ಸಾಲ ನೀಡುವ 2000ಕ್ಕೂ ಹೆಚ್ಚು ಆಪ್ ಗಳು ಪ್ಲೇಸ್ಟೋರ್ ನಿಂದ ಔಟ್!
ಸುಲಭವಾಗಿ ಸಾಲ ನೀಡುತ್ತೇವೆ ಎಂಬ ಭರವಸೆಯೊಂದಿಗೆ ಜನರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಸುಮಾರು 2000ಕ್ಕೂ ಹೆಚ್ಚು ಸಾಲ ನೀಡುವ ಆಪ್ಗಳನ್ನು ಗೂಗಲ್ ತೆಗೆದುಹಾಕಿದೆ.
ಗೂಗಲ್ ಪ್ಲೇಸ್ಟೋರ್ ನಲ್ಲಿ ಸಾಲ ನೀಡುವ ಆಪ್ಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಡುವೆ ತಪ್ಪು ಮಾಹಿತಿಗಳನ್ನ ಕೂಡ ನೀಡಲಾಗುತ್ತಿದೆ. ಸಾಲದ ಸಂದರ್ಭದಲ್ಲಿ ಇಂಟರ್ನೆಟ್ ಪ್ರಪಂಚದ ಹೊರಗೆ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆದ ಬಗ್ಗೆ ವರದಿಯಾಗಿವೆ. ತ್ವರಿತವಾಗಿ ಸಾಲ ನೀಡುತ್ತಿದ್ದ ಈ ಆಪ್, ಬಳಿಕ ಮರುಪಾವತಿ ನಿಧಾನವಾದ ಸಂದರ್ಭದಲ್ಲಿ ಕೆಲ ವ್ಯಕ್ತಿಗಳನ್ನು ಬಳಸಿಕೊಂಡು ಸಾಲ ಪಡೆದವರ ಖಾಸಗಿ ಚಿತ್ರಗಳನ್ನು ತಿರುಚಿ ಅವರ ಸಂಬಂಧಿಗಳು ಸ್ನೇಹಿತರಿಗೆ ಕಳುಹಿಸುವ ಮೂಲಕ ಅವಮಾನ ಮಾಡುತ್ತಿದ್ದವು. ಈ ರೀತಿ ಬ್ಲಾಕ್ಮೇಲ್ ಗೆ ಒಳಗಾದ ಹಲವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ.
ಆರ್ಬಿಐ, ಅನಿಯಂತ್ರಿತ ಸಾಲ ನೀಡುವ ಚಟುವಟಿಕೆಗಳನ್ನು ನಿಷೇಧಿಸುವ ಕಾನೂನನ್ನು ಶಿಫಾರಸು ಮಾಡಿದ ನಂತರ ಎಚ್ಚೆತ್ತುಗೊಂಡ ಗೂಗಲ್ ಅನಿಯಂತ್ರಿತ ಸಾಲ ನೀಡುವ ಅಪ್ಲಿಕೇಶನ್ಗಳ ವಿರುದ್ಧ ಕ್ರಮ ಕೈಗೊಂಡಿದೆ. ಭಾರತವು ಪ್ರಸ್ತುತ ಸರ್ಕಾರಿ ಪ್ರಮಾಣೀಕೃತ ಅಪ್ಲಿಕೇಶನ್ಗಳನ್ನು ಹೊಂದಿಲ್ಲ ಎಂದು ಹೇಳಿದ ಮಿತ್ರಾ, ಪ್ರತಿ ಕೆಟ್ಟ ಸಾಲದ ಅಪ್ಲಿಕೇಶನ್ಗಳ ನಡುವೆ ಉತ್ತಮ ಅಪ್ಲಿಕೇಶನ್ಗಳು ಕೂಡ ಇವೆ ಎಂದರು.
ಮಾಹಿತಿ ಬಹಿರಂಗಪಡಿಸುವುದು, ತಪ್ಪು ಮಾಹಿತಿ ಮತ್ತು ಆಫ್ಲೈನ್ ಕಾರ್ಯಕ್ಷಮತೆಯಿಂದಾಗಿ ಈ ಆಪ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಆಪ್ಗಳ ಮೇಲಿನ ನಿಯಮಾವಳಿಗಳನ್ನು ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆ ಇದೆ.