ಗಂಡನ ಮನೆಯವರಿಗೆ ಫುಲ್ ಟಾರ್ಚರ್ ಕೊಟ್ಟ ನವವಿವಾಹಿತೆ | ಲಕ್ಷಗಟ್ಟಲೆ ಹಣದೊಂದಿಗೆ ಗ್ರೇಟ್ ಎಸ್ಕೇಪ್

ಎಲ್ಲಾ ಕಡೆ ವಿಚಾರಿಸಿ ಮದುವೆ ಆಗಿ ಸುಖ ಸಂಸಾರ ಮಾಡುವುದೆಂದರೆ ಒಂದು ಸವಾಲೇ ಸರಿ. ಅದರಲ್ಲಿ ಕೆಲವರು ಗೆಲ್ತಾರೆ. ಇನ್ನೂ ಕೆಲವರು ಸೋಲ್ತಾರೆ. ಇಲ್ಲೊಬ್ಬಳು ಖತರ್ನಾಕ್ ಹೆಣ್ಣು ಮದುವೆಯಾಗಿದ್ದೇ ಗಂಡನ ಮನೆಯನ್ನು ಲೂಟಿ ಮಾಡೋಕೆ ಅನ್ನೋ ರೀತಿಯಲ್ಲಿ ವರ್ತಿಸಿದ್ದಾರೆ.

 

ಮದುವೆಯಾದ ಹೊಸದರಲ್ಲೇ, ಪತಿ ಕುಟುಂಬವನ್ನು ಟಾರ್ಗೇಟ್ ಮಾಡಿ ಮಾನಸಿಕ ಹಿಂಸೆ ಕೊಟ್ಟು ಪತ್ನಿಯಾದಾಕೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈಕೆ ಮದುವೆಯಾಗಿದ್ದೇ, ಹಣದ ಆಸೆಗೋಸ್ಕರ. ಮದುವೆಯಾಗಿರುವುದು ಈಕೆಯ ಉದ್ದೇಶವಾಗಿದೆಯೇ ಎಂಬುವುದು ಗಂಡನ ಮನೆಯವರಿಗೆ ಮದುವೆಯಾದ ಮೊದಲ ದಿನದಿಂದಲೇ ಗೊತ್ತಾಗಿದೆ. ಈಗ ಪತಿ ಕುಟುಂಬಕ್ಕೆ ಟಾರ್ಚರ್ ಕೊಟ್ಟು ಸೊಸೆ ಪರಾರಿಯಾಗಿದ್ದಾಳೆ. ಸೊಸೆಯ ವರ್ತನೆಗೆ ರೋಸಿ ಹೋಗಿದ್ದ ನೊಂದ ಕುಟುಂಬ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದೆ.

ಪದ್ಮನಾಭ ನಗರದ ಕಮಲ ಎಂಬುವವರು ತನ್ನ ಮಗನಿಗೆ ಯುವತಿಯೊಬ್ಬಳ ಜೊತೆ ಎಂಗೇಜ್ಮೆಂಟ್ ಫಿಕ್ಸ್ ಮಾಡಿದ್ದಾರೆ. ಆದರೆ ಕೌಟುಂಬಿಕ ಕಾರಣದಿಂದ ಎಂಗೇಜ್ಮೆಂಟ್ ಕ್ಯಾನ್ಸಲ್ ಆಗಿತ್ತು. ಹಾಗಾಗಿ ಪರಿಚಿತರು ಕಮಲ ಅವರ ಮಗನಿಗೆ ಬೇರೆ ಹುಡುಗಿ ನೋಡಿ ಗೌತಮಿ ಅನ್ನೋ ಹುಡುಗಿ ಜೊತೆ ಮದುವೆ ಮಾಡಿಸಿದ್ದಾರೆ. ಅಲ್ಲಿಂದ ಶುರುವಾಯಿತು ನೋಡಿ, ಮದುವೆಯಾದ ದಿನದಿಂದಲೇ ಪತ್ನಿಯಿಂದ ಕಿರಿಕಿರಿ ಶುರು ಮಾಡಿದ್ದಾಳೆ.

ಮದುವೆಯಾದ ಬಳಿಕ ಮಗನ ಜೊತೆ ಸೊಸೆಯನ್ನು ಅಮೆರಿಕಾಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗಿತ್ತು. ಗೌತಮಿ ಮದುವೆಗೂ ಮುಂಚೆ ಅಮೆರಿಕಾಗೆ ಹೋಗುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಳು. ಆದರೆ ಮದುವೆಯಾದ ಬಳಿಕ ಫುಲ್ ಮನಸ್ಸು ಬದಲಿಸಿದ್ದಾಳೆ. ಮೆಡಿಕಲ್ ವೀಸಾದಲ್ಲಿ ನಿಮ್ಮ ಮಗ ಮಾತ್ರ ಅಮೆರಿಕಾಗೆ ಹೋಗುತ್ತಾನೆ ಎಂದು ಹೇಳಿದ್ದಾಳೆ. ಹೀಗಾಗಿ 50
ಸಾವಿರ ರೂಪಾಯಿ ಖರ್ಚು ಮಾಡಿ ಗೌತಮಿಗೆ ವೀಸಾ ಮಾಡಿಸಿದ್ದಾರೆ. ಅಮೆರಿಕಾಗೆ ತೆರಳಲು 1.25 ಲಕ್ಷ ರೂಪಾಯಿ ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದ್ದರೂ ಗೌತಮಿ ತನ್ನ ಗಂಡನ ಜೊತೆ ಅಮೆರಿಕಾಗೆ ಹೋಗದೆ ಪತಿಯ ಮನೆಯಲ್ಲಿದ್ದ ಹಣ, ಚಿನ್ನ ಕದ್ದು ಪರಾರಿಯಾಗಿದ್ದಾಳೆ.

ಗಂಡನ ಮನೆಯಲ್ಲಿದ್ದ 10 ಲಕ್ಷ ಹಣ, ಚಿನ್ನಾಭರಣ ಹಾಗೂ ಮದುವೆ ಸಮಯದಲ್ಲಿ ಗಂಡನ ಮನೆಯವರು ನೀಡಿದ್ದ ಕೋಟ್ಯಂತರ ರೂ.ಬೆಲೆ ಬಾಳುವ ಡೈಮಂಡ್ ಹಾಗೂ ಚಿನ್ನಾಭರಣ ಸಮೇತ ತಾಯಿ ಮನೆ ಸೇರಿದ್ದಾಳೆ. ತಾಯಿ ಮನೆಗೆ ಹೋಗಿ ನಾನು ಯಾವುದೇ ಕಾರಣಕ್ಕೂ ಬರಲ್ಲ ಎಂದು ಅವಾಜ್ ಹಾಕಿದ್ದಾಳೆ. ಬಂದ್ರೆ ನೀವೇ ಕಿರುಕುಳ ಕೊಡ್ತೀರಾ ಅಂಥ ಕೇಸ್ ದಾಖಲಿಸ್ತೀನಿ ಅಂಥ ಬೆದರಿಕೆ ಹಾಕಿದ್ದಾಳೆ.

ಮದುವೆ ಸಮಯದಲ್ಲಿ ಗೌತಮಿಗೆ 18 ಲಕ್ಷದ 81 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣ, 3 ಲಕ್ಷದ 50 ಸಾವಿರ ರೂ. ಬೆಲೆ ಬಾಳುವ ಬಟ್ಟೆ, ಅಲ್ಲದೆ ಸೊಸೆಯ ವಿದ್ಯಾಭ್ಯಾಸ ಸಲುವಾಗಿ 40.2 ಲಕ್ಷ ಹಣವನ್ನು ವೀಸಾ ಫಂಡ್ ಸಲುವಾಗಿ ಸೇವಿಂಗ್ಸ್ ಖಾತೆ ತೆರೆದು ಹಣ ಟ್ರಾನ್ಸ್ ಫರ್ ಮಾಡಲಾಗಿತ್ತು. ಸದ್ಯ ಬನಶಂಕರಿ ಠಾಣೆ ಪೊಲೀಸರು ಸೊಸೆಗಾಗಿ ಹುಡುಕಾಡುತ್ತಿದ್ದಾರೆ.

Leave A Reply

Your email address will not be published.