ಪಂಚ್ ಡೈಲಾಗ್ ಹೊಡೆಯಲು ಹೋಗಿ ಯಡವಟ್ಟು ಮಾಡ್ಕೊಳ್ತಾ ‘ ಪುಳಿ ಮುಂಚಿ ‘ ಚಿತ್ರ ತಂಡ ?
ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಚಿತ್ರತಂಡ ಒಂದು ವಿಶಿಷ್ಟ ರೀತಿಯಲ್ಲಿ ಜನರಿಗೆ ಶುಭಾಶಯ ಕೋರಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಈ ಹಿಂದೆ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಎಂಬ ಚಿತ್ರ ತಯಾರಿಸಿ ಸಕ್ಸಸ್ ಆಗಿದ್ದ ತಂಡವು, ಮತ್ತೊಂದು ಚಿತ್ರವನ್ನು ಆಯೋಜಿಸುತ್ತಿದೆ ಅದರ ಟೈಟಲ್ ಲಾಂಚ್ ಮಾಡುವ ಸಂದರ್ಭ ಶ್ರೀಕೃಷ್ಣನಿಗೆ ಅವಮಾನವಾಗಿದೆ. ಹಾಗೆಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೋಸ್ಟರುಗಳು ರಾರಾಜಿಸುತ್ತಿವೆ.
ಆರ್ ಜೆ ವಿನೀತ್ ಮುಖ್ಯ ಭೂಮಿಯಲ್ಲಿರುವ ಪುಳಿಮುಂಚಿ ಎಂಬ ತುಳು ಚಿತ್ರ ಟೈಟಲ್ ಬಿಡುಗಡೆಗೆ ಸಿದ್ಧವಾಗುತ್ತಿದೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರತಂಡವು ಒಂದಷ್ಟು ಕ್ರಿಯೇಟಿವಿಟಿ ಬಳಸಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಹಾರೈಸಲು ಹೊರಟು ಎಡವಟ್ಟು ಮಾಡಿಕೊಂಡಿದೆ ಎನ್ನುವುದು ಆರೋಪ.
ಆರ್ ಜೆ ವಿನೀತ್ ಅವರನ್ನು ಕೃಷ್ಣನ ರೀತಿ ತೋರಿಸಿ, ಶ್ರೀಕೃಷ್ಣನ ಸಂದೇಶವನ್ನೇ ತಿರುಚಿ ಅದರಲ್ಲಿ ಕೊಟ್ಟಿರುವುದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಪೋಸ್ಟ ಮೇಲ್ಬಾಗದಲ್ಲಿ ಶ್ರೀಕೃಷ್ಣನ ಸಂದೇಶವನ್ನು ತಿರುಚಿ, ಹಾಸ್ಯ ಸಂಸ್ಥಾಪನಾರ್ಥಾಯ ಸಂಭವಾಮಿ ಪದೇ ಪದೇ ( ಧರ್ಮ ಸಂಸ್ಥಾಪನಾಪಾಯ ಸಂಭವಾಮಿ ಯುಗೇ ಯುಗೇ ಬದಲಿಗೆ) ಎಂದು ಬರೆಯುವ ಮೂಲಕ ಕೃಷ್ಣನ ಭಗವದ್ಗೀತೆಯ ಶ್ಲೋಕವನ್ನೇ ಅಣಕಿಸಿದೆ.
ಇದರ ಬಗ್ಗೆ ಖಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗಿದ್ದು, ಹಲವು ಪೋಸ್ಟ್ ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಚಿತ್ರತಂಡ ಕ್ಷಮೆ ಯಾಚಿಸದೇ ಇದ್ದಲ್ಲಿ ಚಿತ್ರವನ್ನು ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಬಾಲಿವುಡ್ಡಿನಲ್ಲೇ ಹಿಂದುಗಳನ್ನು, ಹಿಂದು ದೇವರನ್ನು ಅಣಕಿಸಿದ ಚಿತ್ರಕ್ಕೆ ಬಹಿಷ್ಕಾರ ಹಾಕಲಾಗಿದೆ. ಆ ಚಿತ್ರಗಳು ಈಗ ಮಕಾಡೆ ಮಲಗಿವೆ. ತುಳು ಚಿತ್ರತಂಡಕ್ಕೂ ಅದೇ ರೀತಿಯ ಬಹಿಷ್ಕಾರ ಹಾಕಬೇಕಾದೀತು ಎಂದು ಬೆದರಿಕೆ ಹಾಕಲಾಗಿದೆ.
ಆದರೆ ಸೂಕ್ಷ್ಮವಾಗಿ ಈ ಪೋಸ್ಟರ್ ಅನ್ನು ಗಮನಿಸಿದರೆ ಇದರಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ವಿಷಯ ಏನಿದೆ? ಧರ್ಮ ಸಂಸ್ಥನಾಪಾಯ ಸಂಭವಾಮಿ ಯುಗೇಯುಗೇ ಬದಲು ಹಾಸ್ಯ ಸಂಸ್ಥನಾಪಾಯ ಸಂಭವಾಮಿ ಪದೇ ಪದೇ ಎಂದು ಬರೆದಿದೆ ಚಿತ್ರತಂಡ. ಧರ್ಮವನ್ನು ಪ್ರತಿಷ್ಠಾಪಿಸಲು ನಾನು ಎಲ್ಲ ಕಾಲಗಳಲ್ಲೂ ಬರುತ್ತೇನೆ ಎನ್ನುವುದು ಶ್ರೀ ಕೃಷ್ಣ ಹೇಳಿದ ಅರ್ಥ. ಇದನ್ನೇ ವಿಶಿಷ್ಟವಾಗಿ ‘ ಹಾಸ್ಯ ಸಂಸ್ಥಾಪನಾಪಾಯ ಸಂಭವಾಮಿ ಪದೇ ಪದೇ ‘ ಎಂದಿದೆ ಚಿತ್ರತಂಡ. ಜನಪ್ರಿಯ ಶ್ಲೋಕ ಒಂದರ ಪ್ರಾಸವನ್ನು ತೆಗೆದುಕೊಂಡು, ಮತ್ತೆ ಮತ್ತೆ ಹಾಸ್ಯವನ್ನು ಪ್ರಸ್ತುತಪಡಿಸುತ್ತೇವೆ ಎಂದಿದೆ ಚಿತ್ರತಂಡ. ಯಾವುದೇ ರೀತಿಯಲ್ಲೂ ಧರ್ಮವನ್ನು ಅವಮಾನಿಸದ ಇಂತಹ ಕ್ರಿಯೇಟಿವ್ ಕೆಲಸಗಳಿಗೆ ವಿರೋಧಿಸುವುದು ಎಷ್ಟರಮಟ್ಟಿಗೆ ಸರಿ ? ಹಾಸ್ಯ ಅನ್ನುವುದು ಯಾವುದೇ ಧರ್ಮಕ್ಕಿಂತಲೂ ಕಳಪೆಯಾಗಿದ್ದಲ್ಲ. ಹಾಸ್ಯವೇ ಎಲ್ಲಕ್ಕಿಂತ ದೊಡ್ಡ ಧರ್ಮ ಎನ್ನುವ ಮಾತೇ ಇದೆ. ಧರ್ಮವು ಹೇಗೆ ನೆಮ್ಮದಿ ಕೊಡಲು ಇರುತ್ತದೆಯೋ, ಅದೇ ರೀತಿ ಹಾಸ್ಯ ಕೂಡ ಬದುಕಿಗೆ ಒಂದು ಖುಷಿ ಕೊಡುವ ಪ್ರಕ್ರಿಯೆ. ಎಲ್ಲೋ ಒಬ್ಬ ಮುನಾವರ್ ಫಾರೂಕಿ ತರದ ಧರ್ಮ ಭ್ರಾಂತರು ಹಿಂದುಗಳನ್ನು ಮತ್ತು ಹಿಂದು ದೇವರುಗಳನ್ನು ಅವಮಾನ ಮಾಡಲೆಂದೇ ಹಾಸ್ಯ ರಚಿಸುತ್ತರೋ, ಅವರನ್ನು ವಿರೋಧಿಸುವುದರಲ್ಲಿ ಅರ್ಥವಿದೆ. ಪುಲಿ ಮುಂಚಿಯಲ್ಲಿ ಅಂತಹ ಒಗರು ಯಾವುದು ಕೂಡಾ ಕಾಣಿಸುತ್ತಿಲ್ಲ
ಅಂದಹಾಗೆ, ಆ ಚಿತ್ರದ ಹೆಸರೇ ‘ ಪುಳಿ ಮುಂಚಿ ‘. ಅಂದರೆ ‘ಹುಳಿ ಮೆಣಸು’. ಯಾವುದೇ ಸೃಜನಶೀಲತೆ ಇಲ್ಲದೆ ಒಂದು ಪೋಸ್ಟರ್ ಅಥವಾ ಪ್ರಚಾರ ನಡೆಸಿದರೆ ಅದು ‘ ಪುಳಿಮುಂಚಿ ‘ ರಹಿತ ಅಡುಗೆ ಆಗೋದಿಲ್ಲವೇ? ಅದು ಉಪ್ಪು ಹುಳಿ ಖಾರ ಇಲ್ಲದೆ ತೀರಾ ‘ಸಪ್ಪೆ ‘ ಅನ್ನಿಸುವುದಿಲ್ಲವೇ ? ಹರಿಪ್ರಸಾದ್ ರೈ ನಿರ್ಮಾಣದ, ಕಿಶೋರ್ ಶೆಟ್ಟಿ ನಿರ್ದೇಶನದ ಈ ಪುಳಿಮುಂಚಿ ಚಿತ್ರ ದುಗುಡಗೊಂಡ ಮನಸ್ಸುಗಳಿಗೆ ಒಂದಿಷ್ಟು ನೆಮ್ಮದಿಯ ನಗು ತರಲಿ ಎನ್ನುವುದೇ ಕೊನೆಯ ಆಶಯ.