BIGG BOSS ತೆಲುಗು 6 ಗೆ ನಾಗಾರ್ಜುನ ಅವರಿಗೆ ದೊರಕಿತು ಭಾರೀ ಸಂಭಾವನೆ | ಸಲ್ಮಾನ್ ಹಾದಿಯಲ್ಲಿ ಸೌತ್ ಸೂಪರ್ ಸ್ಟಾರ್

ತೆಲುಗು ಬಿಗ್ ಬಾಸ್ 6 ಇನ್ನೇನು ಪ್ರಾರಂಭವಾಗಲಿದೆ. ತನ್ನ ಮಾತಿನ ಚಾಕಚಕ್ಯತೆಯಿಂದ ಸಾಮರ್ಥ್ಯದಿಂದ ಎಲ್ಲರನ್ನೂ ಬೆರಗುಗೊಳಿಸಲು ನಾಗಾರ್ಜುನ ಆಂಡ್ ಟೀಂ ರೆಡಿಯಾಗಿದೆ. ಇದರ ಜೊತೆಗೆ ಅವರು ಸಿಸನ್ 6 ಬಿಗ್‌ಬಾಸ್‌ಗೆ ಚಾರ್ಜ್ ಮಾಡಲಿರುವ ಸಂಭಾವನೆಯ ಮಾಹಿತಿ ಸಹ ಲೀಕ್ ಆಗಿದೆ. ಸೌತ್ ಸೂಪರ್ ಸ್ಟಾರ್ ನಾಗಾರ್ಜುನ ಅವರು ಈ ಸಾರಿಯ ಬಿಗ್‌ಬಾಸ್‌ಗೆ ಪಡೆಯುಲಿರುವ ಸಂಭಾವನೆ ಕೇಳಿದರೆ ನಿಜಕ್ಕೂ ಶಾಕ್ ಆಗುವುದು ಗ್ಯಾರಂಟಿ.

 

ದಕ್ಷಿಣದಲ್ಲಿ ಸಹ ಬಿಗ್ ಬಾಸ್ ಹಿಂದಿ ಬಿಗ್ ಬಾಸ್‌ನಂತೆ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ ಮತ್ತು ಈ ಪ್ರಸಿದ್ಧ ಕಾರ್ಯಕ್ರಮದ ಹೊಸ ಸೀಸನ್ ಅನ್ನು ಅಭಿಮಾನಿಗಳು ವೀಕ್ಷಿಸಲು ಕಾತುರದಿಂದ ಕಾಯುತ್ತಾ ಇದ್ದಾರೆ. ಈ ಸಂಭಾವನೆ ಹೆಚ್ಚಳಕ್ಕೆ ನಾಗಾರ್ಜುನ ಅವರು ಸಲ್ಮಾನ್ ಖಾನ್ ಅವರ ಹಾದಿಯನ್ನೇ ಅನುಸರಿಸುತ್ತಿದ್ದಾರಾ ಎಂಬ ಅನುಮಾನ ಎಲ್ಲರಿಗೂ ಮೂಡಿದೆ. ಸೂಪರ್‌ಸ್ಟಾರ್ ಹೊಸ ಸೀಸನ್‌ಗೆ 12 ಕೋಟಿ ರೂಪಾಯಿಗಳ ದೊಡ್ಡ ಮೊತ್ತವನ್ನು ಪಡೆಯುತ್ತಾರೆ ಎಂಬ ಸುದ್ದಿ ಲೀಕ್ ಆಗಿದೆ.

Tollywood.Net ಪ್ರಕಾರ, ಮುಂಬರುವ ಸೀಸನ್‌ಗಾಗಿ ನಾಗರ್ಜುನ ಅವರು ಸುಮಾರು 15 ಕೋಟಿ ರೂ ಪಡೆಯಲಿದ್ದಾರಂತೆ. ಮತ್ತೊಂದೆಡೆ, ಸಲ್ಮಾನ್ ಖಾನ್ ಬಿಗ್ ಬಾಸ್ ಹೋಸ್ಟ್ ಮಾಡಲು 1050 ಕೋಟಿ ರೂ ಡಿಮ್ಯಾಂಡ್ ಮಾಡಿದ್ದಾರೆ. ನಾಗಾರ್ಜುನ ಅವರು ಬಿಗ್ ಬಾಸ್ 5 ತೆಲುಗಿನ ಪ್ರತಿ ಸಂಚಿಕೆಗೆ ಸುಮಾರು 12 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ. ಹಾಗೂ ಇಡೀ ಸೀಸನ್‌ಗೆ ಒಟ್ಟು 12 ಕೋಟಿ ರೂ ಚಾರ್ಜ್ ಮಾಡಿದ್ದರು.

ವಿವಾದಾತ್ಮಕ ರಿಯಾಲಿಟಿ ಪ್ರೋಗ್ರಾಂ ತೆಲುಗು ಬಿಬಿ ಸೆಪ್ಟೆಂಬರ್ 4, 2022 ರಂದು ‘ಸ್ಟಾರ್ ಮಾ’ ದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಟ್ರೈಲರ್ ಅನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ, ಆದರೆ ಭಾಗವಹಿಸುವವರ ಕಂಟೆಸ್ಟೆಂಟ್ ಹೆಸರು ಇನ್ನೂ ಬಹಿರಂಗಗೊಂಡಿಲ್ಲ. ಆದರೂ ಕೆಲವು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳು ಈಗಾಗಲೇ ಹರಿದಾಡುತ್ತಿವೆ.

ಸಲ್ಮಾನ್ ಖಾನ್ ನೇತೃತ್ವದ ಕಾರ್ಯಕ್ರಮದ ಈ ಋತುವಿನ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲದಿದ್ದರೂ, ಮತ್ತೊಂದೆಡೆ, ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿರುವ ತೆಲುಗು ಆವೃತ್ತಿಯ 6 ನೇ ಸೀಸನ್ ಅನ್ನು ಹೋಸ್ಟ್ ಮಾಡಲು ನಾಗಾರ್ಜುನ ಹಿಂತಿರುಗುತ್ತಾರೆ.

Leave A Reply

Your email address will not be published.