ವಿಟ್ಲ: ದ್ವಿಚಕ್ರ ವಾಹನ ಅಪಘಾತ: ಸಹಸವಾರ ಮೃತ್ಯು

Share the Article

ವಿಟ್ಲ: ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದ ಸಹ ಸವಾರ ಸಾವನ್ನಪ್ಪಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಲ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿ ನಡೆದಿದೆ.

ಮಂಕುಡೆ ಅಮೈ ನಿವಾಸಿ ಸಂಜೀವ ಶೇಖರ ಎಂಬವರ ಪುತ್ರ ವಿಕಲಚೇತನರಾಗಿದ್ದ ಚಂದ್ರಹಾಸ (50) ಮೃತ ದುರ್ದೈವಿ.

ವಿಟ್ಲದ ಕುಡ್ತಮುಗೇರು ಸಮೀಪ ಬೈಕ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ದ್ವಿಚಕ್ರ ವಾಹನದ ಸಹ ಸವಾರ ವಿಕಲಚೇತನರಾದ ಚಂದ್ರಹಾಸ ರವರು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Leave A Reply