ರಾಜ್ಯ ಸರಕಾರದಿಂದ ಮಹಿಳೆಯರಿಗೆ ಗೌರಿ ಗಣೇಶ ಹಬ್ಬಕ್ಕೆ ಗಿಫ್ಟ್ ಗಳ ಸರಮಾಲೆ | ಸಖಿ ಭಾಗ್ಯ ಯೋಜನೆ ಜಾರಿ
ರಾಜ್ಯ ಸರಕಾರ ಮಹಿಳೆಯರಿಗೆ ವಿವಿಧ ಉದ್ಯೋಗಾವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಲುವಾಗಿ ಗ್ರಾಮಾಣ ಪ್ರದೇಶದ ಮಹಿಳೆಯರಿಗೆಗೆ ಗೌರಿ-ಗಣೇಶ ಹಬ್ಬದಂದು ಬಾಗಿನ ಅರ್ಪಿಸೋದಕ್ಕೆ ಮುಂದಾಗಿದೆ.
ಗ್ರಾಮೀಣ ಜನರ ಜೀವನೋಪಾಯ ವೃದ್ಧಿ ಹಾಗೂ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸೋ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಅದಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡೋ ಸಲುವಾಗಿ ಗಮನ ಹರಿಸಲಾಗುತ್ತಿದೆ. ಆ ಭಾಗವಾಗಿಯೇ ಪಂಚಾಯ್ತಿಗೆ 5 ಜನ ಸಖಿಯರನ್ನು ನೇಮಕ ಮಾಡಲಾಗುತ್ತಿದೆ. ಕೃಷಿ ಸಖಿಯರ ತರಬೇತಿಯನ್ನು ಸೆಪ್ಟೆಂಬರ್ 5ರಂದು ಆರಂಭಿಸಲಾಗುತ್ತದೆ ಎಂದು ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಜೀವನೋಪಾಯ ಅಭಿಯಾನ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
ಅಂದಹಾಗೇ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಮಾಹಿತಿ ನೀಡೋ ಕೆಲಸವನ್ನು ಗ್ರಾಮಪಂಚಾಯ್ತಿಗೆ ನೇಮಕಗೊಳ್ಳುವಂತ ಇಬ್ಬರು ಸಖಿಯರು ಮಾಡಲಿದ್ದಾರೆ. ಈ ಕಾರಣದಿಂದಾಗಿಯೇ ತರಬೇತಿ ನೀಡಿದ ಬಳಿಕ ಇಬ್ಬರು ಸಖಿಯರನ್ನು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನೇಮಕ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಗೌರಿ ಹಬ್ಬದಂದು ಬಾಗಿನದ ರೀತಿಯಲ್ಲಿ ಸಖಿ ಭಾಗ್ಯವನ್ನು ಅನುಷ್ಠಾನಗೊಳಿಸುತ್ತಿದೆ.