ಮಂಗಳೂರು : ಚಾರ್ಜ್ ಗೆ ಇಟ್ಟಿದ್ದ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ ಗಳು ಬೆಂಕಿಗಾಹುತಿ!

Share the Article

ಮಂಗಳೂರು: ಚಾರ್ಜಿಂಗ್ ಗೆ ಇಟ್ಟಿದ್ದ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗಾಹುತಿಯಾದ ಘಟನೆ ಮಂಗಳೂರು ನಗರದ ಬೋಳೂರಿನ ಅಯ್ಯಪ್ಪ ದೇವಸ್ಥಾನದ ಬಳಿ ಶನಿವಾರ ಸಂಭವಿಸಿದೆ.

ಹಾಲಿನ ವ್ಯಾಪಾರ ಮಾಡುವ ಹರೇಕೃಷ್ಣ ಅವರಿಗೆ ಸೇರಿದ ನಾಲ್ಕು ಸ್ಕೂಟರ್‌ಗಳನ್ನು ಬೋಳೂರಿನ ಹಾಲಿನ ಬೂತ್‌ ಬಳಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಚಾರ್ಜಿಗೆ ಇಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಕೂಟರ್‌ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಪರಿಣಾಮ ಎರಡು ಸ್ಕೂಟರ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.

ಘಟನೆಯಲ್ಲಿ 2 ಸ್ಕೂಟರ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಸ್ಥಳೀಯರ ಪ್ರಯತ್ನದಿಂದಾಗಿ ಇನ್ನೆರಡು ಸ್ಕೂಟರ್‌ಗಳನ್ನು ದೂರಕ್ಕೆ ತರಲಾಗಿದ್ದು, ಅಷ್ಟರಲ್ಲೇ ಮತ್ತೆರಡು ಸ್ಕೂಟರ್‌ಗಳಿಗೆ ಹಾನಿಯಾಗಿದೆ.

ಸ್ಕೂಟರ್‌ಗಳು ಬೆಂಕಿಗಾಹುತಿ ಆಗಿರುವುದರಿಂದ ಒಟ್ಟು ಅಂದಾಜು 4 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದು, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave A Reply