‘ಜೊತೆಜೊತೆಯಲಿ’ ಸೀರಿಯಲ್ : ಅನಿರುದ್ಧ ಪಾತ್ರಕ್ಕೆ “ರಂಗಿತರಂಗ” ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ?!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಧಾರಾವಾಹಿಯ ಜಗಳ ಈಗ ಜಗತ್ ಜಾಹೀರಾಗಿದೆ. ಈ ಧಾರಾವಾಹಿಯ ನಾಯಕ ನಟ ಅನಿರುದ್ಧ ಹಾಗೂ ನಿರ್ದೇಶಕ ಆರೂರು ಜಗದೀಶ್ ಮತ್ತು ವಾಹಿನಿ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ನಂತರ ಇಬ್ಬರೂ ಆರೋಪ ಪ್ರತ್ಯಾರೋಪ ಮಾಡಿ ಸುದ್ದಿಗೋಷ್ಠಿ ಮಾಡಿ ಜನರಿಗೆ ಅವರವರ ಅಭಿಪ್ರಾಯ ಘಟನೆಗಳನ್ನು ತಿಳಿಸಿದ್ದಾರೆ.

 

ಈ ಮಧ್ಯೆ ಅನಿರುದ್ಧ ಅವರು ನಿರ್ವಹಿಸುತ್ತಿದ್ದ ಪಾತ್ರಕ್ಕೆ ವಿಕ್ರಾಂತ್ ರೋಣ, ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿಯರನ್ನು ಚಾನೆಲ್ ಕರೆತರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ನಿರ್ದೇಶಕರು ಮತ್ತು ಜೀ ಕನ್ನಡ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಸಿಗಬೇಕಿದೆ. ನೋಡೋದಕ್ಕೂ ಕೂಡಾ ಅನೂಪ್ ಬಿಳಿ ಗಡ್ಡ ಹಾಗೂ ಬಿಳಿ ಕೂದಲು ಹೊಂದಿದ್ದು ಪಾತ್ರಕ್ಕೆ ಸೂಟ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಜೀ ಕನ್ನಡ ವಾಹಿನಿಯಿಂದ ಅಧಿಕೃತ ಮಾಹಿತಿ ಬರಬೇಕಷ್ಟೇ.

Leave A Reply

Your email address will not be published.