ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅನ್ನು ‘DEMOLISH’ ಮಾಡಿದ್ದಾರೆ – ಶ್ರೀ ಗುಲಾಂ ನಬಿ ಆಜಾದ್ ಸ್ಫೋಟಕ ಹೇಳಿಕೆ

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವವನ್ನೂ ಕೈಬಿಟ್ಟಿದ್ದಾರೆ. ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ಗುಲಾಂ ನಬಿ ಆಜಾದ್ ಅವರನ್ನು ಕಾಂಗ್ರೆಸ್‌ನ ದೊಡ್ಡ ಮುಖ ಎಂದು ಪರಿಗಣಿಸಲಾಗಿದೆ. ಈ ಹಿಂದೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಕಾಂಗ್ರೆಸ್ ನ ಬಹು ದೊಡ್ಡ ನಾಯಕ ಗುಲಾಂ ನಬಿ ಆಜಾದ್. ಈಗ ಈ ನಾಯಕ ಹೊರನಡೆದಿದ್ದಾರೆ. ಹೋಗುವಾಗ ಒಂದು ದೊಡ್ಡ ಆಪಾದನೆ ಮಾಡಿ ಹೋಗಿದ್ದಾರೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅನ್ನು ‘DEMOLISH’ ಮಾಡಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ ಶ್ರೀ ಗುಲಾಂ ನಬಿ ಆಜಾದ್. ಮೊದಲೇ ನೆಲ ಕಚ್ಚಿದ್ದ ಕಾಂಗ್ರೆಸ್ ಗೆ ಬೆಳವಣಿಗೆ ಮರ್ಮಾಘಾತ.
.
ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್ ಅವರು ಹೀಗೆ ಬರೆದಿದ್ದಾರೆ, ” ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗಿನ ನನ್ನ ಅರ್ಧ ಶತಮಾನದ ಹಳೆಯ ಒಡನಾಟವನ್ನು ಮುರಿಯಲು ನಿರ್ಧರಿಸಿದ್ದೇನೆ ಎಂದು ಬಹಳ ವಿಷಾದ ಮತ್ತು ಅತ್ಯಂತ ಭಾವನಾತ್ಮಕ ಹೃದಯದಿಂದ ನಾನು ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ.

ಹೀಗೆ ಐದು ಪುಟಗಳಲ್ಲಿ ಬರೆದಿರುವ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್ ಅವರು ಸೋನಿಯಾ ಗಾಂಧಿ ಅವರಿಗೆ ಇಂಗ್ಲಿಷ್‌ನಲ್ಲಿ ಕಾರಣಗಳನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಪಕ್ಷವನ್ನು ಕೆಡವಿದ್ದಾರೆ ಎಂದು ಆರೋಪಿಸಿದರು. “ದುರದೃಷ್ಟವಶಾತ್ ಶ್ರೀ ರಾಹುಲ್ ಗಾಂಧಿಯವರು ರಾಜಕೀಯಕ್ಕೆ ಪ್ರವೇಶಿಸಿದ ನಂತರ ಮತ್ತು ವಿಶೇಷವಾಗಿ ಜನವರಿ, 2013 ರ ನಂತರ ಅವರು ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ, ಮೊದಲು ಅಸ್ತಿತ್ವದಲ್ಲಿದ್ದ ಸಂಪೂರ್ಣ ಸಮಾಲೋಚನಾ ಕಾರ್ಯವಿಧಾನವನ್ನು ಅವರು ಕೆಡವಿದರು” ಎಂದು ಆಜಾದ್ ಹೇಳಿದರು.

2014 ralli ರಾಹುಲ್ ಗಾಂಧಿಯವರು ಯಾವಾಗ ಸರ್ಕಾರಿ ಸುಗ್ರೀವಾಜ್ಞೆಯನ್ನು ಮಾಧ್ಯಮಗಳ ಮುಂದೆಯೇ ಹರಿದು ಹಾಕಿದ ರೋ, ಆಗ ಆ ಚುನಾವಣೆಯಲ್ಲಿ ಸೋಲು ಕಾಣಲು ಪ್ರಮುಖ ಕಾರಣವಾಯಿತು. ಅಲ್ಲದೆ ಅವರು ಅನುಭವಿ ವ್ಯಕ್ತಿಗಳ ಸಲಹೆಯನ್ನು ಕೇಳುವುದನ್ನು ಬಿಟ್ಟುಬಿಟ್ಟಿದ್ದರು. ಆನನವಹಿಗಳು ಮತ್ತು ಹೊಗಳುಭಟರ ಮಾತು ಕೇಳಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದರು. ರಾಹುಲ್ ಅಥವಾ ಅವರ ಭದ್ರತಾ ಸಿಬ್ಬಂದಿಗಳು ಹೆಚ್ಚಿನ ನಿರ್ಧಾರ ಕೈಗೊಳ್ಳುತ್ತಾರೆ. ಇದೇ ಕಾಂಗ್ರೆಸ್ಸಿನ ಇವತ್ತಿನ ಪರಿಸ್ಥಿತಿಗೆ ಕಾರಣ ಎಂದು ಗುಲಾಂ ನಭಿ ಅಜಾದ್ ಅವರು ವಿವರಿಸಿದ್ದಾರೆ.

ಈ ಎಲ್ಲಾ ಬೆಳವಣಿಗಳಿಂದ ಕಾಂಗ್ರೆಸ್ ಇನ್ನಷ್ಟು ಕುಸಿದು ಕೂರಲಿದೆ. ಏನಾದರೂ ಮೇಜರ್ ಸರ್ಜರಿ, ಅಥವಾ ಹೊಸ ‘ಸಚ್ಚಾ’ ನಾಯಕನ ಎಂಟ್ರಿಯ ವಿನಾ ಪುನಸ್ಚೇತನ ಕನಸಿನ ಮಾತು ಎನ್ನಲಾಗುತ್ತಿದೆ.

Leave A Reply

Your email address will not be published.