ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗೆ ಭದ್ರತಾ ದೋಷ : ಆಪಲ್ ಎಚ್ಚರಿಕೆ

ಯಾರಿಗೆ ತಾನೇ ಐಫೋನ್ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಒಮ್ಮೆಯಾದರೂ ಐಫೋನ್ ಖರೀದಿಸುವ ಮಹದಾಸೆಯಂತು ಖಂಡಿತ ಇದ್ದೇ ಇರುತ್ತದೆ. ಅಷ್ಟು ಮಾತ್ರವಲ್ಲ ಐಫೋನ್ ನ ಸಾಫ್ಟ್‌ವೇರ್ ಅಥವಾ ಅದರ ಭದ್ರತೆಯ ವಿಷಯಕ್ಕೆನೇ ಜನರ ಫೆವರೇಟ್ ಅಂತಾನೇ ಹೇಳಬಹುದು.

ಆದರೆ ಈಗ ಮಾಹಿತಿ ಪ್ರಕಾರ, ಈಗ ಐಪ್ಯಾಡ್ ಹಾಗೂ ಮ್ಯಾಕ್ ಕಂಪ್ಯೂಟರ್‌ಗಳ ನಿಯಂತ್ರಣವನ್ನು ಹ್ಯಾಕರ್‌ಗಳು ವಶಪಡಿಸಿಕೊಳ್ಳಲು ಸಾಧ್ಯವಾಗುವಂತಹ ದೋಷದ ಬಗ್ಗೆ ಆಪಲ್ ಎಚ್ಚರಿಕೆ ನೀಡಿದೆ. ಹಾಗೂ ತುರ್ತಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವಂತೆ ಆಪಲ್ ತನ್ನ ಎಲ್ಲಾ ಬಳಕೆದಾರರಿಗೆ ಒತ್ತಾಯಿಸಿದೆ.

ಹೌದು, ಆಪಲ್ ಡಿವೈಸ್‌ಗಳಲ್ಲಿ ದೊಡ್ಡ ದೋಷ ಕಂಡುಬಂದಿದೆ. ಇದನ್ನು ಉಪಯೋಗಿಸಿ ಹ್ಯಾಕರ್‌ಗಳು ದಾಳಿ ನಡೆಸುವ ಸಾಧ್ಯತೆ ಇರುವ ಸಂಭವ ಹೆಚ್ಚಿದೆ ಎಂದು ಆ್ಯಪಲ್ ಇತ್ತೀಚಿಗೆ ತಿಳಿಸಿದೆ. ಇದನ್ನು ಸರಿಪಡಿಸಲು ತಕ್ಷಣವೇ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲು ತನ್ನ ಗ್ರಾಹಕರಲ್ಲಿ ಕೇಳಿಕೊಂಡಿದೆ.

ಹ್ಯಾಕರ್ ಗಳು ಎಷ್ಟರ ಮಟ್ಟಿಗೆ ಆಪಲ್ ಡಿವೈಸ್‌ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆಪಲ್ ಕಂಪನಿ ಸ್ಪಷ್ಟಪಡಿಸಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್ ಕಂಪ್ಯೂಟರ್‌ಗಳಿಗೆ ಈಗಾಗಲೇ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಆಪಲ್ ಮಾಹಿತಿ ನೀಡಿದೆ.

Leave A Reply

Your email address will not be published.