ರೂ.500 ದಿನಗೂಲಿ ಸಂಪಾದಿಸುವ ಕಾರ್ಮಿಕನಿಗೆ Income Tax ನೋಟಿಸ್ | ತೆರಿಗೆ ಬಿಲ್ ನೋಡಿ ಅವಕ್ಕಾದ ವ್ಯಕ್ತಿ!!!

ದಿನಗೂಲಿ ನೌಕರನೋರ್ವನಿಗೆ ತೆರಿಗೆ ಇಲಾಖೆಯು ಲಕ್ಷಗಟ್ಟಲೇ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದ್ದು, ನಿಜಕ್ಕೂ ಆ ಕಾರ್ಮಿಕ ತಲೆಮೇಲೆ ಕೈ ಇಡುವಂತೆ ಮಾಡಿದೆ. ಈ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.

 

ಆದಾಯ ತೆರಿಗೆ ಇಲಾಖೆಯು ಆ ಕಾರ್ಮಿಕನಿಗೆ 37.5 ಲಕ್ಷ ರೂಪಾಯಿಗಳ ‘ಬಾಕಿ ಪಾವತಿಸುವಂತೆ ಆದೇಶಿಸಿರುವ ನೋಟಿಸ್ ಕಂಡು ನಿಜಕ್ಕೂ ಆಘಾತಗೊಂಡಿದ್ದಾರೆ.
ದಿನಕ್ಕೆ ಸುಮಾರು 500 ರೂಪಾಯಿ ಸಂಪಾದಿಸುವ ಖಗಾರಿಯಾ ಜಿಲ್ಲೆಯ ಮಘನಾ ಗ್ರಾಮದ ನಿವಾಸಿ ಗಿರೀಶ್ ಯಾದವ್ ಅವರು, ನೋಟಿಸ್ ವಿಚಾರವಾಗಿ ಸಂಬಂಧಿಸಿದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ.

ಗಿರೀಶ್ ಅವರು ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಮೇಲ್ನೋಟಕ್ಕೆ ಇದೊಂದು ವಂಚನೆ ಎಂದು ತೋರುತ್ತದೆ ಎಂದು ಅಲೌಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪುರೇಂದ್ರ ಕುಮಾರ್ ತಿಳಿಸಿದ್ದಾರೆ.

ದೂರುದಾರರು ತನ್ನ ಹೆಸರಿನಲ್ಲಿ ನೀಡಲಾಗಿರುವ ಪಾನ್ ಕಾರ್ಡ್ ಸಂಖ್ಯೆಯ ವಿರುದ್ಧವೇ ನೋಟಿಸ್ ಸ್ವೀಕರಿಸಿದ್ದಾರೆ. ಆದರೆ, ದೆಹಲಿಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವ ಗಿರೀಶ್, ಓರ್ವ ದಳ್ಳಾಳಿ ಮೂಲಕ ಪಾನ್ ಕಾರ್ಡ್ ಮಾಡಿಸಲು ಪ್ರಯತ್ನ ಪಟ್ಟಿದ್ದಾಗಿ ಹೇಳಿದ್ದಾರೆ. ಮೇಲಾಗಿ, ನೋಟಿಸ್‌ನಲ್ಲಿ ಗಿರೀಶ್ ರಾಜಸ್ಥಾನ ಮೂಲದ ಕಂಪನಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಲಾಗಿದೆ.

Leave A Reply

Your email address will not be published.