ಕುಡಿದ ಅಮಲಿನಲ್ಲಿ ಗುದದ್ವಾರಕ್ಕೆ ಗ್ಲಾಸ್ ತುರುಕಿದ ಸ್ನೇಹಿತರು| ಅಮಲು ಇಳಿದಾಗ ವ್ಯಕ್ತಿ ಅನಂತರ ಪಟ್ಟ ಪಾಡು ಭಯಂಕರ
ಕುಡಿದ ಅಮಲಿನಲ್ಲಿ ನಡೆಯುವ ಕೆಲವೊಂದು ಅಚಾತುರ್ಯಗಳು ನಿಜಕ್ಕೂ ಬೆಚ್ಚಿಬೀಳಿಸುವಂತೆ ಮಾಡುತ್ತದೆ. ತಮಾಷೆಗೆಂದು ಮಾಡುವ ಈ ಕಾರ್ಯ ಯಾವ ರೀತಿಯ ಹಂತಕ್ಕೆ ಹೋಗುತ್ತೆ ಅನ್ನೋದಕ್ಕೆ ಈ ಒಂದು ಘಟನೆಯೇ ಸಾಕ್ಷಿ. ಹೌದು ಇದು ಸ್ನೇಹಿತರು ಕುಡಿದ ಅಮಲಿನಲ್ಲಿ ಮಾಡಿದ ಕೃತ್ಯ. ಅದರ ತೀವ್ರತೆ ಎಷ್ಟಿತ್ತೆಂದರೆ ವ್ಯಕ್ತಿ ತೀವ್ರ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಅಷ್ಟಕ್ಕೂ ಕುಡಿದ ಅಮಲಿನಲ್ಲಿ ಈ ಗೆಳೆಯರು ಮಾಡಿದ್ದಾದರೂ ಏನು ಗೊತ್ತೇ ? ತಮ್ಮ ಸ್ನೇಹಿತನ ಗುದದ್ವಾರಕ್ಕೆ ಸ್ಟೀಲ್ ಗ್ಲಾಸ್ ಅನ್ನು ಆತನ ಸ್ನೇಹಿತರೇ ಸೇರಿ ಬಲವಂತವಾಗಿ ತುರುಕಿದ್ದಾರೆ. ಈ ಅಸಹ್ಯ ಘಟನೆ ಒಡಿಶಾದ ಬೆಹ್ರಾಂಪುರದಲ್ಲಿ ನಡೆದಿದೆ. ಆದರೆ ಕುಡಿದಾಗ ನೋವು ಅರಿಯದ ಈ ವ್ಯಕ್ತಿಗೆ ಕುಡಿದ ಅಮಲು ಇಳಿದ ಮೇಲೆ ಗೊತ್ತಾಗಿದೆ. ಅದೇನೆಂದರೆ ದೈಹಿಕ ಕ್ರಿಯಾ ಕರ್ಮಗಳನ್ನು ಮಾಡಲು ಹೋದಾಗ ಈತನಿಗೆ ಉಂಟಾದ ತೀವ್ರ ನೋವಿನಿಂದ ಈತ ಆಸ್ಪತ್ರೆ ಪಾಲಾಗಿದ್ದಾನೆ.
ಗುಜರಾತ್‌ನ ಸೂರತ್‌ನಲ್ಲಿ ಕೆಲಸ ಮಾಡುತ್ತಿರುವ 45 ವರ್ಷದ ಕೃಷ್ಣ ರೌತ್, 10 ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅವನ ಸ್ನೇಹಿತರು ಕುಡಿದ ಅಮಲಿನಲ್ಲಿ ಗುದದ್ವಾರದೊಳಗೆ ಸ್ಟೀಲ್ ಗ್ಲಾಸ್ ಅನ್ನು ತುರುಕಿದ್ದಾರೆ. ಮರುದಿನದಿಂದ ಕೃಷ್ಣ ರೌತ್ ಕರುಳಿನಲ್ಲಿ ನೋವಿ ಕಾಣಿಸಿಕೊಂಡು ಬಳಲುತ್ತಿದ್ದರೂ, ಈ ವಿಚಾರವನ್ನು ತನ್ನ ಕುಟುಂಬ ಸದಸ್ಯರೊಂದಿಗೆ ಹೇಳಿಕೊಂಡಿರಲಿಲ್ಲ. ಆದರೆ ನೋವು ತೀವ್ರವಾಗುತ್ತಿದ್ದಂತೆ ಸೂರತ್ ತೊರೆದು ಗಂಜಾಂನ ತಮ್ಮ ಹಳ್ಳಿಗೆ ತೆರಳಿದ್ದಾರೆ.
ಕೃಷ್ಣ ರೌತ್ ಗ್ರಾಮಕ್ಕೆ ತಲುಪುತ್ತಿದ್ದಂತೆ, ಅವರ ಹೊಟ್ಟೆಯಲ್ಲಿ ಊತ ಹೆಚ್ಚಾಗಿದೆ. ಮತ್ತು ಮಲವಿಸರ್ಜನೆ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಅವರ ಕುಟುಂಬಸ್ಥರ ಸಲಹೆಯ ಮೇರೆಗೆ, ತಪಾಸಣೆಗಾಗಿ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದರು.
ಆಸ್ಪತ್ರೆ ಸೇರಿದ ಈತನ ಅವಸ್ಥೆ ಕಂಡು ನಿಜಕ್ಕೂ ಡಾಕ್ಟರ್ ದಿಗಿಲು ಗೊಂಡಿದ್ದರೆಂದೇ ಹೇಳಬಹುದು. ಸ್ಕ್ಯಾನಿಂಗ್ ಮೂಲಕ ಡಾಕ್ಟರ್ ಗೆ ಅಸಲಿ ಸತ್ಯ ತಿಳಿದಿದೆ. ನಂತರ ವೈದ್ಯರು ಮೊದಲು ಗುದನಾಳದ ಮೂಲಕ ಗ್ಲಾಸ್ ಅನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ತಮ್ಮ ಪ್ರಯತ್ನ ವಿಫಲವಾದಾಗ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರೊಂದಿಗೆ ಚರ್ಚಿಸಿ, ಅವರ ಸಲಹೆ ಮೇರೆಗೆ ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಭಾನುವಾರ ಬೆಹಾರ್‌ಂಪುರ ನಗರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರು ವ್ಯಕ್ತಿಯ ಕರುಳಿನಿಂದ ಸ್ಟೀಲ್ ಗ್ಲಾಸ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಹಾಕಿದ್ದಾರೆ.
ಅಂತೂ ವ್ಯಕ್ತಿ ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಇದೀಗ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಆದರೂ ಈ ರೀತಿಯ ದುಸ್ಸಾಹಸಕ್ಕೆ ಇಳಿಯಬಾರದು. ಇಲ್ಲದಿದ್ದರೆ ಈ ರೀತಿಯ ಅವಸ್ಥೆ ಪಡಬೇಕಾದೀತು.