ಮೂರು ವರ್ಷಗಳ ದಾಂಪತ್ಯದಲ್ಲಿ ನಡೆಯದ “ಫಸ್ಟ್ ನೈಟ್” | ಅನುಮಾನಗೊಂಡ ಪತ್ನಿಗೆ ತಿಳಿಯಿತು ಘೋರ ಸತ್ಯ!!!

ಮದುವೆಯ ಹೊಂಗನಸುಗಳನ್ನು ಹೊತ್ತು ಆಕೆ ಗಂಡನ ಮನೆಗೆ ಬಂದಿದ್ದಳು. ಆಕೆಯನ್ನು ಆಕೆಯ ಪಾಲಕರು ವರದಕ್ಷಿಣೆ ಕೊಟ್ಟು ಶಾಸ್ತೋಕ್ತವಾಗಿ, ಅದ್ಧೂರಿ ಮದುವೆ ಮಾಡಿದ್ದರು. ಆದರೆ ಅದೆಷ್ಟೋ ಆಸೆ ಆಕಾಂಕ್ಷೆಗಳೊಂದಿಗೆ ಅತ್ತೆಯ ಮನೆಗೆ ತೆರಳಿದ್ದ ಆ ಯುವತಿ ಮಾತ್ರ ಶಾಕ್ ಗೊಳಗಾಗಿದ್ದಾಳೆ. ಹೌದು. ಆ ವಿಚಾರ ನಾವು ನಿಮಗೆ ಹೇಳುತ್ತೇವೆ. ಅಷ್ಟಕ್ಕೂ ಆಕೆಗೆ ಮದುವೆಯಾಗಿ ಬರೋಬ್ಬರಿ ಮೂರು ವರ್ಷಗಳಾಗಿವೆ.

 

ಗಂಡನ ಮನೆ ಪ್ರವೇಶಿಸಿದ ಆಕೆ ಪ್ರತಿ ಬಾರಿ ತನ್ನ ಗಂಡನ ಹತ್ತಿರ ಹೋದಾಗ ಆತ ಆಕೆಯನ್ನು ನಯವಾಗಿಯೇ ದೂರ ಮಾಡುತ್ತಿದ್ದ. ಪ್ರತಿ ಬಾರಿಯ ಆಕೆಯ ಪ್ರಯತ್ನ ಸೋಲು ಕೊಡುತ್ತಿತ್ತು. ಮದುವೆಯಾಗಿಬಮೂರು ವರ್ಷಗಳಲ್ಲಿ ಇಬ್ಬರೂ ಒಮ್ಮೆಯೂ ದೈಹಿಕವಾಗಿ ಹತ್ತಿರವಾಗಿರಲಿಲ್ಲ. ಯುವತಿ ಸಂಯಮದಿಂದಲೇ ಗಂಡನ ಸಾಮೀಪ್ಯಕ್ಕೆ ಕಾಯುತ್ತಿದ್ದಳು. ಕೊನೆಗೂ ಆಕೆಯ ಹತಾಶೆ ಒಡೆದು ಹೋಗಿದೆ. ಗಂಡನ ಮೇಲೆ ಅನುಮಾನಗೊಂಡು ಚಿಕ್ಕಮ್ಮನನ್ನು ವಿಚಾರಿಸಿದಾಗ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ.

ಇಂದೋರ್‌ನ ಮಹಿಳೆಯನ್ನು 2019 ರಲ್ಲಿ ಪ್ರಿತೇಶ್ ಎಂಬ ವ್ಯಕ್ತಿಯನ್ನು ವಿವಾಹ ಮಾಡಿಕೊಡಲಾಗಿತ್ತು. ಆಕೆಯ ಪೋಷಕರು ಸುಮಾರು 25 ಲಕ್ಷ ರೂ. ವರದಕ್ಷಿಣೆ ನೀಡಿ ಅತ್ಯಂತ ಅದ್ಧೂರಿಯಾಗಿ ಮದುವೆ ಮಾಡಿದರು. ಅದೆಷ್ಟೋ ಆಸೆ ಆಕಾಂಕ್ಷೆಗಳೊಂದಿಗೆ ಅತ್ತೆಯ ಮನೆಗೆ ಆ ಯುವತಿ ತೆರಳಿದ್ದಳು. ಆದರೆ ಯುವತಿ ಸರ್ವ ರೀತಿಯಲ್ಲೂ ಆಘಾತಕ್ಕೊಳಗಾಗಿದ್ದಳು. ಮೊದಲ ರಾತ್ರಿಯಿಂದಲೇ ಪತಿ ಪ್ರಿತೇಶ್‌ನ ಸಂಬಂಧ ಅನುಮಾನಾಸ್ಪದವಾಗಿತ್ತು. ಇವನು ಹತ್ತಿರ ಬರುವುದೇ ಇಲ್ಲ.. ಇವಳು ಹತ್ತಿರ ಹೋದಂತೆಲ್ಲಾ ಅವಳನ್ನು ಗದರಿಸಿ ಕಳುಹಿಸುತ್ತಿದ್ದ. ಈ ಮೂರು ವರ್ಷಗಳಲ್ಲಿ ಇಬ್ಬರೂ ಒಮ್ಮೆಯೂ ದೈಹಿಕವಾಗಿ ಭೇಟಿಯಾಗಿಲ್ಲ. ಮಹಿಳೆ ತನ್ನ ಗಂಡನ ವರ್ತನೆಯ ಬಗ್ಗೆ ತನ್ನ ಚಿಕ್ಕಮ್ಮ ಬಳಿ ಹೇಳಿಕೊಂಡಳು. ತನ್ನ ಮಗ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಶೀಘ್ರದಲ್ಲೇ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಆಕೆಯ ಚಿಕ್ಕಮ್ಮ ಅಭಯ ನೀಡದಳಂತೆ.

ಮತ್ತೊಂದೆಡೆ, ಪ್ರಿತೇಶ್ ತನ್ನ ತಪ್ಪನ್ನು ಹೆಂಡತಿ ಎಲ್ಲಿ ಬಹಿರಂಗಪಡಿಸುತ್ತಾಳೋ ಎಂದು ಯೋಚಿಸುತ್ತಾ ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸುತ್ತಾನೆ. 20 ಲಕ್ಷ ರೂ. ವರದಕ್ಷಿಣೆ ತರುವಂತೆ ಹೇಳುತ್ತಾ, ತಂದ ಬಳಿಕವೇ ಮನೆಗೆ ಬರುವಂತೆ ಹೇಳಿ.. ಮಹಿಳೆಯನ್ನು ಹೊರಗಟ್ಟಿದ್ದಾನೆ. ಇದಾದ ಬಳಿಕ ಸಂತ್ರಸ್ತ ತಾಯಿಯ ಮನೆಗೆ ತೆರಳಿ ನಡೆದ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ.

ಈಗ ಯುವತಿಯಯ ಪೋಷಕರು ಮಗಳ ಅತ್ತೆಯ ವಿರುದ್ಧ ಪೊಲೀಸ್ ದೂರು ದಾಖಲಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.