‘ಹುಡುಗಿರು ಬಾಯ್‌ಫ್ರೆಂಡ್ಸ್ ಬದಲಿಸಿದಂತೆ, ನಿತೀಶ್ ಕುಮಾರ್…’:? ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯವರ್ಗಿಯಾ ವ್ಯಂಗ್ಯ

Share the Article

ಇತ್ತೀಚೆಗಷ್ಟೇ ನಿತೀಶ್ ಕುಮಾರ್ ಬಿಜೆಪಿ ಪಕ್ಷವನ್ನು ತೊರೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಅನಂತರ ಅವರು ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆ ಬಗ್ಗೆ ಹೇಳಿರುವ ಕುರಿತು, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ವ್ಯಂಗ್ಯವಾಡಿದ್ದಾರೆ.

ನನ್ನ ವಿದೇಶಿ ಸ್ನೇಹಿತನೊಬ್ಬ ಅವರ ದೇಶದಲ್ಲಿ ‘ಹುಡುಗಿಯರು ಆವಾಗಾವಾಗ ಬಾಯ್‌ಫ್ರೆಂಡ್ಸ್ ಗಳನ್ನು ಬದಲಿಸುತ್ತಾರೆ ಎಂದು ಹೇಳಿದ್ದು, ಈಗ ಅದೇ ರೀತಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾವಾಗ ಹೊಸ ಸಂಬಂಧಕ್ಕೆ ಪ್ರವೇಶಿಸುತ್ತಾರೆ ಎಂದು ಹೇಳುವುದು ಕಷ್ಟ’ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ವಿಜಯವರ್ಗಿಯಾ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಪಕ್ಷಗಳು ಕಿಡಿಕಾರಿದೆ. ಹಾಗಾಗಿ ಇಂದು ವಿಜಯವರ್ಗಿಯಾ ಅವರು ಮಹಿಳೆಯರ ಬಗ್ಗೆ ಅಪಾರ ಗೌರವವಿದೆ. ಬಿಹಾರದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಕೇವಲ ವಿದೇಶಿ ಸ್ನೇಹಿತನ ಮಾತನ್ನು ಉಲ್ಲೇಖಿಸಿದ್ದಾಗಿ, ಆಕ್ಷೇಪಾರ್ಹ ಪದಗಳನ್ನು ಹೇಳಲಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

Leave A Reply