ಹಸು,ಎಮ್ಮೆ ಸಾಕಣೆಗೆ ಸರ್ಕಾರವೇ ನೀಡುತ್ತೆ ಸಹಾಯಧನ | ಏನಿದು ಯೋಜನೆ? ಈ ಕುರಿತು ಮಾಹಿತಿ ಇಲ್ಲಿದೆ ನೋಡಿ
ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ರೈತರು ಕೇವಲ ಕೃಷಿ ಮೇಲೆ ಮಾತ್ರ ಅವಲಂಬಿಸುವುದಲ್ಲದೆ, ಜಾನುವಾರು ಸಾಕಾಣಿಕೆಯಲ್ಲೂ ತೊಡಗಿಕೊಳ್ಳುತ್ತಾರೆ. ಯಾಕಂದ್ರೆ ಬರಗಾಲದಲ್ಲಿ ಬೆಳೆ ಕೈ ಹಿಡಿಯದಾದಾಗ, ಹಸು ಸಾಕುವ ಮೂಲಕ ಲಾಭಗಳಿಸಬಹುದು ಎಂಬ ಉದ್ದೇಶ. ಅಲ್ಲದೇ ಹಸುಕರ ಕಟ್ಟದೆ ಗೊಬ್ಬರ ಎಲ್ಲಿಂದ ತಂದೇವು ? ಮೊದಲೇ ಬೆಳೆ ಒಂದು ಬಾರಿ ಕೈ ಕೊಟ್ರೆ ಮತ್ತೆಲ್ಲಿಂದ ಬರತ್ತೆ ದುಡ್ಡು ಗೊಬ್ರ ತರಲು ?
ಹೌದು. ಭಾರತದಲ್ಲಿ ಜಾನುವಾರು ಸಾಕಣೆದಾರರ ಸಂಖ್ಯೆ ಇತರ ದೇಶಗಳಿಗಿಂತ ಹೆಚ್ಚು. ಹೀಗಾಗಿ ಸರ್ಕಾರ ಸಾಕಾಣೆದಾರರಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದು, ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸಲು ಸರ್ಕಾರವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ಸರ್ಕಾರವು ಜಾನುವಾರು ಮಾಲೀಕರಿಗಾಗಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪಶುಪಾಲಕರಿಗೆ ಅಥವಾ ಕಡಿಮೆ ಭೂಮಿ ಹೊಂದಿರುವಂತಹ ರೈತರಿಗಾಗಿ ಪ್ರಾರಂಭಿಸಲಾಗಿದೆ. ಕೃಷಿ ಮಾಡಲು ಸಾಧ್ಯವಾಗದ ರೈತರು. ಹಸು, ಎಮ್ಮೆ , ಮೇಕೆ , ಕುರಿ ಮುಂತಾದ ಪ್ರಾಣಿಗಳನ್ನು ಅನುಸರಿಸುವ ಎಲ್ಲರೂ ಈ ಯೋಜನೆಗೆ ಅರ್ಹರಾಗಿದ್ದು, ಇಂತಹ ಸಣ್ಣ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ, ಹಸು ಸಾಕಣೆ ಮಾಡಿದವರಿಗೆ ಸರ್ಕಾರದಿಂದ ರೂ 40,783 ಮತ್ತು ಎಮ್ಮೆ ಸಾಕಣೆಗೆ ರೂ 60,249 ನೀಡಲಾಗುವುದು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2020 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಪ್ರಾರಂಭಿಸಿದ್ದಾರೆ. ಈ ಯೋಜನೆಯಡಿಯಲ್ಲಿ, ದೇಶದ ಅಗತ್ಯವಿರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸುವ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಒದಗಿಸಲಾಗುತ್ತಿದೆ.
ನೀವು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಅರ್ಹರಾಗಿದ್ದರೆ ಮತ್ತು ಅರ್ಜಿ ಸಲ್ಲಿಸಲು ಬಯಸಿದರೆ, ಹೇಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇದರ ಪ್ರಯೋಜನ ಪಡೆಯಲು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮಾಡಿರಬೇಕು. ಆಫ್‌ಲೈನ್ ಬ್ಯಾಂಕ್ ಮೂಲಕ ಮಾಡಿದ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ನೀವು ಪಡೆಯಲು, ಬ್ಯಾಂಕ್‌ಗೆ ಹೋಗಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಫಾರ್ಮ್ ತೆಗೆದುಕೊಳ್ಳಬೇಕು. ಫಾರ್ಮ್‌ನಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ, KYC ದಾಖಲೆಗಳನ್ನು ಸಹ ಅದರೊಂದಿಗೆ ಲಗತ್ತಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು KYC ದಾಖಲೆಗಳಾಗಿ ಬಳಸಬೇಕಾಗುತ್ತದೆ. ಇದರೊಂದಿಗೆ ನೀವು ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಸಹ ಲಗತ್ತಿಸಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, HDFC ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ನೀಡುತ್ತಿರುವ ಟಾಪ್ ಬ್ಯಾಂಕ್‌ಗಳಾಗಿದೆ.