ಸೇತುವೆಯಿಂದ ಗ್ರಾಮಕ್ಕೆ ಬಾರದ ಆಂಬ್ಯುಲೆನ್ಸ್, ಅರ್ಧ ಕಿ.ಮೀ ನಡೆದು ಬಂದ ಹೆರಿಗೆಗೆ ತಯಾರಾಗಿದ್ದ ಗರ್ಭಿಣಿ

ಕೆಟ್ಟ ರಸ್ತೆ ಹಾಗೂ ಹಳ್ಳದ ಸೇತುವೆ ಹಾಳಾದ ಹಿನ್ನೆಲೆ ಹೆರಿಗೆಗಾಗಿ ತುಂಬು ಗರ್ಭಿಣಿಯೊಬ್ಬರು ಆಂಬ್ಯುಲೆನ್ಸ್ ಹತ್ತಲು ಅರ್ಧ ಕಿ.ಮೀ ನಡೆದು ಬಂದ ಘಟನೆ ನಡೆದಿದೆ.

ಗರ್ಭಿಣಿ ಅಡಿವೆಮ್ಮಗೆ ವೈದ್ಯರು ಇಂದು ಹೆರಿಗೆಗೆ ದಿನಾಂಕ ನೀಡಿದ್ದರು. ರಸ್ತೆ ಹದಗೆಟ್ಟ ಹಿನ್ನೆಲೆ ಅಂಬ್ಯುಲೆನ್ಸ್ ಗ್ರಾಮಕ್ಕೆ ಬಾರದ ಹಿನ್ನೆಲೆ ಅರ್ಧ ಕಿ.ಮೀ ನಡೆದುಕೊಂಡು ಬಂದು ಅಂಬ್ಯುಲೆನ್ಸ್ ಹತ್ತಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ತುಪ್ಪದೂರಿನಲ್ಲಿ ಈ ಘಟನೆ ನಡೆದಿದೆ. ತುಪ್ಪದೂರಿನಿಂದ ಕಲ್ಲೂರು ಸರ್ಕಾರಿ ಆಸ್ಪತ್ರೆಗೆ ತೆರಳಲು ಗರ್ಭಿಣಿ ಹರಸಾಹಸ ಪಟ್ಟಿದ್ದಾರೆ.

ಗ್ರಾಮದಿಂದ ಸೇತುವೆವರೆಗೆ ಬೈಕ್ ನಲ್ಲಿ ಬಂದರೂ ಈ ರಸ್ತೆಯಲ್ಲಿ ಪ್ರಯಾಣ ಗರ್ಭಿಣಿಯರಿಗೆ ಅಪಾಯ. ಹೀಗಾಗಿ ತುಂಬು ಗರ್ಭಿಣಿ ನಡೆದುಕೊಂಡೇ ಬಂದು ಸೇತುವೆ ದಾಟಿ ಆಚೆ ನಿಂತಿದ್ದ ಅಂಬ್ಯುಲೆನ್ಸ್ ಏರಿದ್ದಾರೆ. ನಂತರ ಅಲ್ಲಿಂದ ಸುರಕ್ಷಿತವಾಗಿ ಅಂಬ್ಯುಲೆನ್ಸ್‌ನಲ್ಲಿ ಕಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಟ್ಟ ರಸ್ತೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಜನಪ್ರತಿನಿಧಿಗಳ ಬಳಿ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ.

Leave A Reply

Your email address will not be published.