ಜಿಯೋ ಪರಿಚಯಿಸಿದೆ ವಾರ್ಷಿಕ ಪ್ರಿಪೇಯ್ಡ್​ ಪ್ಲಾನ್​​ ; ಈ ಪ್ಲಾನ್ ಹಾಕಿಸಿಕೊಂಡರೆ ಒಂದು ವರ್ಷದವರೆಗೆ ಟೆನ್ಶನ್ ಬೇಡ

ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಈಗಾಗಲೇ ಡೇಟಾ ಪ್ರಯೋಜನದ ಯೋಜನೆಗಳ ಮೂಲಕ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ 5G ಸಂಪರ್ಕ ಕೂಡ ಸಿಗಲಿದ್ದು ಜಿಯೋ ಯಾವರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತ್ತವೆ ಎಂಬುದು ಕುತೂಹಲ ಕೆರಳಿಸಿದೆ. ಜಿಯೋದ ಬಹುತೇಕ ಯೋಜನೆಗಳು ದೈನಂದಿನ ಡೇಟಾ, ಅನಿಯಮಿತ ವಾಯಿಸ್ ಕರೆ ಸೌಲಭ್ಯ, ಎಸ್‌ಎಮ್‌ಎಸ್ ಪ್ರಯೋಜನ ಪಡೆದಿವೆ. ಜಿಯೋದ ಅನೇಕ ಪ್ಲಾನ್ ಗಳಲ್ಲಿ ವಾರ್ಷಿಕ ಯೋಜನೆ ಕೂಡ ಒಂದು.

 

ಉತ್ತಮವಾದ ಆಫರ್ ನೊಂದಿಗೆ ಅಗ್ಗದ ಬೆಲೆಗೆ ಸಿಗುವ ಆಫರ್ ಗಳು ಜನರ ಮನ ಗೆದ್ದಿದೆ. ಜಿಯೋದ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಗಳಲ್ಲಿ ವಾರ್ಷಿಕ ಯೋಜನೆಗಳು ಯಾವ್ಯಾವುದು ಇದೆ ಎಂಬುದು ಇಲ್ಲಿ ತಿಳಿಯಿರಿ

ಜಿಯೋ 2545 ರೂ. ಪ್ಲಾನ್:
ಜಿಯೋದ ಈ ಯೋಜನೆ 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 1.5GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 504GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆಯಕ್ಸಸ್ ನೀಡಲಾಗುತ್ತದೆ.

ಜಿಯೋ 2879 ರೂ. ಪ್ಲಾನ್:
ಜಿಯೋದ ಈ ಯೋಜನೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 730GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆಯಕ್ಸಸ್ ನೀಡಲಾಗುತ್ತದೆ.

ಜಿಯೋ 2999 ರೂ. ಪ್ಲಾನ್:
ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2.5GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 912.5GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆಯಕ್ಸಸ್ ನೀಡಲಾಗುತ್ತದೆ. ಇದಿಷ್ಟೆ ಅಲ್ಲದೆ ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆ ಸಿಗುತ್ತದೆ.

ಜಿಯೋ 4199 ರೂ. ಪ್ಲಾನ್:
ಜಿಯೋದ ಈ ಯೋಜನೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ ಬರೋಬ್ಬರಿ 3GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 1095GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆಯಕ್ಸಸ್ ನೀಡಲಾಗುತ್ತದೆ. ಅಲ್ಲದೆ ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆ ನಿಮ್ಮದಾಗಿಸಬಹುದು.

Leave A Reply

Your email address will not be published.