Bigg News | Miss Universe -ಭುವನ ಸುಂದರಿ ಸ್ಪರ್ಧೆ: ತಾಯಂದಿರೂ, ವಿವಾಹಿತೆಯರಿಗೂ ಇನ್ಮುಂದೆ ಅವಕಾಶ !

ವಿವಾಹಿತೆಯರಿಗೆ ಮತ್ತು ತಾಯಂದಿರಿಗೆ ಒಳ್ಳೆಯ ಸುದ್ದಿ ಬಂದಿದೆ. ಕೇವಲ ಮದುವೆಯಾದ ಕಾರಣಕ್ಕಾಗಿ ಇಲ್ಲಿಯ ತನಕ ಭವನ ಸುಂದರಿ ಸ್ಪರ್ಧೆಯಲ್ಲಿ ತಾಯಂದಿರು ಮತ್ತು ವಿವಾಹಿತ ಮಹಿಳೆಯರು ಭಾಗವಹಿಸುವಂತಿಲ್ಲ ಮುಂದಿನ ವರ್ಷದಿಂದ “ಭುವನ ಸುಂದರಿ’ ಸ್ಪರ್ಧೆಯಲ್ಲಿ ವಿವಾಹಿತೆಯರು ಮತ್ತು ತಾಯಂದಿರೂ ಪಾಲ್ಗೊಳ್ಳಬಹುದು! ಈ ಮೂಲಕ ಸೌಂದರ್ಯಾ ಎನ್ನುವುದು ಯಾರೊಬ್ಬರ ಸ್ವತ್ತಲ್ಲ ಎನ್ನುವ ಚಿಂತನೆಗೆ ಬೆಂಬಲ ಸಿಕ್ಕಿದೆ. ವಿವಾಹಿತ ಮಹಿಳೆಯರ ಕನಸಿಗೂ ನವಿಲಗರಿಗಳ ತಣ್ಣನೆಯ ಲೇಪನ ಸ್ಪರ್ಶಿಸಿದೆ.

 

ಇದೇ ಮೊದಲ ಬಾರಿಗೆ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದ್ದು, 2023 ರಿಂದ ಮಿಸ್‌ ಯುನಿವರ್ಸ್‌ ಸ್ಪರ್ಧೆಗೆ ನಿಮ್ಮ ವೈವಾಹಿಕ ಅಥವಾ ಪೋಷಕ ಸ್ಥಾನಮಾನ ಅಡ್ಡಿಯಾಗುವುದಿಲ್ಲ ಎಂದು ಹೇಳಲಾಗಿದೆ.

ಈವರೆಗಿನ ನಿಯಮದ ಪ್ರಕಾರ, ಮಿಸ್‌ ಯುನಿವರ್ಸ್‌ ಸ್ಪರ್ಧೆಯಲ್ಲಿ ವಿವಾಹಿತರಿಗೆ, ತಾಯಂದಿರಿಗೆ ಅವಕಾಶವಿರಲಿಲ್ಲ. ಅಲ್ಲದೇ, ಭುವನಸುಂದರಿ ಕಿರೀಟ ತೊಟ್ಟವರು ಆ ಕಿರೀಟ ಮತ್ತೊಬ್ಬರಿಗೆ ಹಸ್ತಾಂತರ ಆಗುವವರೆಗೂ ವಿವಾಹ ಆಗುವಂತಿರಲಿಲ್ಲ ಹಾಗೂ ಗರ್ಭ ಧರಿಸುವಂತಿರಲಿಲ್ಲ!. ಇನ್ಮುಂದೆ ಇಂತಹಾ ಯಾವುದೇ ಕಟ್ಟುಪಾಡುಗಳು ಇರೋದಿಲ್ಲ.

Leave A Reply

Your email address will not be published.