ಭಾರತ vs ಪಾಕ್ ಪಂದ್ಯ | ʻತ್ರಿವರ್ಣ ಧ್ವಜʼ ಹಿಡಿಯಲು ನಿರಾಕರಿಸಿದ ಅಮಿತ್ ಶಾ ಪುತ್ರ ʻಜಯ್ ಶಾʼ | ವೀಡಿಯೋ ವೈರಲ್

Share the Article

ದುಬೈ ನಲ್ಲಿ ನಡೆಯುತ್ತಿದ್ದ ಭಾರತ ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಎಡವಟ್ಟೊಂದು ಆದ ಘಟನೆಯೊಂದು ವೈರಲ್ ಆಗಿದೆ. ಹೌದು, 2022ರ ಏಷ್ಯಾಕಪ್‌ನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ನಿರಾಕರಿಸಿದ್ದು, ಇದೀಗ ವಿವಾದಕ್ಕೆ ಸಿಲುಕಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿಯಾಗಿರುವ ಜಯ್ ಶಾ ಏಷ್ಯಾಕಪ್‌ನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ತ್ರಿವರ್ಣ ಧ್ವಜ ಹಿಡಿಯಲು ನಿರಾಕರಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಿವಾದಕ್ಕೆ ಸಿಲುಕಿದ್ದಾರೆ.

https://twitter.com/ysathishreddy/status/1563957920668479489?ref_src=twsrc%5Etfw%7Ctwcamp%5Etweetembed%7Ctwterm%5E1563957920668479489%7Ctwgr%5Ee67b25856b0d8929ecba596df63b0bfcf556720d%7Ctwcon%5Es1_c10&ref_url=
Leave A Reply