BIGG BOSS Kannada OTT :” ಲವ್ ಬರ್ಡ್ಸ್‌” ಗೆ ಕಿಚ್ಚನ ವಾರ್ನಿಂಗ್! ಈ ರೀತಿ ಮಾಡ್ತಿದ್ರೆ ಗೇಟ್ ಪಾಸ್ ಫಿಕ್ಸ್!

ಬಿಗ್ ಬಾಸ್ ಒಟಿಟಿ ಈಗ ಭಾರೀ ಕುತೂಹಲಘಟ್ಟದ ಹಂತಕ್ಕೆ ಬಂದು ತಲುಪಿದೆ. ಜನರ ಬಾಯಲ್ಲಿ ನಿಜಕ್ಕೂ ಬಿಗ್ ಬಾಸ್ ಹಾಗೂ ಅದರ ಸ್ಪರ್ಧಿಗಳದ್ದೇ ಮಾತು. ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಎರಡನೇ ವಾರದ ಎಲಿಮಿನೇಷನ್ ನಡೆದಿದ್ದು, ಈಗಾಗಲೇ ಸ್ಫೂರ್ತಿ ಗೌಡ ಮನೆಯಿಂದ ಹೊರಬಂದಿದ್ದಾರೆ.

 

ಸದ್ಯ ಲೋಕೇಶ್ ಮತ್ತು ಅರ್ಜುನ್ ರಮೇಶ್ ಅವರು ಗಾಯದ ಸಮಸ್ಯೆಯ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಕಿರಣ್ ಯೋಗೇಶ್ವರ್ ಹಾಗೂ ಸ್ಫೂರ್ತಿ ಗೌಡ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿದ್ದಾರೆ. ಇನ್ನುಳಿದ 12 ಜನರು ತಮ್ಮದೇ ತಂತ್ರಗಳ ಮೂಲಕ ಆಟ ಆಡಲಿದ್ದಾರೆ.

ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಸಂದರ್ಭದಲ್ಲಿ ಸುದೀಪ್ ಅವರು, ಬಿಗ್ ಬಾಸ್ ಮನೆಯಲ್ಲಿರೋ ಜಸ್ವಂತ್ ಹಾಗೂ ನಂದುಗೂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗ ಜಶ್ವಂತ್ ಹಾಗೂ ನಂದು ಜೋಡಿಯಾಗಿಯೇ ಬಂದಿದ್ದರು. ಹಾಗೂ ಅವರನ್ನು ಒಂದೇ ಸ್ಪರ್ಧಿ ಎಂದು ಘೋಷಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರಿಬ್ಬರು ಪ್ರತ್ಯೇಕವಾಗಿ ಆಟ ಮುಂದುವರಿಸಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಆದರೂ ಕೂಡ ಜಸ್ವಂತ್ ವರ್ತನೆಯಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಲಿಲ್ಲ. ಅದನ್ನು ಕಿಚ್ಚ ಸುದೀಪ್ ಗಮನಿಸಿದ್ದಾರೆ. ಈ ಬಗ್ಗೆ ಜಶ್ವಂತ್‌ರನ್ನು ಸುದೀಪ್ ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ಪ್ರತಿ ವಾರ ಎಲ್ಲರೂ ಒಬ್ಬೊಬ್ಬರನ್ನು ನಾಮಿನೇಟ್ ಮಾಡಬೇಕು. ತಮ್ಮ ಸ್ವಂತ ನಿರ್ಧಾರದಿಂದ ನಾಮಿನೇಟ್ ಮಾಡಬೇಕೇ ಹೊರತು, ಇನ್ನೊಬ್ಬರ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವಂತಿಲ್ಲ. ಆದರೆ ಜಸ್ವಂತ್ ಅವರು ಆ
ನಿಯಮ ಮುರಿದಿದ್ದಾರೆ. ಗರ್ಲ್‌ಫ್ರೆಂಡ್ ನಂದು ಜೊತೆ ಅವರು ನಾಮಿನೇಷನ್ ಬಗ್ಗೆ ಚರ್ಚೆ ಮಾಡಿದ್ದರು. ಅದನ್ನು ಗಮನಿಸಿದ ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ಬಾರಿ ಈ ರೀತಿ ಮಾಡಿದರೆ ನಿಮಗೆ ಬಾಗಿಲು ತೋರಿಸಬೇಕಾಗುತ್ತದೆ. ನೀವಿಬ್ಬರು ಬೇರೆ ಬೇರೆ ಸ್ಪರ್ಧಿಗಳಾಗಿ ಆಡ್ತಾ ಇದ್ದೀರಿ. ಹಾಗಿದ್ದ ಮೇಲೆ ಚರ್ಚೆ ಮಾಡ್ಕೊಂಡು ನಾಮಿನೇಟ್ ಮಾಡುವಂತಿಲ್ಲ ಎಂದು ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಈ ವಾರ ಸೋನು ಗೌಡ, ನಂದು, ಅಕ್ಷತಾ, ಸ್ಪೂರ್ತಿ ಗೌಡ, ಸಾನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಮೇಲೆ ನಾಮಿನೇಟ್ ಆಗಿದ್ರು. ಇವರಲ್ಲಿ ಎಲ್ಲರೂ ಟಾಸ್ಕ್‌ನನ್ನು ಉತ್ತಮವಾಗಿ ಆಡಿದ್ರು. ಆದ್ರೆ ಸ್ಫೂರ್ತಿ ಗೌಡ ನೀಡಿದ ಪರ್ಫಾರ್ಮೆನ್ಸ್ ಕಡಿಮೆ ಹೀಗಾಗಿ ಅವರಿಗೆ ಹೆಚ್ಚು ವೋಟ್ ಬಿದ್ದಿಲ್ಲ. ಟಾಸ್ಕ್ ವಿಚಾರದಲ್ಲಿ ನೀವು ಹೆಚ್ಚು ಉತ್ಸಾಹ ತೋರಿಸದೇ ಇರುವುದಕ್ಕೆ ಪ್ರಶ್ನೆ ಮಾಡಿದ್ದಾರೆ ಸುದೀಪ್ ಸ್ಫೂರ್ತಿಗೆ. ನಿಮಗೆ ಆಟವಾಡಲು ಚಾನ್ಸ್ ಸಿಕ್ಕಿದ್ರು ಬಳಸಿಕೊಳ್ಳಲಿಲ್ಲ, ಉದಾಸೀನಾ ತೋರಿಸಿದ್ರಿ ಎಂದು ಸುದೀಪ್ ಗರಂ ಆಗಿಯೇ ಸ್ಫೂರ್ತಿಗೆ ಪ್ರಶ್ನೆ ಮಾಡಿದ್ದರು.

Leave A Reply

Your email address will not be published.