ಮಹಿಳೆಯ ವೈಯಾರದ ಮಾತಿಗೆ ಮರುಳಾದ ಚಿರಯೌವ್ವನದ ಯುವಕ | ನಂಬಿ ಲಾಡ್ಜ್ ಗೆ ಹೋದ | ಅನಂತರ ಆದದ್ದೇ ಕಥೆಯಲ್ಲಿ ಟ್ವಿಸ್ಟ್

ಪ್ರೀತಿಯ ನಾಟಕವಾಡಿ ಹನಿಟ್ರ್ಯಾಪ್ ಮಾಡುವ ಜಾಲಕ್ಕೆ ಬೀಳುವವರ ಸಂಖ್ಯೆ ಬಹುತೇಕ ಏರುತ್ತಲೇ ಇದೆ. ಹೌದು, ಇಂಥದ್ದೇ ಒಂದು ಪ್ರಕರಣಕ್ಕೆ ಈಗ ಯುವಕನೋರ್ವ ಬಿದ್ದು, ಒದ್ದಾಡಿದ್ದಾನೆ. ಖತರ್ನಾಕ್ ಮಹಿಳೆಯೋರ್ವಳು, ಯುವಕನೊಬ್ಬನನ್ನು ಲಾಡ್ಜ್‌ಗೆ ಕರೆಸಿಕೊಂಡು, ತನ್ನ ಮೂವರು ಪರಿಚಿತರೊಂದಿಗೆ ಸೇರಿ ಆತನ, ಮೊಬೈಲ್ ಫೋನ್, ಹಣ ಮತ್ತು ಒಡವೆಯನ್ನು ದೋಚಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ.

 

ಬಂಧಿತ ಮಹಿಳೆಯನ್ನು ಹಸೀನಾ (28), ಆಕೆಯ ಪತಿ ಜೆ. ಜಿತಿನ್ (28), ಎಸ್. ಅನ್ಮದ್ (26) ಎಂದು ಗುರುತಿಸಲಾಗಿದೆ. ಈ ಮೂವರು ಉಮಯನಲ್ಲೂರು ಮೂಲದವರು. ಇನ್ನೊರ್ವ ಕೊಲ್ಲಂ ಮೂಲದ ಆರೋಪಿ ಅನಾಸ್, ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ಹಸೀನಾ ಇದೇ ರೀತಿ ಸಾಕಷ್ಟು ಮಂದಿಯನ್ನು ತನ್ನ ಬಲೆಗೆ ಬೀಳಿಸಿ, ಹಣ ಮತ್ತು ಒಡವೆ ಸುಲಿಗೆ ಮಾಡಿರುವುದು ಆಕೆಯ ಮೊಬೈಲ್ ನಿಂದ ಪೊಲೀಸರಿಗೆ ಗೊತ್ತಾಗಿದೆ.

ವಿಡಿಯೋ ಕಾಲ್‌ಗೆ ಸೇರಿಕೊಳ್ಳಿ ಎಂದು ಜನರನ್ನು ಕೇಳಿ, ನಂತರ ವಿಡಿಯೋ ಕಾಲ್‌ನಲ್ಲಿ ಬಣ್ಣದ ಮಾತುಗಳಿಂದ ಗಂಡಸರನ್ನು ಸೆಳೆದು, ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ಬಳಿಕ ಅವರನ್ನು ತಾನಿದ್ದಲ್ಲಿಗೆ ಕರೆಸಿಕೊಂಡು ದೋಚುವುದೇ ಈಕೆಯ ಪರಿಪಾಠವಾಗಿತ್ತು. ಆಕೆಯ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮಾಹಿತಿ, ಯಾರು ಯಾರನ್ನು ಸಂಪರ್ಕಿಸಿದ್ದಾಳೆ ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

ಸಂತ್ರಸ್ತ ಕೊಟ್ಟಾಯಂನ ವೈಕ್ಕೊಮ್ ಮೂಲದ 34 ವರ್ಷದ ಯುವಕ. ಸಂತ್ರಸ್ತ ಯುವಕನನ್ನು ಆರೋಪಿ ಹಸೀನಾ ಸಾಮಾಜಿಕ ಜಾಲತಾಣ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಆತನೊಂದಿಗೆ ನಿರಂತರವಾಗಿ ಮಾತನಾಡುತ್ತಾ ಇದ್ದು, ಇದೇ ಸಲುಗೆಯಲ್ಲಿ ಹಸೀನಾ, ಯುವಕನನ್ನು ಎರ್ನಾಕುಲಂ ಜನರಲ್ ಹಾಸ್ಪಿಟಲ್ ಬಳಿಯಿರುವ ಲಾಡ್ಜ್‌ಗೆ ಆಗಸ್ಟ್ 8ರಂದು ಕರೆದಿದ್ದಳು. ಆಕೆಯ ಮಾತಿನಿಂದ ಬಹಳ ಆಸೆ ಪಟ್ಟು ಜೊಲ್ಲು ಸುರಿಸುತ್ತಾ ಯುವಕ ಲಾಡ್ಜ್ ಗೆ ಹೋಗಿದ್ದ.

ಕೊಠಡಿಯೊಳಗೆ ಹೋದದ್ದೇ ತಡ, ಹಸೀನಾ ಮತ್ತು ಇತರೆ ಮೂವರು ಆರೋಪಿಗಳು ಯುವಕನನ್ನು ಹಿಡಿದುಕೊಂಡು ಕುರ್ಚಿಗೆ ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಯುವಕನ ಕತ್ತಿನಲ್ಲಿ ಚಿನ್ನದ ಸರ, ಬ್ರೇಸ್‌ಲೆಟ್, ರಿಂಗ್ ಮತ್ತು 20 ಸಾವಿರ ರೂ. ಬೆಲೆ ಬಾಳುವ ಮೊಬೈಲ್ ಫೋನ್ ಮತ್ತು ಪಾಕೆಟ್‌ನಲ್ಲಿದ್ದ 5 ಸಾವಿರ ರೂ. ನಗದು ದೋಚಿದ್ದರು. ಇಷ್ಟೇ ಅಲ್ಲದೆ, ಆತನ ಫೋನ್ ಬಳಸಿಕೊಂಡು ಬಲವಂತವಾಗಿ ಆತನ ಬ್ಯಾಂಕ್ ಖಾತೆಯಿಂದ 15 ಸಾವಿರ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಹಲ್ಲೆಯ ತೀವ್ರತೆ ಎಷ್ಟಿತ್ತೆಂದರೆ,ಯುವಕನ ಮೈಮೇಲೆ ತುಂಬಾ ಗಾಯಗಳಾಗಿತ್ತು. ಬಳಿಕ ಚಿಕಿತ್ಸೆ ಪಡೆದುಕೊಂಡು, ಆಗಸ್ಟ್ 13 ರಂದು ಎರ್ನಾಕುಲಂ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಡ್ಜ್‌ನಲ್ಲಿರುವ ಸಿಸಿಟಿವಿ ದೃಶ್ಯಗಳು ಮತ್ತು ಹಣ ವರ್ಗಾವಣೆಯಾಗಿರುವ ಖಾತೆಯ ಮೂಲಕ ಆರೋಪಿಗಳ ಸುಳಿವು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave A Reply

Your email address will not be published.