ರಾಜ್ಯದ ಹತ್ತು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ | ಮಂಗಳೂರಿಗೆ ಸಾಮಾನ್ಯ ಮೇಯರ್
ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಮೀಸಲಾತಿಯನ್ನು ಪ್ರಕಟಿಸಿ ಇಂದು ಅಧಿಸೂಚನೆ ಹೊರಡಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಸಾಮಾನ್ಯ, ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಸೂಚಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಇನ್ನುಳಿದ ಮಹಾನಗರ ಪಾಲಿಕೆಯ ಮೀಸಲಾತಿ ಪಟ್ಟಿ ಇಂತಿದೆ.
ಬಳ್ಳಾರಿ: ಮೇಯರ್ ಹಿಂದುಳಿದ ವರ್ಗ(ಅ) ಮಹಿಳೆ, ಉಪಮೇಯರ್ ಸಾಮಾನ್ಯ ಮಹಿಳೆ
ಬೆಳಗಾವಿ: ಮೇಯರ್- ಸಾಮಾನ್ಯ, ಉಪಮೇಯರ್- ಪರಿಶಿಷ್ಟಜಾತಿ ಮಹಿಳೆ
ದಾವಣಗೆರೆ: ಮೇಯರ್- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ(ಅ) ಮಹಿಳೆ
ಹುಬ್ಬಳ್ಳಿ-ಧಾರವಾಡ: ಮೇಯರ್ – ಸಾಮಾನ್ಯ ಮಹಿಳೆ, ಉಪಮೇಯರ್ ಸಾಮಾನ್ಯ
ಕಲಬುರಗಿ: ಮೇಯರ್-ಪರಿಶಿಷ್ಟ ಜಾತಿ, ಉಪಮೇಯರ್-ಸಾಮಾನ್ಯ
ಮೈಸೂರು: ಮೇಯರ್- ಸಾಮಾನ್ಯ, ಉಪಮೇಯರ್-ಹಿಂದುಳಿದ ವರ್ಗ(ಅ) ಮಹಿಳೆ
ಶಿವಮೊಗ್ಗ: ಮೇಯರ್ ಹಿಂದುಳಿದ ವರ್ಗ(ಅ), ಉಪಮೇಯರ್- ಸಾಮಾನ್ಯ ಮಹಿಳೆ
ತುಮಕೂರು: ಮೇಯರ್- ಪರಿಶಿಷ್ಟ ಜಾತಿ (ಮಹಿಳೆ), ಉಪಮೇಯರ್-ಹಿಂದುಳಿದ ವರ್ಗ(ಅ)
ವಿಜಯಪುರ: ಮೇಯರ್-ಪರಿಶಿಷ್ಟ ಪಂಗಡ, ಉಪಮೇಯರ್- ಹಿಂದುಳಿದ ವರ್ಗ (ಬ).