ಬೇಕರಿ ಹಲ್ವಾ ತಿಂದು ಸಾವು ಕಂಡ ವ್ಯಕ್ತಿ | ಮರಣೋತ್ತರ ವರದಿಯಲ್ಲಿತ್ತು ಸಾವಿನ ನಿಗೂಢ ರಹಸ್ಯ

Share the Article

ಬೇಕರಿಯ ಸಿಹಿತಿಂಡಿಗಳನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ. ಅಲ್ಲಿ ಸಿಗುವ ಬಗೆಬಗೆಯ ಸಿಹಿತಿನಿಸು ನಿಜಕ್ಕೂ ನಾಲಿಗೆಗೆ ರುಚಿ ಕೊಡುವುದರಲ್ಲಿ ಎರಡು ಮಾತಿಲ್ಲ. ಅಂತಿಪ್ಪ ತರಹೇವಾರಿ ಸಿಹಿ ತಿಂಡಿಗಳಿಗೆ ಓರ್ವ ಬಲಿಯಾಗಿದ್ದಾನೆ.

ಹೌದು, ವ್ಯಕ್ತಿಯೋರ್ವ ಬೇಕರಿಯಿಂದ ಆಸೆಯಿಂದ ತಂದ ಹಲ್ವಾ ಪ್ರಾಣವನ್ನೇ ತೆಗೆದ ಘಟನೆಯೊಂದು ನಡೆದಿದೆ. ಹೌದು, ಹಲ್ವಾ ತಿನ್ನುವಾಗ ಶ್ವಾಸನಾಳಕ್ಕೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಆಘಾತಕಾರಿ ಘಟನೆ ಕೇರಳದಲ್ಲಿ ಶುಕ್ರವಾರ ವರದಿಯಾಗಿದೆ.

ನಿಜಾ‌ರ್ (49) ಮೃತಪಟ್ಟ ವ್ಯಕ್ತಿ. ಈತ ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿ ಪರಂಬುವಿನ ನಿವಾಸಿ. ಹಲ್ವಾ ಶ್ವಾಸನಾಳದಲ್ಲಿ ಸಿಲುಕಿಕೊಂಡು ನಿಜಾರ್ ಮನೆಯಲ್ಲೇ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಕಾರ್ಮಿಕ ವೃತ್ತಿ ಮಾಡಿಕೊಂಡಿದ್ದು, ಆತ ಬುಧವಾರ ಬೆಳಗ್ಗೆ ಬೇಕರಿಯಲ್ಲಿ ಹಲ್ವಾ ಕೊಂಡು ತಂದು ಸೇವಿಸಿದ್ದ. ನಂತರ ದೇಹದಲ್ಲಿ ಕೊಂಚ ಇರುಸುಮುರುಸು ಉಂಟಾಗಿ, ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಛಕಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ಮೃತಪಟ್ಟಿದ್ದು, ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ.

Leave A Reply