ಮಂಗಳೂರು : ಕೊಲೆ ಯತ್ನ ಪ್ರಕರಣದ ಆರೋಪಿ ಮಿಸ್ತಾ ಮೇಲೆ ಫೈರಿಂಗ್ !

ಮಂಗಳೂರು: ಮತ್ತೆ ಕರಾವಳಿಯಲ್ಲಿ ಗುಂಡಿನ ಸದ್ದು ಮೊಳಗಿದೆ. ಪೊಲೀಸರು ಫೈರ್ ಓಪನ್ ಮಾಡಿದ್ದಾರೆ. ಕಳೆದ ಕೆಲ ವಾರಗಳಿಂದ ಹಲವು ಕ್ರೈಮ್ ಚಟುವಟಿಕೆಗಳಿಂದ ದೇಶಾದ್ಯಂತ ಗಮನ ಸೆಳೆದಿದ್ದ ಮಂಗಳೂರಿನಲ್ಲಿ ಇಂದು ಸಂಜೆ ಮತ್ತೆ ಗುಂಡಿನ ಸದ್ದು ಮೊಳಗಿ ಜನ ಆತಂಕ ಅನುಭವಿಸಿದ್ದಾರೆ. ಇಲ್ಲಿ1 ಹಲವು‌ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ‌ಯೊಬ್ಬನನ್ನು ಸ್ಥಳ ಮಹಜರಿಗೆ ಕರೆತಂದಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು ಈ ವೇಳೆ‌‌ ಪೊಲೀಸರು‌ ಫೈರಿಂಗ್ ‌ಮಾಡಿದ ಘಟನೆ ಮಂಗಳೂರಿನಲ್ಲಿ‌‌ ನಡೆದಿದೆ‌.

 

ಆರೋಪಿ ಮಿಸ್ತಾ ಎಂಬಾತನ ಮೇಲೆ‌ ಪೊಲೀಸ್ ಫೈರಿಂಗ್ ಮಾಡಲಾಗಿದೆ. ಇತ್ತೀಚೆಗೆ ನಗರದ 1ಹೊರವಲಯದಲ್ಲಿ ನಡೆದ ಚಾಕು ಇರಿತ ಪ್ರಕರಣ ಸಂಬಂಧ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಈತನನ್ನು ಸೋಮವಾರ ಸ್ಥಳ ಮಹಜರಿಗಾಗಿ ಘಟನಾ ಸ್ಥಳಕ್ಕೆ ಕರೆತರಲಾಗಿತ್ತು.

ಈ ವೇಳೆ ಆರೋಪಿ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಅನಿವಾರ್ಯವಾಗಿ ರಿವಾಲ್ವರ್ ಕೈಗೆತ್ತಿಕೊಂಡಿದ್ದಾರೆ. ಆರೋಪಿಯ ಮೇಲೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೂ ಬರಬೇಕಿದೆ.

ಘಟನೆ ವಿವರ : ಆಗಸ್ಟ್ 19ರ ಸಂಜೆ ವೇಳೆಗೆ 16ವರ್ಷದ ಬಾಲಕನೋರ್ವ ಸಾಮಾನು ತರಲೆಂದು ಅಂಗಡಿಗೆ ಬಂದಿದ್ದು, ಈ ವೇಳೆ ದಾರಿಯಲ್ಲಿ ಸಿಕ್ಕ ತಂಡವೊಂದು ಆತನನ್ನು ತಡೆದು ಹಲ್ಲೆಗೆ ಮುಂದಾಗಿದೆ. ಈ ಸಂದರ್ಭ ಆತನ ಮಾವ ಅದೇ ದಾರಿಯಲ್ಲಿ ಬಂದಿದ್ದು, ತಡೆಯಲು ಮುಂದಾದಾಗ ತಂಡವು ಬಾಲಕನ ಮಾವನ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ ಎನ್ನಲಾಗಿದೆ.

ಸದ್ಯ ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದಾಳಿ ನಡೆಸಿದ ತಂಡದಲ್ಲಿದ್ದ ಇಬ್ಬರ ವಿರುದ್ಧ ಈಗಾಗಲೇ ಜಿಲ್ಲೆಯ ಹಲವು ಠಾಣೆಗಳಲ್ಲಿ ಪ್ರಕರಣಗಳಿದ್ದು, ಕೆಲವು ಬಾರಿ ಜೈಲೂಟ ಸವಿದರೂ ಮತ್ತದೇ ಚಾಳಿ ಮುಂದುವರಿಸಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Leave A Reply

Your email address will not be published.