ಕಾಫಿನಾಡು ಚಂದುವಿಗೆ ಊರವರಿಂದಲೇ ಕ್ಲಾಸ್; ಯಾಕಾಗಿ?

ಕಾಫಿನಾಡು ಅಂದಾಕ್ಷಣ ಇದೀಗ ನಮಗೆ ತಟ್ ಅಂತ ನೆನಪಿಗೆ ಬರೋದೇ ಚಂದು ಹೆಸರು. ಹೌದು. ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ತನ್ನದೇ ಆದ ಫ್ಯಾನ್ಸ್ ಹೊಂದಿರುವ ಕಾಫಿನಾಡು ಚಂದು ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಐಕಾನ್ ಆಗಿದ್ದಾರೆ.

 

ಹ್ಯಾಪಿ ಬರ್ತಡೇ ಸಾಂಗ್ ಗಳನ್ನು ಹಾಡುವ ಮೂಲಕ ಎಲ್ಲರಿಗೆ ಪರಿಚಯವಾದ ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಮಿಂಚುತ್ತಿರುವ ಯುವಕ. ಸಾಂಗ್ ಮಾತ್ರವಲ್ಲ, ಡ್ಯಾನ್ಸ್ , ಡೈಲಾಗ್ ಗಳನ್ನು ಹೇಳುವ ಮೂಲಕ ಸ್ಟಾರ್ ಆಗಿರುವ ಕಾಫಿನಾಡು ಚಂದ್ರುವಿಗೆ ಶಿವಣ್ಣನನ್ನು ಮೀಟ್ ಮಾಡುವ ಬಯಕೆ ಇತ್ತು. ಇದೀಗ ಅದನ್ನೂ ಜೀ ಕನ್ನಡ ವೇದಿಕೆಯಲ್ಲಿ ನೆರವೇರಿಸಿಕೊಂಡಿದ್ದಾನೆ.

ಚಂದು ಹುಟ್ಟುಹಬ್ಬದ ಶುಭಾಶಯ ಕೋರುವ ಶೈಲಿ ಟ್ರೆಂಡ್​​ ಆಗಿದೆ. ಅನೇಕರು ಚಂದು ಬಳಿ ವಿಶ್ ಮಾಡಿಸಿಕೊಳ್ಳಲು ಕಾಯುತ್ತಿರುತ್ತಾರೆ. ಅವರ ಬಳಿ ಹಾಡು ಹೇಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬೀಳುತ್ತಾರೆ. ಆದ್ರೆ, ಇದೀಗ ಚಂದುವಿಗೆ ಊರವರಿಂದಲೇ ಬೈಗುಳ ದೊರೆತಿದೆ.

ಹೌದು. ಜನ ಆಟೋ ಒಡಿಸಲು ಬಿಡದೆ ಹಾಡು ಹೇಳುವಂತೆ ಪೀಡಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಕಾಫಿನಾಡಿಲ್ಲೇ ಚಂದುಗೆ ಜನರು ಧಮಿಕಿ ಹಾಕಿದ್ದಾರೆ. ಹಾಡು ಹೇಳಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಚಂದು ಆಟೋ ಓಡಿಸಬೇಕು ಈಗ ಹಾಡಲ್ಲ 4 ಗಂಟೆ ಮೇಲೆ ಎನ್ನುತ್ತಾ ಅಲ್ಲಿಂದ ಹೊರಟರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ, ಕಾಫಿನಾಡು ಚಂದು ಅಲಿಯಾಸ್ ಚಂದ್ರಶೇಖರ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರಿನ ಭಾಗಮನೆ ಗ್ರಾಮದ ನಿವಾಸಿ. ಓದಿರುವುದು ಒಂಬತ್ತನೇ ತರಗತಿ, ಆದ್ರೆ ಸಾಮಾಜಿಕ ಕಳಕಳಿ , ಮುಗ್ಧಮನಸ್ಸಿನ ಯುವಕ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದಂತಹ ಹವಾ ಸೃಷ್ಟಿ ಮಾಡುವ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಹೆತ್ತವರು ಚಂದ್ರಶೇಖರ್ ನಿಂದ ಅಗಲಿದ್ದರೂ ಅವರ ನೆನಪಿನಲ್ಲೇ ಈಗಾಲೂ ಇದ್ದಾರೆ. ತಾಯಿ ಅನ್ಯಾರೋಗಕ್ಕೆ ಒಳಾಗದ ಸಮಯದವನ್ನು ನೆನೆದು ಕಣ್ಣೀರು ಹಾಕುತ್ತಾರೆ. ಕಾಫಿನಾಡು ಚಂದುವಿಗೆ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಇವರು ಫೇಮಸ್ ಆಗಿದ್ದು, ಅವರ ಹ್ಯಾಪಿ ಬರ್ತ್ ಡೇ ಹಾಡುಗಳಿಂದಲೇ..

Leave A Reply

Your email address will not be published.