BIG BREAKING NEWS: ಬಾಬರಿ ಮಸೀದಿ ಧ್ವಂಸ ಪ್ರಕರಣಗಳು ರದ್ದು: ಸುಪ್ರಿಂಕೋರ್ಟ್ ಮಹತ್ವದ ತೀರ್ಪು

ಬಾಬ್ರಿ ಮಸೀದಿ ಧ್ವಂಸದಿಂದ ಉಂಟಾದ ಎಲ್ಲಾ ಕೇಸ್ ಪ್ರಕ್ರಿಯೆಗಳ ತೀರ್ಪಿಗೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸದಿಂದ ಉದ್ಭವಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಮುಕ್ತಾಯಗೊಳಿಸಿದೆ. ಆ ಮೂಲಕ ಭಾರತ ದೇಶದ ಕಳೆದ 30 ವರ್ಷಗಳಿಂದ ಕಾರ್ತಿಕ ಅಂತ್ಯಕ್ಕೆ ಬರದಿದ್ದ ಕೇಸೊಂದು ಕೊನೆಗೂ ಮುಕ್ತಾಯ ಕಂಡಿದೆ.

ಯುಪಿ ಸರ್ಕಾರ ಮತ್ತು ಅದರ ಅಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಗಳ ಒಂದು ಬ್ಯಾಚ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ತೆರೆ ಎಳೆದಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸದಿಂದ ಉದ್ಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ನಿರ್ಧಾರ ತಗೊಂಡಿದೆ.

ಹಾಗೆನೇ, 2002ರಲ್ಲಿ ಗುಜರಾತ್ ನಲ್ಲಿ ನಡೆದ ಗೋಧ್ರಾ ನಂತರದ ಕೋಮುಗಲಭೆಗಳ ಹಿನ್ನೆಲೆಯಲ್ಲಿ ಆರಂಭಿಸಲಾದ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್‌ ಮುಕ್ತಾಯಗೊಳಿಸಿದೆ. ಸಮಯ ಕಳೆದಂತೆ ಮತ್ತು 2019 ರ ಅಯೋಧ್ಯೆ ಭೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಂಗನಿಂದನೆ ಪ್ರಕರಣಗಳು ಉಳಿಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಗೋಧ್ರಾ ನಂತರದ ಕೋಮುಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯದ ಆದೇಶದ ಮೇರೆಗೆ ಎಸ್‌ಐಟಿ ವಿಚಾರಣೆ ನಡೆಸಿದ 9 ಪ್ರಮುಖ ಪ್ರಕರಣಗಳಲ್ಲಿ 8 ರಲ್ಲಿ ಸಮಯ ಮತ್ತು ವಿಚಾರಣೆಗಳು ಮುಗಿಯುವುದರೊಂದಿಗೆ ಪ್ರಕರಣಗಳು ನಿಷ್ಪ್ರಯೋಜಕವಾಗಿವೆ ಎಂದು ನ್ಯಾಯಾಲಯ ಹೇಳಿದೆ. ಹಳೆಯ ನೀರು ಬೂದಿಗೆ ಬಿದ್ದಿದ್ದ ಪದೇ ಪದೇ ಎಳೆದಾಡುತ್ತಿದ್ದ ಕೇಸುಗಳ ಫೈಲ್ ಗಳು ಶಾಶ್ವತವಾಗಿ ಮುಚ್ಚಿಕೊಳ್ಳಲಿವೆ. ಆ ಕೇಸುಗಳ ಫೈಲುಗಳ ಜೊತೆಗೆ ಇರುವ ವೈರತ್ವ ಕೂಡ ಮುಚ್ಚಿ ಕೊಂಡು, ದೇಶ ಮುಂದಕ್ಕೆ ನೋಡಲಿ ಎನ್ನುವುದೇ ನಾಗರಿಕರ ಆಶಯವಾಗಿದೆ ಎನ್ನಬಹುದು.

Leave A Reply

Your email address will not be published.