ಇಲ್ಲಿದೆ ನೋಡಿ ಅತೀ ಸುಂದರವಾದ ಬಾತುಕೋಳಿ ; ಪೇಂಟಿಂಗ್ ನಂತೆಯೇ ಕಾಣುವ ಇದರ ವೀಡಿಯೋವನ್ನು ನೀವೊಮ್ಮೆ ನೋಡಲೇಬೇಕು..
ಪ್ರಪಂಚ ಅನ್ನೋದು ಅದೆಷ್ಟು ವಿಶಾಲವಾಗಿದೆಯೋ, ಅದರಂತೆ ನಾವು ಯಾವ ರೀತಿಲಿ ವೀಕ್ಷಿಸುತ್ತೇವೆ ಎಂಬುದು ಸುಂದರವಾದ ಪರಿಸರವನ್ನು ವರ್ಣಿಸುತ್ತದೆ. ಇಲ್ಲಿ ನಮ್ಮ ಕಣ್ಣು ತೃಪ್ತಿ ಪಡುವಂತಹ ಅದೆಷ್ಟೋ ಜೀವ ರಾಶಿಗಳೇ ಇವೆ. ಕೆಲವೊಂದು ಮಾಮೂಲಾಗಿದ್ದಾರೆ. ಇನ್ನೂ ಕೆಲವು ವಿಚಿತ್ರವಾಗಿರುತ್ತೆ. ಅದೆಷ್ಟೋ ಜನರು ನೋಡದೆ ಇರುವಂತಹ ಜೀವಿಗಳು ಕೂಡ ಇವೆ ಈ ಭೂಮಿ ಮೇಲೆ.
ಅದರಲ್ಲಿ ಪ್ರಕೃತಿಯ ಸುಂದರ ಸೃಷ್ಟಿಗಳಲ್ಲಿ ಬಾತುಕೋಳಿ ಕೂಡ ಒಂದು. ಅವುಗಳಲ್ಲಿಯೂ ಹಲವು ಜಾತಿಗಳಿವೆ. ಒಂದೊಂದು ಬಾತುಕೋಳಿಯೂ ಒಂದೊಂದು ರೀತಿ ಇರುತ್ತದೆ. ಇಂತಹ ಸುಂದರವಾದ ಬಾತುಕೋಳಿಗಳ ಪೈಕಿ ನಾವು ತೋರಿಸಲು ಹೊರಟಿರುವುದು ಅತ್ಯಂತ ಸುಂದರವಾದ ಬಾತುಕೋಳಿ. ಹೌದು. ನೋಡಲು ಪೈಂಟಿಂಗ್ ನಂತೆಯೇ ಕಂಡರೂ ಇದೊಂದು ಜಾತಿಯ ಬಾತುಕೋಳಿ.
ಈ ವರ್ಣರಂಜಿತ ಬಾತುಕೋಳಿಯನ್ನ ಮ್ಯಾಂಡರಿಯನ್ ಬಾತುಕೋಳಿಗಳು ಎಂದು ಕರೆಯಲಾಗುತ್ತದೆ. ಮ್ಯಾಂಡರಿನ್ ಬಾತುಕೋಳಿಗಳನ್ನ ವಿಶ್ವದ ಅತ್ಯಂತ ಸುಂದರವಾದ ಬಾತುಕೋಳಿ ಎಂದು ಪರಿಗಣಿಸಲಾಗಿದೆ. ಯಾಕಂದ್ರೆ, ಅವುಗಳ ಸೌಂದರ್ಯವು ವಿಭಿನ್ನವಾಗಿದೆ. ಕ್ಯಾನ್ವಾಸ್ನಂತೆ, ಅವುಗಳನ್ನ ವಿವಿಧ ಬಣ್ಣಗಳ ವಿವಿಧ ಛಾಯೆಗಳೊಂದಿಗೆ ಅಲಂಕರಿಸಲಾಗುತ್ತದೆ.
ಮೂಲತಃ ಚೀನಾ ಮತ್ತು ಜಪಾನ್ ಸೇರಿದ್ದು, ಇವುಗಳು ಹೆಚ್ಚಾಗಿ ಅಲ್ಲೇ ಕಂಡು ಬರುತ್ತವೆ. ಮ್ಯಾಂಡರಿನ್ ಬಾತುಕೋಳಿಗಳು ಸಣ್ಣ ಕೊಳಗಳು, ಸರೋವರಗಳಲ್ಲಿ ವಾಸಿಸಲು ಇಷ್ಟಪಡುತ್ತವೆ. ಇನ್ನು ಕುತೂಹಲಕಾರಿಯಾಗಿ, ಅವುಗಳ ರೆಕ್ಕೆಗಳು ಎಷ್ಟು ಪ್ರಬಲವಾಗಿವೆ ಅಂದ್ರೆ ಅವು ಮರಗಳ ಮೇಲೆ ಹಾರಬಲ್ಲವು. ಮೇಲ್ನೋಟಕ್ಕೆ ಸೇಮ್ ಚಿತ್ರ ಬಿಡಿಸಿದಂತೆಯೇ ಕಾಣುವ ಈ ಬ್ಯೂಟಿಫುಲ್ ಬರ್ಡ್ ಅನ್ನು ನೋಡುವುದೇ ಕಣ್ಣಿಗೆ ತೃಪ್ತಿ..
ಈ ಬಾತುಕೋಳಿಗಳು ಕೆಲ ದೇಶಗಳಲ್ಲಿ ಪ್ರೀತಿ ಮತ್ತು ನಿಷ್ಠೆಯ ಸಂಕೇತವಾಗಿವೆ. ಏಕೆಂದರೆ ಇವು ಏಕಸಂಗಾತಿಯನ್ನು ಹೊಂದಿರುತ್ತವೆ. ಸುಂದರವಾದ ಈ ಪಕ್ಷಿಯ ಮೂಲ ಪೂರ್ವ ಏಷ್ಯಾ. ದಟ್ಟವಾದ ಕಾಡು, ಪೊದೆಗಳು, ಅರಣ್ಯಗಳಲ್ಲಿ ಇವು ವಾಸಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಚೀನಾ ಮತ್ತು ರಷ್ಯಾದಲ್ಲಿ ಇವುಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ.