BIGG NEWS : ಮಂಗಳೂರು : ಸಾವರ್ಕರ್ ಬಳಿಕ ʻನಾಥುರಾಮ್ ಗೋಡ್ಸೆʼ ಫೋಟೋ | ʻಹಿಂದೂ ಮಹಾಸಭಾ ಹೆಸರʼಲ್ಲಿ ಫ್ಲೆಕ್ಸ್‌ ಅಳವಡಿಕೆ

Share the Article

ಮಂಗಳೂರು : ಶ್ರೀಕೃಷ್ಣ ಸಮಾರಂಭಕ್ಕೆ ಶುಭಕೋರುವ ನೆಪದಲ್ಲಿ ಅಖಿಲ ಭಾರತ ಹಿಂದೂ ಸಭಾ ಸಂಘಟನೆಗಳಿಂದ ನಾಥೋರಾಮ್‌ ಗೋಡ್ಸೆ ಫೋಟೋ ದಂಗಲ್‌ ಶುರುವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ನಾಥುರಾಮ್ ಗೋಡ್ಸೆ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಹಿಂದೂ ಮಹಾಸಭಾ ಹೆಸರಿನಲ್ಲಿ ಹಲವೆಡೆ ಫ್ಲೆಕ್ಸ್ ಅಳವಡಿಕೆ ಮಾಲಡಾಗಿದ್ದು, ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೆಸರಿನಲ್ಲಿ ಈ ಫ್ಲೆಕ್ಸ್ ಅಳವಡಿಸಲಾಗಿದೆ.

ರಾಜಕೀಯ ಹಿಂದುತ್ವಗೊಳಿಸಿ, ಹಿಂದುಗಳನ್ನು ಸೈನಿಕೀಕರಣಗೊಳಿಸಿ ಎಂದು ಬ್ಯಾನರ್​​ನಲ್ಲಿ ಬರಹ ಹಾಕಿ ಸಾವರ್ಕರ್ ಜೊತೆಗೆ ನಾಥುರಾಮ್ ಗೋಡ್ಸೆ ಫೋಟೋ ಸಹ ಬಳಕೆ ಮಾಡಿದ್ದಾರೆ.

Leave A Reply