‘ಹೆಬ್ಬುಲಿ’ ನಟಿಯ ಖಾಸಗಿ ವೀಡಿಯೋ ಲೀಕ್ ಮಾಡುವ ಬೆದರಿಕೆ: ಬಾಯ್‌ಫ್ರೆಂಡ್ ವಿರುದ್ಧ ದೂರು

ದಕ್ಷಿಣ ಚಿತ್ರರಂಗದ ಹೆಸರಾಂತ ನಟಿ. ಅಮಲಾ ಪೌಲ್. ಸ್ನಿಗ್ಧ ಸೌಂದರ್ಯ ಹೊಂದಿರುವ ಈ ನಟಿ ಯಾವ ಪಾತ್ರಕ್ಕೂ ಸೈ ಅನಿಸುವಂತೆ ನಟಿಸುವವಳು. ಈಕೆಗೆ ಅಪಾರ ಅಭಿಮಾನಿ ಬಳಗವಿದೆ. ಕನ್ನಡದಲ್ಲಿ
‘ಹೆಬ್ಬುಲಿ’ ಚಿತ್ರದಲ್ಲಿ ನಟಿಸಿದ್ದ ತಮಿಳು ನಟಿ ಅಮಲಾ ಪೌಲ್ ಈಗ ದಿಢೀರನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೆಲ ದಿನಗಳಿಂದ ನನ್ನ ಮಾಜಿ ಬಾಯ್‌ಫ್ರೆಂಡ್ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಾರೆ. ನಟಿಯ ದೂರಿನ ಹಿನ್ನೆಲೆಯಲ್ಲಿ ಆಕೆಯ ಮಾಜಿ ಬಾಯ್‌ಫ್ರೆಂಡ್ ಭವಿಂದರ್ ಸಿಂಗ್‌ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

ಈ ಹಿಂದೆ ತಮಿಳು ಸಿನಿಮಾ ನಿರ್ದೇಶಕ ಎ.ಎಲ್ ವಿಜಯ್‌ನ ಮದುವೆ ಆಗಿದ್ದ ಅಮಲಾ ನಂತರ ಭಿನ್ನಾಭಿಪ್ರಾಯದಿಂದ ಮೊದಲ ಪತಿಯಿಂದ ಡಿವೋರ್ಸ್ ಪಡೆದಿದ್ದರು. 2018ರಲ್ಲಿ ನಟಿಗೆ ಭವಿಂದ‌ರ್ ಸಿಂಗ್ ಪರಿಚಯವಾಗಿತ್ತು. ಇಬ್ಬರು ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದರು. ಆದರೆ ಸಿನಿಮಾ ನಿರ್ಮಾಣ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಇಬ್ಬರೂ ದೂರಾಗಿದ್ದರು. ಇದೀಗ ಅಮಲಾ ಇದ್ದಕ್ಕಿದ್ದಂತೆ ಮಾಜಿ ಬಾಯ್‌ಫ್ರೆಂಡ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

” ಭವಿಂದ‌ರ್ ಸಿಂಗ್ ಬೆದರಿಸುತ್ತಿದ್ದಾನೆ. ನಾನು ಕೇಳಿದಷ್ಟು ಹಣ ಕೊಡಬೇಕು, ನಾನು ಹೇಳಿದಂತೆ ಕೇಳಬೇಕು, ಒಪ್ಪದೇ ಇದ್ದರೆ ನಿನ್ನ ಪ್ರೈವೇಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡುವುದಾಗಿ ಬೆದರಿಸುತ್ತಿದ್ದಾನೆ” ಎಂದು ಅಮಲಾ ಆರೋಪಿಸಿದ್ದಾರೆ. ತಮಿಳುನಾಡಿನ ವಿಲ್ಲುಪುರಂ ಪೊಲೀಸರು ಚೀಟಿಂಗ್ ಕೇಸ್ ದಾಖಲಿಸಿಕೊಂಡು ಸೆಕ್ಷನ್ 16ರ ಅಡಿಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆತನ 12 ಮಂದಿ ಸ್ನೇಹಿತರಿಗಾಗಿ ಪೊಲೀಸರ ಹುಡುಕಾಟ ನಡೀತಿದೆ.

ಅಮಲಾ ಪೌಲ್ ಹಾಗೂ ಭವಿಂದರ್ ಸಿಂಗ್ ಮದುವೆ 2 ವರ್ಷಗಳ ಹಿಂದೆ ಆಗಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿತ್ತು. ಅದಕ್ಕೆ ಕಾರಣವಾಗಿದ್ದು ಅವರಿಬ್ಬರು ಮದುವೆ ಮಾಡಿಕೊಂಡಂತೆ ಭವಿಂದರ್ ಸಿಂಗ್ ಪೋಸ್ಟ್ ಮಾಡಿದ್ದ ಫೋಟೊಗಳು. ಕೂಡಲೇ ಆತ ಆ ಫೋಟೊಗಳನ್ನು ಡಿಲೀಟ್ ಮಾಡಿದರೂ ಅಷ್ಟರಲ್ಲಾಗಲೇ ಅದು ವೈರಲ್ ಆಗಿತ್ತು. ಆದರೆ ಅಮಲಾ ಸಂದರ್ಶನವೊಂದರಲ್ಲಿ ಮಾತನಾಡಿ ನಾನು ಎರಡನೇ ಮದುವೆ ಆಗಿಲ್ಲ ಎಂದು ಹೇಳಿಕೆ ನೀಡಿದ್ದರು.

ಕಾಲಿವುಡ್ ನಟಿ ಅಮಲಾ ಪೌಲ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ನಿರ್ಮಾಪಕಿಯಾಗಿಯೂ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

.

Leave A Reply

Your email address will not be published.