ಚಾಮರಾಜ್ ಪೇಟೆ ಮೈದಾನದ ಸಂಬಂಧಿಸಿದಂತೆ ಯಥಾ ಸ್ಥಿತಿ ಆದೇಶ ನಾವು ಸ್ವೀಕಾರ ಮಾಡ್ತೆವೆ | ವಿವಾದ ವಿವಾದವಾಗಿಯೇ ಉಳಿಯಿತು ಎಂದ ಮುತಾಲಿಕ್
ಧಾರವಾಡ: ಚಾಮರಾಜ್ ಪೇಟೆ ಮೈದಾನದ ಸಂಬಂಧಿಸಿದಂತೆ ನ್ಯಾಯಾಲಯದಿಂದ ಯಥಾ ಸ್ಥಿತಿ ಆದೇಶ ಆಗಿದೆ. ಆದೇಶವನ್ನು ನಾವು ಸ್ವೀಕಾರ ಮಾಡ್ತೆವೆ, ಆದರೆ ಈ ಸಮಸ್ಯೆ ಸಮಸ್ಯೆಯಾಗೇ ಉಳಿಯಿತು,ವಿವಾದ ವಿವಾದವಾಗಿ ಉಳಿಯಿತು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಈಗ ಧಾರವಾಡದಲ್ಲಿ ಮಾತನಾಡಿದ ಅವರು, ಇಲ್ಲಿ ದಾರಿ ತಪ್ಪಿಸುವ ವಾದ ನಡೆದಿವೆ, ಇದು ವಕ್ಫ ಬೋರ್ಡ್ ಸಂಬಂದವೇ ಇರಲಿಲ್ಲ ಎಂದರು. ಏಕಾಎಕಿ ವಕ್ಫ ಬೋರ್ಡ್ ಮಧ್ಯೆ ಎಂಟ್ರಿ ಆಗಿ ಸುಪ್ರೀಂ ಕೋರ್ಟ್ ಗೆ ದಾರಿ ತಪ್ಪಿಸುವ ವಾದ ಮಂಡಿಸಿ, 1991ರ ಪ್ರಕಾರ ಯಥಾಸ್ಥಿತಿ ಕಾಪಾಡುವ ವಾದ ಮಂಡಿಸಿದ್ದಾರೆ ಎಂದ ಮುತಾಲಿಕ್, ಅಲ್ಲಿ ಮಸೀದಿ, ಚರ್ಚ, ಮಂದಿರ ಇಲ್ಲ, ಮುಂಚೆ ಏನಿತ್ತು ? ಅದು ರೆಸಲ್ಯುಷನ್ ಪಾಸಾಗಿತ್ತು ಎಂದರು.
ಇದೊಂದು ಕುತಂತ್ರ, ಕಾಂಗ್ರೆಸ್ ಹಿರಿಯ ವಕೀಲ ಕಪಿಲ್ ಸಿಬಲ್ ನ ಕುತಂತ್ರ ಇದು. ಕಾಂಗ್ರೆಸ್ ಕುತಂತ್ರ ಇದು ಎಂದ ಅವರು, ಇವರಿಗೆ ಸೌಹಾರ್ದ ಬೇಡ, ಶಾಂತಿ ಬೇಡ. ವಕ್ಫ ಬೋರ್ಡ್ ಹಾಗೂ ಜಮೀರ್ ಅಹ್ಮದ್ ವಿವಾದ ಮಾಡಿ ಇಟ್ಟಿದ್ದಾರೆ, ಇದಕ್ಕೆಲ್ಲ ಕಾಂಗ್ರೆಸ್ ಕಾರಣ ಎಂದರು.
ನೀವು ಗಣೇಶ ವಿರೋಧಿ, ಹಿಂದೂ ವಿರೋಧಿ, ಸ್ವಾತಂತ್ರ್ಯ ವಿರೋಧಿ, 1893 ರಲ್ಲಿ ಸಾರ್ವಜನಿಕ ಗಣೇಶ ಆರಂಭ ಮಾಡಿದ್ದು ತಿಲಕ್ ಅವರು, ಆಗ ಬ್ರಿಟಿಷರು ಇದನ್ನ ತಡೆಯಲಿಲ್ಲ ಎಂದ ಮುತಾಲಿಕ್, ಬ್ರಿಟಿಷರ ಸಮಯದಲ್ಲಿ ಗಣೇಶೋತ್ಸವಕ್ಕೆ ಮುಕ್ತ ವಾತಾವರಣ ಇತ್ತು, ಇವತ್ತು ಕಾಂಗ್ರೆಸ್ ಹಾಗೂ ಮುಸ್ಲಿಮರಿಂದ ವಕ್ಫ ಬೋರ್ಡ್ ದಿಂದ ತಡೆಯುವ ಕೆಲಸ ನಡೆದಿದೆ. ಬ್ರಿಟಿಷರೇ ಒಳ್ಳೆಯವರು ಇದ್ದರು ಎಂದು ವ್ಯಂಗ್ಯ ಆಡಿದ್ದಾರೆ ಮುತಾಲಿಕ್.
ಭಾರತೀಯ ಸಮಾಜದಲ್ಲಿ ನಮಗೆ ಸ್ವಾತಂತ್ರ್ಯ ಇಲ್ಲ ಎನ್ನುವುದು ಈಗ ಬಹಳ ನೋವಿನ ಸಂಗತಿ. ಇನ್ನು ಒಂದು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಹೈಕೋರ್ಟ್ ಗೆ ಅಪಿಲ್ ಮಾಡಬಹುದು ಎಂದಿದ್ದಾರೆ ಎಂದ ಮುತಾಲಿಕ್, ಸರ್ಕಾರ ಕೂಡಲೇ ರಾತ್ರಿ 12 ಗಂಟೆವರೆಗೆ ವಾದ ಮಾಡಬಹುದು. ನಾಳೆ ಗಣೇಶ ಹಬ್ಬ ಆಚರಣೆ ಮಾಡಲು ಅವಕಾಶ ಕೊಡಬೇಕು ಎಂದಿದ್ದಾರೆ ಪ್ರಮೋದ್ ಮುತಾಲಿಕ್.