ಗರ್ಭಿಣಿ ಮಹಿಳೆಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯ ಆಡಳಿತ | Viral Video !

Share the Article

ಗರ್ಭಿಣಿ ಮಹಿಳೆಯನ್ನು ಜೆಸಿಬಿ ಮೂಲಕ ಆಸ್ಪತ್ರೆಗೆ ಕರೆದೊಯ್ದಿರುವ ವಿಚಿತ್ರ ಘಟನೆ ನಡೆದಿದೆ. ಅಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಆಂಬ್ಯುಲೆನ್ಸ್ ಮನೆಗೆ ತಲುಪಲು ವಿಫಲವಾದ ಕಾರಣ ಗರ್ಭಿಣಿ ಮಹಿಳೆಯನ್ನು ಜೆಸಿಬಿ ಮೂಲಕ ಆಸ್ಪತ್ರೆಗೆ ಲಿಫ್ಟ್ ಮಾಡಲಾಗಿದೆ.

ಮಧ್ಯಪ್ರದೇಶದ ನೀಮಾಚ್ ಜಿಲ್ಲೆಯಲ್ಲಿಸ್ಥಳೀಯ ಶಾಸಕರ ನೇತೃತ್ವದಲ್ಲಿ ಸ್ಥಳೀಯ ಆಡಳಿತ ಹಾಗೂ ಪೊಲೀಸರು ಜೆಸಿಬಿ ಯಂತ್ರದ ವ್ಯವಸ್ಥೆ ಮಾಡಿದ್ದರು. ಭಾರೀ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಿಸಲಾಗಿರುವ ಮಧ್ಯಪ್ರದೇಶದ 39 ಜಿಲ್ಲೆಗಳ ಪೈಕಿ ನೀಮುಚ್ ಜಿಲ್ಲೆಯ ರಾವತ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ರೇವಾ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಮಳೆಯಿಂದ ರಸ್ತೆ ಹಾಳಾಗಿದ್ದರಿಂದ ಆರೋಗ್ಯ ಕೇಂದ್ರ ತಲುಪಲು ತಡವಾದ ಕಾರಣ ಮಹಿಳೆ ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

ಕಳೆದ ಎರಡು ದಿನಗಳಲ್ಲಿ 4,300 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು 2,100 ಜನರನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಿಸಲಾಗಿದೆ.

ಭೋಪಾಲ್ ಸೇರಿದಂತೆ ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ರಾಜಧಾನಿ ಮತ್ತು ಇತರ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

Leave A Reply