ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಹೊಸ ಬದಲಾವಣೆ ; ವಾಹನದ ನಂಬರ್ ಪ್ಲೇಟ್ ನಿಂದಲೇ ಟೋಲ್ ಕಡಿತ!

Share the Article

ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದ್ದು, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ.

ಹೌದು. ಇತ್ತೀಚಿನ ದಿನಗಳಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ, ಶೀಘ್ರದಲ್ಲೇ ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಬದಲಾವಣೆಗಳನ್ನು ತರುವ ಬಗ್ಗೆ ಪ್ರಸ್ತಾಪಿಸಿದ್ದು, ವಾಹನ ಚಾಲಕರಿಂದ ಟೋಲ್ ತೆರಿಗೆ ಸಂಗ್ರಹಣೆ ಪ್ರಕ್ರಿಯೆಯಲ್ಲಿ ಹೊಸ ವಿಧಾನ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಖಚಿತಪಡಿಸಿದ್ದಾರೆ.

ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳಾದ್ಯಂತ ಇರುವ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಲು ಸರ್ಕಾರ ಕೆಲಸ ಮಾಡುತ್ತಿದೆ. ಟೋಲ್ ತೆರಿಗೆ ಸಂಗ್ರಹಕ್ಕಾಗಿ ಸಚಿವಾಲಯವು ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳನ್ನು ಅವಲಂಬಿಸುವ ಯೋಜನೆ ರೂಪಿಸುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ. ಅವರ ಪ್ರಕಾರ, ಈ ಕ್ಯಾಮೆರಾಗಳಿಗೆ ವಾಹನಗಳ ನಂಬರ್ ಪ್ಲೇಟ್ಗಳನ್ನು ಓದಲು ಸಾಧ್ಯವಾಗುತ್ತದೆ ಮತ್ತು ಕಾರು ಚಾಲಕನ ಅಧಿಕೃತ ಮತ್ತು ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಟೋಲ್ ಮೊತ್ತವನ್ನು ಕಡಿತಗೊಳಿಸುತ್ತದೆ.

ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಗಡ್ಕರಿ ಅವರು, 2019 ರಿಂದ ಮಾರಾಟವಾಗುವ ಕಾರುಗಳು ಕಂಪನಿಯು ಅಳವಡಿಸಿದ ನಂಬರ್ ಪ್ಲೇಟ್ಗಳೊಂದಿಗೆ ಬರುತ್ತಿವೆ. ಈ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳ ಮೂಲಕ ಟೋಲ್ ಮೊತ್ತವನ್ನು ಕಡಿತಗೊಳಿಸುವ ಪ್ರಾಯೋಗಿಕ ಯೋಜನೆಯಲ್ಲಿ ಸರ್ಕಾರ ಈಗಾಗಲೇ ಕೆಲಸ ಮಾಡಲು ಪ್ರಾರಂಭಿಸಿದೆ. ಟೋಲ್ ಸ್ಥಳದಲ್ಲಿ ಜನರು ಕಾಯುವುದನ್ನು ತಪ್ಪಿಸಲು ಮತ್ತು ಟೋಲ್ ಮೊತ್ತವನ್ನು ಪಾವತಿಸುವುದನ್ನು ತಡೆಯುವ ಚಾಲಕರಿಗೆ ದಂಡ ವಿಧಿಸಲು ಸರ್ಕಾರ ಹೊಸ ಕಾನೂನನ್ನು ಪರಿಚಯಿಸಲಿದೆ ಎಂದು ಹೇಳಿದ್ದರು. ಈ ಹೊಸ ಟೋಲ್ ತೆರಿಗೆ ಕಡಿತ ಪ್ರಕ್ರಿಯೆಯನ್ನು ಸುಲಭಗೊಳಿಸಲು 2019 ರ ಮೊದಲು ಮಾರಾಟವಾದ ಕಾರುಗಳಿಗೆ ಈ ಹೊಸ-ಪೀಳಿಗೆಯ ನಂಬರ್ ಪ್ಲೇಟ್ಗಳನ್ನು ಸರ್ಕಾರವು ಕಡ್ಡಾಯಗೊಳಿಸುತ್ತದೆ.

Leave A Reply