“ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದು ತಪ್ಪಲ್ಲ” ಆಶ್ಚರ್ಯಕರ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್, ಗಲಿಬಿಲಿಗೊಂಡ ಹಿಂದೂ ಕಾರ್ಯಕರ್ತರು !
ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ರಾಜ್ಯದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ನಡುವೆಯೂ ಸಿದ್ಧರಾಮಯ್ಯ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ತಪ್ಪಲ್ಲ ಎಂಬುದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಅಚ್ಚರಿಯ ಹೇಳಿಕೆ ನೀಡಿ ಹಿಂದೂ ಭಕ್ತರಿಗೆ ಗಾಬರಿ ಮೂಡಿಸಿದ್ದಾರೆ. ಆ ಮೂಲಕ ಸಿದ್ಧರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಸದಾಕಾಲ ಹಿಂದುತ್ವದ ಪರವಾಗಿ ಕಟ್ಟರ್ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ಪ್ರಮೋದ್ ಮುತಾಲಿಕ್ ಅವರ ಈ ಹೇಳಿಕೆ ಹಿಂದು ವಲಯಗಳಲ್ಲಿ ಗಲಿಬಿಲಿ ಉಂಟುಮಾಡಿದೆ.
ಈ ಕುರಿತು ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಲ್ಲಿ ಅನೇಕರ ದೇವರಿಗೂ ಮಾಂಸಾಹಾರ ಪ್ರಸಾದ ಮಾಡುತ್ತಾರೆ. ಸೇವಿಸಿಯೂ ದೇವಸ್ಥಾನಕ್ಕೆ ಹೋಗುತ್ತಾರೆ. ಅದೇ ರೀತಿ ಸಿದ್ಧರಾಮಯ್ಯ ಸಹ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಿದ್ಧರಾಮಯ್ಯ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ಚರ್ಚೆಯ ವಿಷಯವೇ ಅಲ್ಲ. ಬಿಜೆಪಿಯವರಿಗೆ ಬೇರೆ ವಿಷಯ ಸಿಗದೆ ಸುಮ್ಮನೆ ಕಾಂಗ್ರೆಸ್ ಅವರ ಕಾಲು ಎಳೆಯಲು ಸದಾ ಏನೋ ಒಂದು ಕೆಣಕುತ್ತಾ ಇರುತ್ತೆ . ಅದಕ್ಕೆ ಹೀಗೆ ಸಿದ್ಧರಾಮಯ್ಯ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದನ್ನು ಚರ್ಚಿಸುತ್ತಿದ್ದಾರೆ. ಬಿಜೆಪಿಯನ್ನು ದೂರುವ ಸಂದರ್ಭದಲ್ಲಿ, ಮತ್ತು ದೂರಲೇಬೇಕಾದ ಅನಿವಾರ್ಯತೆಯಲ್ಲಿ ಈ ಹೇಳಿಕೆ ನೀಡಿದರಾ ಎಂಬುದು ಈಗ ಚರ್ಚಾ ವಸ್ತುವಾಗಿದೆ.