ಭಾರತದ ಮೊದಲ ಹೈಡ್ರೋಜನ್ ಪ್ಯೂಲ್ ಸೆಲ್ ಬಸ್ ಬಿಡುಗಡೆ ; ಈ ಹೊಸ ಇಂಧನ ತಂತ್ರಜ್ಞಾನದ ವೀಡಿಯೋ ಇಲ್ಲಿದೆ ನೋಡಿ
ನಮ್ಮ ದೇಶ ದಿನ ಕಳೆದಂತೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದೆ. ಟೆಕ್ನಾಲಜಿಯಲ್ಲಿ ಮುಂದುವರಿಯುತ್ತಲೇ ಇದೆ. ಇದೀಗ ಭಾರತದ ಮೊದಲ ಮೇಡ್ ಇನ್ ಇಂಡಿಯಾ ಹೈಡ್ರೋಜನ್ ಪ್ಯೂಲ್ ಸೆಲ್ ಬಸ್ ಅನ್ನು ಬಿಡುಗಡೆ ಮಾಡಲಾಗಿದೆ.
ಪುಣೆಯ KPIT-CSIR ಈ ಬಸ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಹೊಸ ಬಸ್ ಹೈಡ್ರೋಜನ್ ಮತ್ತು ಗಾಳಿಯಲ್ಲಿ ಮಾತ್ರ ಚಲಿಸುತ್ತದೆ. ಇದರ ಉಪ ಉತ್ಪನ್ನದಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದೂ ಹೇಳಲಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರು ಹೊಸ ಹೈಡ್ರೋಜನ್ ಪ್ಯೂಲ್ ಸೆಲ್ ಬಸ್ ಗೆ ಹಸಿರು ನಿಶಾನೆ ತೋರಿಸಿ, ಈ ಹೊಸ ಇಂಧನ ತಂತ್ರಜ್ಞಾನಗಳು ಮಾಲಿನ್ಯ ಮತ್ತು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅವರು ಹೇಳಿದರು.
ಇಂಧನ ಕೋಶವು ಬಸ್ಗೆ ವಿದ್ಯುತ್ ಉತ್ಪಾದಿಸಲು ಹೈಡ್ರೋಜನ್ ಮತ್ತು ಗಾಳಿಯನ್ನು ಬಳಸುತ್ತದೆ. ಇದರಲ್ಲಿ, ನೀರು ಮಾತ್ರ ಉಪ ಉತ್ಪನ್ನವಾಗಿ ಹೊರಬರುತ್ತದೆ. 12-14 ರಷ್ಟು CO2 ಮತ್ತು ಕಣಗಳು ಡೀಸೆಲ್ ಚಾಲಿತ ಭಾರೀ ವಾಣಿಜ್ಯ ವಾಹನಗಳಿಂದ ಹೊರಸೂಸಲ್ಪಡುತ್ತವೆ. ಉದಾಹರಣೆಗೆ, ಡೀಸೆಲ್ ಚಾಲಿತ ಬಸ್ ಒಂದು ವರ್ಷದಲ್ಲಿ 100 ಟನ್ CO2 ಅನ್ನು ಹೊರಸೂಸುತ್ತದೆ. ಇಂತಹ ಲಕ್ಷಗಟ್ಟಲೆ ಬಸ್ಸುಗಳು ಭಾರತದಲ್ಲಿವೆ. ಇದೀಗ ಪರಿಸರದ ಸಂರಕ್ಷಣೆಯ ಹಿತದೃಷ್ಟಿಯಿಂದ ಈ ಬಸ್ ಸಿದ್ಧವಾಗಿದೆ.