ಲೆಹೆಂಗಾ ಬಟನ್ ಬಿಚ್ಚಿ ನೋಡಿ ಶಾಕ್ ಆದ ಪೊಲೀಸ್ರು..!
ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ನಿನ್ನೆ ಬೆಚ್ಚಿ ಬಿದ್ದಿದ್ದರು. ಲೆಹೆಂಗಾದ ಗುಂಡಿ ಬಿಚ್ಚಿದಾಗ, ಲೆಹೆಂಗಾ ಗುಂಡಿಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 41 ಲಕ್ಷ ರೂಪಾಯಿಯಷ್ಟು ಬೃಹತ್ ಮೌಲ್ಯದ ವಿದೇಶಿ ಕರೆನ್ಸಿ ಕೆಳಕ್ಕೆ ಬಿದ್ದಿತ್ತು.
ಬಂಧಿತ ಪ್ರಯಾಣಿಕ ಮಿಸಾಮ್ ರಾಝಾ ಎಂದು ಗುರುತಿಸಲಾಗಿದೆ. ಈತ ಸ್ಪೈಸ್‌ಜೆಟ್ ವಿಮಾನದಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಹಾಗೂ ವಿಮಾನ ನಿಲ್ದಾಣದ ಗುಪ್ತಚರ ಅಧಿಕಾರಿಗಳು ಟರ್ಮಿನಲ್-3 ರಲ್ಲಿ ನಿಂತಿದ್ದ ಈ ವ್ಯಕ್ತಿಯ ವರ್ನತೆಯೇ ಅನುಮಾನಕ್ಕೆ ಎಡೆ ಮಾಡಿ ಕೊಡುತ್ತಿತ್ತು. ಈತನ ಆ ಚಟುವಟಿಕೆಗಳನ್ನು ಗಮನಿಸಿ, ಆತನ ಮೇಲೆ ಅನುಮಾನ ಬಂದು ಆತನ ಲಗೇಜ್‌ಗಳನ್ನು ಪರಿಶೀಲಿಸಲಾಗಿದೆ. ಆಗ ವಿದೇಶಿ ಕರೆನ್ಸಿಗಳ ದೊಡ್ಡ ಮೊತ್ತ ಪೊಲೀಸರ ಕೈಗೆ ಸಿಕ್ಕಿದೆ.
ಬ್ಯಾಗ್‌ನಲ್ಲಿ ಇಟ್ಟ ಲೆಹೆಂಗಾ ಹೊರತೆಗೆದಾಗ 41 ಲಕ್ಷ ಮೌಲ್ಯದ 1,85,500 ಸೌದಿರಿಯಾಲ್‌ಗಳು ಲೆಹೆಂಗಾ ಬಟನ್‌ನಲ್ಲಿ ಇದ್ದದ್ದು ಕಂಡುಬಂದಿದೆ. ನಂತರ ಈನತನ್ನು ಚೆಕ್-ಇನ್ ಮತ್ತು ಇಮಿಗ್ರೇಷನ್ ಫಾರ್ಮಾಲಿಟಿಗಳನ್ನು ತೆರವುಗೊಳಿಸಿ ಸಿಐಎಸ್ಎಫ್ ಹಾಗೂ ವಿಮಾನ ನಿಲ್ದಾಣದಲ್ಲಿದ ಗುಪ್ತಚರರು ತಡೆಹಿಡಿದು ಕಸ್ಟಮ್ಸ್ ಕಚೇರಿಗೆ ಹೆಚ್ಚಿನ ತನಿಖೆಗಾಗಿ ಕರೆತರಲಾಗಿದೆ.