” ಎಂದು ಕರೆಯುತ್ತಿರುವ ಮಗು | ಎಷ್ಟು ಕೂಗಿದರೂ ಓ ಎನ್ನದ ತಾಯಿಗಾಗಿ ದುಃಖಿಸುತ್ತಿರುವ ವೀಡಿಯೋ ವೈರಲ್

‘ಅಮ್ಮ’ ಎಂಬ ಪದವನ್ನು ವರ್ಣಿಸಲು ಅಸಾಧ್ಯ. ಅದೆಷ್ಟು ದೊಡ್ಡ ಪದ ಉಪಯೋಗಿಸಿದರೂ ಕಡಿಮೇನೆ. ತ್ಯಾಗಮಯಿ, ಕರುಣಾಮಯಿ ಹೀಗೆ ನೂರೆಂಟು ಹೆಸರೇ ಇದೆ ಆಕೆಗೆ. ಒಂದೊತ್ತು ಕಣ್ಣ ಮುಂದೆ ಅಮ್ಮ ಕಾಣಿಸದಿದ್ದರೂ, ಹುಡುಕಾಡುವ ಚಂಚಲ ಮನಸ್ಸು ಮಕ್ಕಳಿದ್ದಾಗಿರುತ್ತದೆ. ಅದು ಚಿಕ್ಕ ಮಕ್ಕಳು ಮಾತ್ರವಲ್ಲ. ಅದೆಷ್ಟೇ ದೊಡ್ಡವರಾದರೂ ಸರಿ ಎಲ್ಲಿಗಾದರೂ ಹೋಗಿ ಬಂದಾಗ ಮನೆಯಲ್ಲಿ ಅಮ್ಮ ಇಲ್ಲಂದ್ರೆ ಒಮ್ಮೆ ಆದ್ರೂ “ಅಮ್ಮ ಎಲ್ಲಿದ್ದೀ” ಎಂದು ಕೂಗದೆ ಇರಲು ಅಸಾಧ್ಯ.

ಇಂತಹ ಅಮ್ಮ ಇನ್ನೆಂದೂ ಇಲ್ಲ ಎಂದರೆ ಅದಕ್ಕಿಂತ ಭಯಾನಕ ಪರಿಸ್ಥಿತಿ ಯಾವುದು ಇಲ್ಲ. ತನ್ನ ಅಂಬೆಗಾಲಿಡುತ್ತ, ಪುಟ್ಟ ಪುಟ್ಟ ಹೆಜ್ಜೆ ಇಡುವ ಹಂತದಲ್ಲಿ ತನ್ನೊಂದಿಗೆ ಅಮ್ಮನೇ ಇಲ್ಲವಾದರೆ!.. ಕೇಳೋಕೆ ಮನಸ್ಸು ಭಾರವಾಗುವಾಗ, ಇಲ್ಲೊಂದು ಪಾಪು ನಿಜವಾಗಿಯೂ ಆ ನೋವು ಅನುಭವಿಸುತ್ತಿದೆ.

ಹೌದು. ಅಮ್ಮ ನ ಅಪ್ಪುಗೆ ಇಲ್ಲದೆ ಒಬ್ಬಂಟಿಯಾಗಿರುವ ಕಂದ ಅಮ್ಮನನ್ನು ಒಮ್ಮೆ ನೋಡಲು ಹಾತೋರೆಯುತ್ತಿದೆ. ಇಂತಹ ಒಂದು ಕಣ್ಣಲ್ಲಿ ನೀರು ತರಿಸುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಕೆಲ ದಿನಗಳ ಹಿಂದೆ ಮಗುವಿನ ತಾಯಿ ಮೃತಪಟ್ಟಿದ್ದರು. ಎರಡು ವರ್ಷದ ಮಗು ತನ್ನ ಅಜ್ಜಿಯನ್ನು ತನ್ನ ತಾಯಿ ಎಲ್ಲಿ ಎಂದು ಕೇಳಿದಾಗ, ಅವಳು ಭೂಮಿಯತ್ತ ತೋರಿಸಿ, ಆ ಸಮಾಧಿಯಲ್ಲಿ ಮಲಗಿದ್ದಾಳೆ ಎಂದು ತೋರಿಸಿದಳು. ಬಳಿಕ ಮಗುವಿನ ರೋದನೆ ಮಾತ್ರ ಎಂತಹ ಕಲ್ಲು ಹೃದಯವನ್ನೂ ಕಲ್ಲಾಗಿಸುತ್ತದೆ.

ಪುಟ್ಟ ಕಂದಮ್ಮ ತನ್ನ ತಾಯಿಯ ಸಮಾಧಿ ಬಳಿ ರಂಧ್ರ ಮಾಡಿ ‘ಅಮ್ಮಾ… ಅಮ್ಮಾ’ ಎಂದು ಕರೆದಿದೆ. ಎಷ್ಟು ಕರೆದರೂ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಬಾಲಕ ಅಳುತ್ತಾ ತನ್ನ ನೋವು ತೋಡಿಕೊಂಡಿದ್ದಾನೆ. ಅಮ್ಮನಿಗಾಗಿ ಪರಿತಪಿಸುತ್ತಿರುವ ದೃಶ್ಯ ಒಮ್ಮೆಗೆ ಮೌನವಾಗಿಸುತ್ತೆ.

ಇದು ಹಳೆಯ ವಿಡಿಯೋವಾಗಿದ್ದು, ಮತ್ತೊಮ್ಮೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟಿಜನ್‌ಗಳು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮಗುವಿನ ನೋವು ನೋಡಿ ನೆಟ್ಟಿಗರು ಕೂಡ ಕಣ್ಣೀರು ಹಾಕಿದ್ದಾರೆ. ಒಟ್ಟಾರೆ ಅಮ್ಮ ಒಮ್ಮೆ ಬಾ ಅನ್ನುವ ಆ ಮಗುವಿನ ಅಳಲು ಎಂತವರನ್ನೂ ಭಾವುಕರಾಗಿಸಿದೆ ಇರದು..

https://www.instagram.com/reel/Ch1hR61pWvj/?utm_source=ig_web_copy_link
Leave A Reply

Your email address will not be published.