ರಾಜಕೀಯದತ್ತ ದಾಪುಗಾಲು ಇಟ್ಟ ನಟಿ ತ್ರಿಷಾ | ಯಾವ ಪಕ್ಷದಲ್ಲಿ ಮಿಂಚಲಿದ್ದಾರೆ ಈ ನಟಿ?

ಚಿತ್ರರಂಗ ಹಾಗೂ ರಾಜಕೀಯಕ್ಕೂ ಇರುವ ನಂಟು ಹಳೆಯದು. ಬಹುಕಾಲ ಚಿತ್ರರಂಗದಲ್ಲಿ ನಟಿಸಿದ ನಂತರ ಅನೇಕರು ರಾಜಕೀಯ ಪ್ರವೇಶ ಮಾಡುವುದು ಸಾಮಾನ್ಯ. ಕೆಲವರು ನಟನೆಯನ್ನು ಪೂರ್ತಿ ತೊರೆದು ರಾಜಕೀಯದಲ್ಲಿ ಬ್ಯುಸಿ ಆದರೆ, ಇನ್ನೂ ಕೆಲವರು ನಟನೆ ಹಾಗೂ ರಾಜಕೀಯ ಎರಡನ್ನೂ ಸಮವಾಗಿ ತೂಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಈಗ ಈ ಸಾಲಿಗೆ ನಟಿ ತ್ರಿಷಾ ಸೇರಲಿದ್ದಾರೆ. ಹೀಗೊಂದು ಸುದ್ದಿ ಹರಿದಾಡುತ್ತಿದೆ. ಇದು ಅಂತೆ-ಕಂತೆಯೋ ಅಥವಾ ನಿಜಾಂಶ ಇದೆಯೋ ಈ ಎಲ್ಲಾ ಪ್ರಶ್ನೆಗಳಿಗೆ ತ್ರಿಷ ಕಡೆಯಿಂದಲೇ ಉತ್ತರ ಸಿಗಬೇಕಿದೆ.

 

ಎಂಜಿಆರ್, ಜಯಲಲಿತಾ ಮೊದಲಾದವರು ಚಿತ್ರರಂಗದಲ್ಲಿ ಗುರುತಿಸಿಕೊಂಡು ನಂತರ ರಾಜಕೀಯದಲ್ಲಿ ಮಿಂಚಿದರು. ಅವರ ರೀತಿಯಲ್ಲೇ 39 ವರ್ಷದ ತ್ರಿಷಾ ಕೂಡ ರಾಜಕೀಯದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕಸನು ಕಂಡಿದ್ದಾರೆ. ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಅವರು ಅಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ಮಾತಿದೆ.

ಆದರೆ ತ್ರಿಷಾ ಅವರ ಈ ನಿರ್ಧಾರದ ಹಿಂದೆ ನಟ ವಿಜಯ್ ಕೈವಾಡವಿದೆ ಎಂಬ ಮಾತು ಇದೆ. ಅವರೇ ತ್ರಿಷಾ ಅವರನ್ನು ರಾಜಕೀಯಕ್ಕೆ ಬರುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ನಡುವೆ ಉತ್ತಮ ಸ್ನೇಹವಿರುವುದರಿಂದ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೇ ನಟ ವಿಜಯ್ ಕೂಡಾ ರಾಜಕೀಯದಲ್ಲಿ ಆಸಕ್ತಿ ಹೊಂದಿರುವವರೇ.

ತ್ರಿಷಾ ಹಲವು ಭಾಷೆಯ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ವಿವಿಧ ಚಿತ್ರಗಳಲ್ಲಿ ಬ್ಯುಸಿ ಇರುವ ತ್ರಿಷಾ ರಾಜಕೀಯದತ್ತ ಒಲವು ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡಿನಲ್ಲಿ ಸ್ಥಳೀಯ ಪಕ್ಷಗಳಾದ ಡಿಎಂಕೆ ಹಾಗೂ ಈ ಎಐಡಿಎಂಕೆ ಪ್ರಾಬಲ್ಯ ಇದೆ. ಈ ಎರಡೂ ಪಕ್ಷಗಳನ್ನು ಬಿಟ್ಟು ಅವರು, ಕಾಂಗ್ರೆಸ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅವರು ರಾಜಕೀಯ ಸೇರ್ಪಡೆ ಆಗಿದ್ದೇ ಆದಲ್ಲಿ ಯಾವ ರೀತಿಯಲ್ಲಿ ತ್ರಿಷಾ ಕೆಲಸ ಮಾಡಲಿದ್ದಾರೆ ಎಂಬುದು ಸದ್ಯದ ಮಾತು.

Leave A Reply

Your email address will not be published.