ಧರ್ಮಸ್ಥಳ : ಶಿವಲಿಂಗೇಗೌಡ ರಾಗಿ ಕಳ್ಳ – ಬಿಜೆಪಿ ಆರೋಪ | ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ಶಾಸಕ

Share the Article

ಧರ್ಮಸ್ಥಳ: ಶಿವಲಿಂಗೇಗೌಡ ರಾಗಿ ಕಳ್ಳ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದ ಹಿನ್ನೆಲೆ ಧರ್ಮಸ್ಥಳಕ್ಕೆ ಆಗಮಿಸಿ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಆಣೆ ಪ್ರಮಾಣ ಮಾಡಿದ್ದಾರೆ.

ಶಿವಲಿಂಗೇಗೌಡ ‘ರಾಗಿ ಕಳ್ಳ’ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದ್ದರು. ಈ ಆರೋಪಕ್ಕೆ ಧರ್ಮಸ್ಥಳ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡುವುದಾಗಿ ಶಿವಲಿಂಗೇ ಗೌಡ ಹೇಳಿಕೆ ನೀಡಿದ್ದರು.

ಅದರಂತೆ ಧರ್ಮಸ್ಥಳಕ್ಕೆ ಆಗಮಿಸಿದ ಅವರು ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ನಾನ ಮಾಡಿದ ನಂತರ ಡಾ.ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದರು. ಬಳಿಕ ಶ್ರೀ ಮಂಜುನಾಥನ ಮುಂದೆ ಆಣೆ ಪ್ರಮಾಣ ಮಾಡಿದ್ರು.

Leave A Reply