ನೀವೂ ಕೂಡ ಮಿಶೋ ಆ್ಯಪ್ ಬಳಕೆದಾರರ? ; ಹಾಗಿದ್ರೆ ಇರಲಿ ಎಚ್ಚರ!
ಆನ್ಲೈನ್ ಆರ್ಡರ್ ಗಾಗಿ ಪ್ರತಿಯೊಬ್ಬರೂ ಬಳಸೋ ಆಪ್ ಮಿಶೋ ಆ್ಯಪ್. ಪ್ರತಿಯೊಂದು ವಸ್ತುವೂ ಲಭ್ಯವಾಗುವುದರಿಂದ ಹೆಚ್ಚಿನ ಜನರು ಬಳಸುತ್ತಾರೆ. ಆದ್ರೆ, ಬಳಕೆದಾರರೇ ಎಚ್ಚರ, ಮಿಶೋ ಹೆಸರು ಬಳಸಿಕೊಂಡು ಕೂಡ ಕೆಲವು ಕಿರಾತಕರು ದಂಧೆಗೆ ಇಳಿದಿದ್ದಾರೆ.
ಹೌದು ಒಂದು ಜಿ.ಕೆ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ಮೀಶೋ ಗ್ರಾಹಕರಿಗೆ ಸ್ಪೀಡ್ ಪೋಸ್ಟ್ ಮೂಲಕ ಕೂಪನ್ ಮನೆ ಮನೆಗೆ ಪತ್ರ ರವಾನಿಸಿದ್ದಾರೆ. ಇದನ್ನೇ ಬಂಡವಾಳವಾಗಿಸಿ ಖದೀಮರ ತಂಡವೊಂದು ಸದ್ದಿಲ್ಲದೆ ವಂಚನಾ ಜಾಲ ವ್ಯಾಪಿಸಿದೆ.
“ನೀವೂ ನಮ್ಮ ಅದೃಷ್ಟ ಗ್ರಾಹಕರಾಗಿದ್ದೀರಿ, ಮೀಶೋ ಸಂಸ್ಥಾಪನಾ ವಾರ್ಷಿಕ ಮಹೋತ್ಸವದ ಅಂಗವಾಗಿ ನಾವು ಅದೃಷ್ಟಶಾಲಿ ಗ್ರಾಹಕರನ್ನು ಅದೃಷ್ಟ ಪರೀಕ್ಷೆಗೆ ಒಳಪಡಿಸಲಿದ್ದೇವೆ. ಅದರಂತೆ ನಮ್ಮ ಪ್ರಿಯಾ ಗ್ರಾಹಕರಾದ ತಾವು ಈ ಯೋಜನೆಯಲ್ಲಿ ಅವಕಾಶವನ್ನು ಹೊಂದಿದ್ದೀರಿ ನಾವು ನಿಮಗೆ ಈ ಅರ್ಜಿ ಜೊತೆ, ವಿಶೇಷ ಕೂಪನ್ ಕಳಿಸುತ್ತಿದ್ದೇವೆ ಕೂಪನ್ ಸ್ಕೆಚ್ ಮಾಡಿ ಬಹುಮಾನ ಗೆಲ್ಲಿರಿ” ಎಂಬ ಪತ್ರವನ್ನು ಕಳುಹಿಸಲಾಗಿದೆ.
ಅವರು ಕಳುಹಿಸಿದ ಕೂಪನ್ ಸ್ಕೆಚ್ ನಲ್ಲಿ ಗ್ರಾಹಕರಿಗೆ, ಹತ್ತೋ..ಹದಿನೈದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು, ಕೆಲವರಿಗೆ ಕಡಿಮೆ ಮೊತ್ತ ಬರುವ ಕೂಪನ್ ಕಳುಹಿಸಿ ಕೊಡಲಾಗುತ್ತಿದೆ. ಅಲ್ಲದೆ “ಕೂಪನ್ ಕೋಡ್ ನಮೂದಿಸಿ ನಾವು ಕಳುಹಿಸಿದ ಅರ್ಜಿ ಭರ್ತಿ ಮಾಡಿ ಎಸ್ ಎಂ ಎಸ್ ಮಾಡಿ” ಎಂದು ಕೆಲವು ದೂರವಾಣಿ ನಂಬರ್ ನೀಡಲಾಗಿದೆ. ಕಸ್ಟಮರ್ ಹೆಲ್ತ್ ಲೈನ್ ಎಂದು ಮತ್ತೆರಡು ಪೋನ್ ನಂಬರ್ ನೀಡಲಾಗಿದೆ.
ಲಕ್ಕಿ ಕೂಪನ್ ಅಂದುಕೊಂಡು ಎಲ್ಲಾದರು ಗ್ರಾಹಕರು ಎಸ್ ಎಂ ಎಸ್ ಅಥವಾ ಕಸ್ಟಮರ್ ಕೇರ್ ಕರೆ ಮಾಡಿದರೆ ಮತ್ತೆ ನೀವೂ ಅವರ ಮೋಸದ ಜಾಲಕ್ಕೆ ಬೀಳುತ್ತೀರಿ. ಬಳಿಕ ಅದೃಷ್ಟಶಾಲಿ ಗ್ರಾಹಕ ನೀವೊಬ್ಬರೆ ಎಂದು ಹುರಿದುಂಬಿಸಲು ಪ್ರಾರಂಭಿಸುತ್ತಾರೆ. “ನಿಮ್ಮ ಎಲ್ಲಾ ಬ್ಯಾಂಕ್ ದಾಖಲೆ ಪರಿಶೀಲಿಸಲಾಗಿದೆ, ಎಲ್ಲವೂ ಸರಿಯಿದೆ, ಇಷ್ಟು ಹಣ ನಿಮ್ಮ ಎಕೌಂಟಿಗೆ ಹಣ ಜಮಾವಣೆಯಾಗಲಿದೆ, ಆದರೆ ನಿಮ್ಮ ಎಕೌಂಟಲ್ಲಿ ಕನಿಷ್ಟ ಒಂದು ಮೊತ್ತ 60- 70 ಸಾವಿರ ಇರಬೇಕಾಗುತ್ತದೆ” ಎಂದು ಹಣ ಹಾಕಿಸಿ ಒಟಿಪಿ ಪಡೆದು ಹಣವನ್ನು ಲಪಟಾಯಿಸಲಾಗುತ್ತದೆ.
ಇನ್ನು ಕೆಲವೊಮ್ಮೆ ಸರಕಾರಕ್ಕೆ ತೆರಿಗೆ ಹಣ ಮೊದಲೇ ಪಾವತಿ ಮಾಡಬೇಕು ಎಂದು ಹಣ ಹಾಕಿಸಿ ವಂಚಿಸಲಾಗುತ್ತದೆ. ಮತ್ತೆ ಆ ನಂಬರ್ ಗೆ ನೀವು ಕರೆ ಮಾಡಿದಲ್ಲಿ ಏನೂ ಮಾಹಿತಿಯೂ ಸಿಗುವುದಿಲ್ಲ. ಆದರೆ ಜಾಲಕ್ಕೂ ಮೀಶೋ ಸಂಸ್ಥೆಗೆ ಯಾವುದೇ ಸಂಬಂಧ ಇಲ್ಲ ಎಂದು ಮೀಶೋ ಹೇಳಿದೆ. ಆದರೆ ಮೀಶೋ ಗ್ರಾಹಕನ ವಿಳಾಸ ವಂಚಕರಿಗೆ ಹೇಗೆ ಸಿಕ್ಕಿತು ಎನ್ನುವುದಕ್ಕೆ ಮೀಶೋ ಸಂಸ್ಥೆ ಉತ್ತರಿಸಬೇಕಿದೆ.