ಲವ್ವರ್ಸ್ ಗೆ ‘ಲವ್ ಟಿಪ್ಸ್’ ನೀಡಿದ ಸೋನು ಗೌಡ | ಮಂಗಳೂರು ಹುಡುಗ ರೂಪೇಶ್ ಲವ್ ಕಹಾನಿ ಬಿಗ್ ಬಾಸ್ ನಲ್ಲಿ ಬಹಿರಂಗ!!!

ಸೋನು ಶ್ರೀನಿವಾಸ್ ಗೌಡ ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿ ಗಮನ ಸೆಳೆಯುತ್ತಿರುವ ಕಂಟೆಸ್ಟೆಂಟ್ ಗಳಲ್ಲಿ ಒಬ್ಬರು. ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ ಸೋನು ಗೌಡ. ಈ ಕಾರಣದಿಂದ ಅವರು ಸೇವ್ ಆಗುತ್ತಿದ್ದಾರೆ. ಅವರ ಮಾತುಗಳು ಕೆಲವರಿಗೆ ಇಷ್ಟ ಆಗುತ್ತಿಲ್ಲ. ಇನ್ನೂ ಕೆಲವರಿಗೆ ಅವರ ಮಾತುಗಳು ಕಾಮಿಡಿ ಎನಿಸುತ್ತಿದೆ. ತಾನು ಮಾಡಿದ ತಪ್ಪನ್ನು ಒಪ್ಕೊಳ್ಳದೇ ಇರುವುದೇ ಸೋನು ಮೈನಸ್ ಪಾಯಿಂಟ್. ಲವ್ ಮಾಡಿ ಮೋಸ ಹೋಗಿರೋ ಸೋನು ಗೌಡ ಈಗ ‘ಬಿಗ್ ಬಾಸ್’ ಮನೆಯಲ್ಲಿ ಒಂದು ಬೇರೆಯವರಿಗೆ ಲವ್ ಟಿಪ್ಸ್ ನೀಡಿದ್ದಾರೆ.

 

ವೈಯಕ್ತಿಕ ಜೀವನದಲ್ಲಿ ಬಹಳ‌ ನೊಂದು ಬೆಂದಿರುವ ಸೋನು ಗೌಡ, ಟ್ರೋಲ್ಸ್ ಗೆ ಗುರಿಯಾಗಿರುವ ಈಕೆ
ಬಿಗ್ ಬಾಸ್ ಮನೆಗೆ ಅವರು ಕಾಲಿಟ್ಟಾಗ ಅನೇಕರು ಇದೇ ವಿಚಾರ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದರು. ಆದರೆ, ಸೋನು ಈಗ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮದ ವಿಚಾರ ಚರ್ಚೆಗೆ ಬಂತು. ರೂಪೇಶ್ ಶೆಟ್ಟಿ ಅವರು ತಮ್ಮ ಜೀವನದಲ್ಲಿ ನಡೆದ ಪ್ರೇಮ ಕಥೆ ಒಂದನ್ನು ಹೇಳಿದ್ದಾರೆ. ‘ಒಂದು ಹುಡುಗಿ ದಿನಾ ದೇವಸ್ಥಾನಕ್ಕೆ ಬರುತ್ತಿದ್ದಳು. ನನ್ನ ಫ್ರೆಂಡ್ಸ್ ಎಲ್ಲರೂ ಅವಳಿಗೆ ಲೈನ್ ಹೊಡೆಯುತ್ತಿದ್ದರು. ಅವಳು ನನಗೆ ಬೀಳಲ್ಲ ಎಂದು ನಾನು ಸುಮ್ಮನೆ ಇದ್ದೆ. ರಕ್ಷಾ ಬಂಧನದ ದಿನ ಎಲ್ಲರಿಗೂ ಆಕೆ ರಾಖಿ ಕಟ್ಟಿದಳು. ನನಗೆ ಕಟ್ಟಿಲ್ಲ’ ಎಂದರು ರೂಪೇಶ್.

ಈ ವೇಳೆ ಸೋನು ಗೌಡ ಅವರು, ‘ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು. ಟೈಮ್‌ಪಾಸ್ ಇರಬಾರದು’ ಎಂದರು. ಈ ಮೂಲಕ ಲವ್ ಟಿಪ್ಸ್ ಕೊಟ್ಟರು. ‘ಲವ್ ಟೈಮ್‌ವೇಸ್ಟ್ ಫ್ರೆಂಡ್‌ಶಿಪ್ ಮುಖ್ಯ’ ಎಂದು ಕೂಡ ಸೋನು ಹೇಳಿದರು. ಅವರು ಹೇಳಿದ್ದನ್ನು ಕೇಳಿ ರಾಕೇಶ್ ಅವರು ನೇರವಾಗಿ ಉತ್ತರ ಕೊಟ್ಟರು. ‘ಯಾವುದೇ ರಿಲೇಶನ್‌ಶಿಪ್‌ನಲ್ಲಿ ರೆಸ್ಪೆಕ್ಟ್ ಮುಖ್ಯ’ ಎಂದರು ರಾಕೇಶ್.

Leave A Reply

Your email address will not be published.