ಲೈಂಗಿಕ ಕ್ರಿಯೆಗೆಂದು ಲಾಡ್ಜ್ ಗೆ ಹೋದ ಜೋಡಿ| ಕೋಣೆಯೊಳಗೆ ಹೋದ 28ರ ಯುವಕನಿಗೆ ಕ್ರಿಯೆಯಲ್ಲಿ ತೊಡಗುವಾಗಲೇ ಹೃದಯಾಘಾತ!!!

ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಹುಡುಗ ಹುಡುಗಿ ರಾತ್ರಿ ಕಳೆಯಲೆಂದು ಲಾಡ್ಜ್ ಗೆ ಬಂದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ತೊಡಗುವ ವೇಳೆಯಲ್ಲಿ ಯುವಕನಿಗೆ ಏಕಾಏಕಿ ಹೃದಯಾಘಾತವಾಗಿದ್ದು, ಕುಸಿದು ಬಿದ್ದು ಮೃತಪಟ್ಟಿರುವ ಘಟನೆಯೊಂದು ನಡೆದಿದೆ.
ನಾಗ್‌ಪುರದಲ್ಲಿ ತನ್ನ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆಗೆ ತೊಡಗಿದ್ದ ಸಂದರ್ಭ ವ್ಯಕ್ತಿಯೊಬ್ಬ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ.

28 ವರ್ಷದ ಅಜಯ್ ಪರ್ಟೆಕಿ ಸಾವೊನೆರ್‌ನ ಲಾಡ್ಜ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ದೃಷ್ಟಿಯಲ್ಲಿ ಪಾರ್ಟೆಕಿ ಅವರಿಗೆ ಹೃದಯ ಸ್ತಂಭನವಾಗಿದೆ ಎಂದು ಹೇಳಲಾಗಿದೆ. ಪಾರ್ಟೆಕಿ ಮತ್ತು ಮಧ್ಯಪ್ರದೇಶದ ಛಂದವಾಡದ ನರ್ಸ್ ಆಗಿರುವ 23 ವರ್ಷದ ಹುಡುಗಿಯೊಂದಿಗೆ ಕಳೆದ ಮೂರು ವರ್ಷಗಳಿಂದ ಪರಿಚಯಸ್ಥರು. ಇವರಿಬ್ಬರ ಸಂಬಂಧದ ಬಗ್ಗೆ ಮನೆಯವರಿಗೂ ವಿಷಯ ತಿಳಿದಿತ್ತು. ಇವರಿಬ್ಬರು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದರು. ಪರ್ತೇಕಿ ಮದುವೆಗೆ ಗೆಳತಿಯ ತಾಯಿಯನ್ನೂ ಸಂಪರ್ಕಿಸಿದ್ದ. ಮುಂದಿನ ದಿನಗಳಲ್ಲಿ ಈ ಜೋಡಿ ಮದುವೆಯಾಗಬೇಕೆಂದು ನಿರ್ಧರಿಸಿದ್ದರು. ಆದ್ರೆ ಈ ಮಧ್ಯೆ ಯುವಕ ಕುಸಿದು ಬಿದ್ದಿದ್ದಾನೆ.

ಮದುವೆಯಾಗಲು ನಿರ್ಧರಿಸಿದ್ದರೂ ಇಬ್ಬರೂ, ಸಂಜೆ 4ರ ವೇಳೆಗೆ ಲಾಡ್ಜ್ ಗೆ ಹೋಗಿದ್ದಾರೆ. ಸುಮಾರು ಅರ್ಧ ಗಂಟೆಯ ನಂತರ ಇಬ್ಬರೂ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಸಂದರ್ಭ ಯುವಕ ಹಾಸಿಗೆಯ ಮೇಲೆ ಕುಸಿದು ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ತಕ್ಷಣ ಲಾಡ್ಜ್ ಸಿಬ್ಬಂದಿಯನ್ನು ಕರೆದಿದ್ದಾಳೆ. ನಂತರ ಅವರು ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಯುವಕ ಮೃತಪಟ್ಟಿದ್ದಾನೆ ಎಂಬುದಾಗಿ ಡಾಕ್ಟರ್ ಹೇಳಿದ್ದಾರೆ. ಮೃತ ವ್ಯಕ್ತಿ ಚಾಲಕನಾಗಿದ್ದು, ವೆಲ್ಡಿಂಗ್ ವೃತ್ತಿ ಕೂಡಾ ಮಾಡುತ್ತಿದ್ದ.

ಯುವಕ ಯಾವುದೇ ಡ್ರಗ್ಸ್ ಸೇವಿಸಿದ ಬಗ್ಗೆ ಪೊಲೀಸರಿಗೆ ಪುರಾವೆಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕನಿಗೆ ಕಳೆದೆರಡು ದಿನಗಳಿಂದ ಜ್ವರವಿತ್ತು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಅಷ್ಟು ಮಾತ್ರವಲ್ಲ ಆಲ್ಕೋಹಾಲ್ ಕೂಡಾ ಸೇವಿಸಿರುವುದರ ಬಗ್ಗೆಯೂ ಪರೀಕ್ಷೆಯಲ್ಲಿ ಪತ್ತೆಯಾಗಿಲ್ಲ. ಹಾಗಾಗಿ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ಸಾವಿಗೆ ಪ್ರಾಥಮಿಕ ಕಾರಣ ಹೃದಯಾಘಾತ ಎಂದು ಹೇಳಿದ್ದಾರೆ. ಸಾವೋನರ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

ಲೈಂಗಿಕತೆಯಲ್ಲಿ ತೊಡಗಿಕೊಳ್ಳುವಾಗ ಹೃದಯ ಸ್ನಾಯುಗಳಿಗೆ ರಕ್ತ ಮತ್ತು ಆಮ್ಲಜನಕದ ಹೆಚ್ಚಿನ ಅವಶ್ಯಕತೆಯಿರುತ್ತದೆ. ಅದು ಪೂರೈಕೆಯಾಗದಿದ್ದಾಗ ಸಾವು ಸಂಭವಿಸುತ್ತದೆ. ಹೈಪರ್ಟ್ರೋಫಿಕ್ ಕಾರ್ಡಿಯಾಕ್ಮಿಯೋಪತಿ (ಹೃದಯ ಸ್ನಾಯುಗಳ ದಪ್ಪವಾಗುವುದು) ದಿಂದ ಬಳಲುತ್ತಿರುವ ಜನರು ಲೈಂಗಿಕತೆಯಂತಹ ಚಟುವಟಿಕೆಯ ಸಮಯದಲ್ಲಿ ಸಾಯಬಹುದು ಎಂಬುದಾಗಿ ತಜ್ಞರ ಅಭಿಪ್ರಾಯ.

ಆದರೆ ಮೃತ ವ್ಯಕ್ತಿಯ ಜೇಬಿನಲ್ಲಿ ವಯಾಗ್ರ ಮಾತ್ರೆಗಳು ಪತ್ತೆಯಾಗಿದ್ದು, ಮಿತಿಮೀರಿದ ಸೇವನೆಯಿಂದ ಆತ ಸಾವನ್ನಪ್ಪಿರಬಹುದು ಎಂಬ ಶಂಕೆ ಕೂಡಾ ವ್ಯಕ್ತವಾಗಿದೆ. ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆಗೆ ಇದನ್ನು ಬಳಸಲಾಗುತ್ತದೆ‌. ಡಾಕ್ಟರ್ ಸಂಪರ್ಕಿಸದೆ, ವಯಾಗ್ರದ ಸೇವನೆಯು ಕೆಲವು ತೀವ್ರವಾದ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಇದು ಹೃದಯಾಘಾತಕ್ಕೆ ಕಾರಣವಾಗಬಹುದು .

Leave A Reply

Your email address will not be published.