ಒಂದೇ ಕುಟುಂಬದ 11 ಮಂದಿಯನ್ನು ಕಚ್ಚಿ ಕೊಂದ ಹಾವು | ಹಾವಿನ ದ್ವೇಷಕ್ಕೆ ತುತ್ತಾಗಿದೆಯೇ ಈ ಕುಟುಂಬ?
ಭಾರತದಲ್ಲಿ ಹಾವನ್ನು ದೇವರೆಂದು ಪೂಜಿಸುತ್ತಾರೆ. ಭಕ್ತಿ ಭಾವದಿಂದ ಎಲ್ಲರೂ ನಾಗ ದೇವರನ್ನು ಆರಾಧಿಸುತ್ತಾರೆ. ಹಾಗೆನೇ ಹಾವಿನ ದ್ವೇಷ 12 ವರ್ಷ ಎಂದು ಹೇಳುತ್ತಾರೆ. ಯಾವುದಾದರೂ ಹಾವನ್ನು ಸಾಯಿಸಲೂ ಹೆದರುತ್ತಾರೆ. ಆದರೂ ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ಏನೋ ಕೆಲವೊಮ್ಮೆ ಅಚಾತುರ್ಯ ಆಗುತ್ತದೆ. ಆದರೂ ಈ ಎಲ್ಲಾ ಘಟನೆಗಳಿಗೆ ಮನುಷ್ಯನೇ ನೇರ ಹೊಣೆಯಾಗುತ್ತಾನೆ. ಅಂಥದ್ದೇ ಒಂದು ಘಟನೆ ಇಲ್ಲೊಂದು ಕಡೆ ನಡೆದಿದೆ.
ಈ ಒಂದು ಕುಟುಂಬದಲ್ಲಿ ಕಳೆದ 25 ವರ್ಷಗಳಲ್ಲಿ 11 ಮಂದಿಗೆ ಹಾವು ಕಚ್ಚಿದ್ದದು. ವಿಶೇಷ ಏನೆಂದರೆ ಇವರೆಲ್ಲ ಒಂದೇ ಕುಟುಂಬದವರು. ಅದು ಕೂಡಾ ಇವರಿಗೆ ಅನ್ನ ಕೊಡುವ ಹೊಲದಲ್ಲಿ ಕೆಲಸ ಮಾಡಲೆಂದು ಹೋದಾಗ. ಹೀಗಾಗಿ, ಉಳಿದ ಕುಟುಂಬಸ್ಥರು ತಮ್ಮ ಹೊಲಗದ್ದೆಗೆ ಹೋಗಲು ಭಯ ಪಡುತ್ತಿದ್ದಾರೆ.
ಇದರಲ್ಲಿ ಐವರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೊಗರಿ ಘಟ್ಟ ಗ್ರಾಮದಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಈ ಕುಟುಂಬದ ಗೋವಿಂದ ರಾಜು ಎಂಬುವರು ಹೊಲದಲ್ಲಿ ನೀರು ಹಾಯಿಸಲು ಹೋದಾಗ ಹಾವು ಕಚ್ಚಿ ಮೃತಪಟ್ಟಿದ್ದರು. ಹೊಲದಲ್ಲಿ ಮೆಣಸಿನ ಗಿಡ ಬೆಳೆದಿದ್ದರೂ ಅದರ ಸಮೀಪ ಸುಳಿಯದಂತಾಗಿದೆ. ಇನ್ನೊಂದೆಡೆ, ಮಾನಸಿಕವಾಗಿ ಇಡೀ ಕುಟುಂಬವೇ ಜರ್ಜರಿತವಾಗಿದೆ.
ಅಲ್ಲದೇ, ಇವರ ಹೊಲ ಗದ್ದೆಯಲ್ಲಿ ಇತರ ಕೂಲಿ ಕಾರ್ಮಿಕರು ಸಹ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ನಿರಂತರವಾಗಿ ಹಾವಿನ ದಾಳಿಗೆ ಒಳಗಾಗುತ್ತಿರುವ ಈ ಕುಟುಂಬ, ರಾಹು ಕೇತು ಪೂಜೆಯನ್ನು ಸಹ ಮಾಡುತ್ತದೆ. ಆದರೆ, ಯಾವುದೂ ಕೂಡ ಪ್ರಯೋಜನಕ್ಕೆ ಬಾರದಂತಾಗಿದೆ.