ಸುಳ್ಯ : ಮತ್ತೊಂದು ಜಲಸ್ಪೋಟ ,ರಾತ್ರೋ ರಾತ್ರಿ ಊರು ತೊರೆದ ಗ್ರಾಮಸ್ಥರು

ಸುಳ್ಯ ತಾಲೂಕಿನಲ್ಲಿ ಮತ್ತೊಂದು ಜಲಸ್ಪೋಟ ಸಂಭವಿಸಿದ್ದು, ಕಲ್ಮಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ಜಲಪ್ರವಾಹ ಉಂಟಾಗಿದೆ. ಇತ್ತ ಮಡಿಕೇರಿ ತಾಲೂಕಿನ ಸಂಪಾಜೆ, ಕೊಯನಾಡು ಭಾಗದಲ್ಲೂ ಭಾರೀ ಪ್ರವಾಹ ತಲೆದೋರಿದ್ದು, ರಾತ್ರೋರಾತ್ರಿ ಗ್ರಾಮಸ್ಥರು ಜಾಗ ತೊರೆದಿದ್ದಾರೆ.

 

ಮಾಹಿತಿಗಳ ಪ್ರಕಾರ ಕಲ್ಮಕಾರು ಪರಿಸರದ ಗುಳಿಕ್ಕಾನ, ಹಾಗೂ ಕಡಮಕಲ್ ಎಸ್ಟೇಟ್ ಭಾಗದಲ್ಲಿ ಜಲಸ್ಪೋಟ ಸಂಭವಿಸಿದೆ. ಇದರಿಂದಾಗಿ ಭಾರೀ ಪ್ರಮಾಣದ ಮರಗಳು ನೀರ ಅಬ್ಬರಕ್ಕೆ ಕೊಚ್ಚಿ ಬಂದಿವೆ.

Leave A Reply

Your email address will not be published.