ಮದುವೆಯೇ ಬೇಡ ಎಂದವಳ ಬಗಲಲ್ಲಿ 100 ನೇ ಮರಿ ಮರಿ ಮೊಮ್ಮಗು | 99 ರ ನಾಟ್ ಔಟ್ ಅಜ್ಜಿಯ ಇಂಟ್ರೆಸ್ಟಿಂಗ್ ಫ್ಯಾಮಿಲಿ ಪ್ರೊಡಕ್ಷನ್ ಸ್ಟೋರಿ !

ಪೆನ್ಸಿಲ್ವೇನಿಯಾ (ಅಮೆರಿಕ): ಈ ಚಿತ್ರದಲ್ಲಿ ಕಾಣಿಸುತ್ತಿರುವಾಕೆಯ ಹೆಸರು . ಅಮೆರಿಕ ಪೆನ್ಸಿಲ್ವೇನಿಯಾದ ಮಾರ್ಗರೇಟ್ ಕೊಲ್ಲ‌ ಎಂಬಾಕೆಗೆ ಈಗ 99 ವರ್ಷ ವಯಸ್ಸು. 100ನೇ ವಯಸ್ಸಿಗೆ ಕಾಲಿಡುತ್ತಿರುವ ವೃದ್ಧೆಯ ಕೈಯ ಬೆಚ್ಚಗೆ ಕಣ್ಣು ಪಿಳಿಪಿಳಿ ಮಾಡಿ ಮಲಗಿರುವುದು ಈಕೆಯ 100ನೇ ಮರಿಮೊಮ್ಮಗ! ಆಕೆ ಪ್ರಾಯದಲ್ಲಿ ಸೆಂಚುರಿ ಬಾರಿಸುತ್ತಿರುವಂತೆ ಮೊಮ್ಮಕ್ಕಳ ವಿಷಯದಲ್ಲೂ ನಾಟ್ ಔಟ್ ಶತಕ ಬಾರಿಸಿದ್ದಾಳೆ.

 

ಮಾರ್ಗರೇಟ್ ಕೊಲ್ಲರ್ ಜೀವನ ಚರಿತ್ರೆ ಕುತೂಹಲವಾದದ್ದು. ಕ್ರೈಸ್ತ ನನ್ ಆಗಿದ್ದ ಮಾರ್ಗರೇ ಯುವತಿಯಾಗಿದ್ದಾಗ ಮದುವೆಯೇ ಬೇಡ ಎಂದಿದ್ದಾಳಂತೆ. 1922 ರಲ್ಲಿ ಹುಟ್ಟಿದ್ದ ಈಕೆ ಮದುವೆ, ಮಕ್ಕಳು ಏನೂ ಬೇಡ, ಸನ್ಯಾಸಿಸಿ ಆಗಿರಲು ಎಂದು ಬಯಸಿದ್ದಳು. ಆದರೆ ಅಷ್ಟರಲ್ಲಿ ಅಲ್ಲಿ ವಿಲಿಯಮ್ ಸಿಕ್ಕಿದ್ದನಲ್ಲ. ಆದರೆ ಈಕೆಗೆ ಕಂಕಣಭಾಗ್ಯ ತಾನಾಗಿಯೇ ಒಲಿದು ಬಂದಿತ್ತು. ವಿಲಿಯಂ ಭೇಟಿಯಾದ ಮಾರ್ಗರೇಟ್ ಜೀವನ ಮಾರ್ಗ ತಿರುವು ಪಡೆಯಿತು. ವಿಲಿಯಂ ಜತೆ ಪ್ರೇಮ ಹುಟ್ಟಿತು. ಪ್ರೇಮದ ಸೆಳೆತದಲ್ಲಿ ಬಿದ್ದು, ಅವರಿಬ್ಬರೂ ಕೊನೆಗೆ ಮದುವೆಯಾದರು. ಅಷ್ಟೇ ಅಲ್ಲಿಂದ ಅವರಿಬ್ಬರೂ ಹಿಂದಿರುಗಿ ನೋಡಿಲ್ಲ, ಸಾಲು ಸಾಲು ಮಕ್ಕಳಿಗೆ ಅಕ್ಕರೆಯ ಅಮ್ಮಳಾದಳು ಮಾರ್ಗಿ.

ದಂಪತಿಗೆ ಹುಟ್ಟಿದ್ದು, 11 ಮಕ್ಕಳು ! ಈ ಮಕ್ಕಳಿಗೆ ಒಟ್ಟೂ ಹುಟ್ಟಿದ್ದು 56 ಮಕ್ಕಳು !!

ಹಾಗೆ ಅಜ್ಜಿ ಶುರು ಮಾಡ್ಕೊಂಡ ಫ್ಯಾಮ್ಮಿಲಿ ಪ್ರೊಡಕ್ಷನ್ ಭರ್ಜರಿಯಾಗಿ ಯಶಸ್ಸು ಕಂಡಿದೆ. ಅಜ್ಜಿಯ ಮಕ್ಕಳು ಅದರಲ್ಲಿ ಸೇರಿಕೊಂಡಿದ್ದಾರೆ, ಮೊಮ್ಮಕ್ಕಳು ಕೈ ಜೋಡಿಸಿದ್ದಾರೆ. ಈಗ ಮೊಮ್ಮಕ್ಕಳೇ ಬರೋಬ್ಬರಿ 100 ಮರಿಮಕ್ಕಳು ಮಾಡಿ, ಈ ‘ನೂರನೆಯದನ್ನು’ ತೊಂಬತ್ತೊಂಬತ್ತರ ಅಜ್ಜಿಯ ಕೈಗೆ ನೀಡಿದ್ದಾರೆ !

ಮದುವೆಯಾದ ಮೇಲೆ ಈ ದಂಪತಿಗೆ ಹುಟ್ಟಿದ್ದು, 11 ಮಕ್ಕಳು! ಈ ಮಕ್ಕಳಿಗೆ ಒಟ್ಟು ಹುಟ್ಟಿದ್ದು 56 ಮಕ್ಕಳು. ಅಂದರೆ ಮಾರ್ಗರೇಟ್ ಕೊಲ್ಲರ್‌ಗೆ 56 ಮೊಮ್ಮಕ್ಕಳು ಈ 56 ಮೊಮ್ಮಕ್ಕಳಿಗೆ ಮಕ್ಕಳಾಗಿದ್ದು, ಅವರಲ್ಲಿ ಈ ಪುಟಾಣಿ ಮಗು 100 ನೆಯದ್ದು. ಮಗುವಿಗೆ ಮುತ್ತಜ್ಜಿಯ ಕೊಲ್ಲರ್ ಎನ್ನುವ ಹೆಸರನ್ನೂ ಸೇರಿಸಿ ಕೊಲ್ಲ‌ ವಿಲಿಯಮ್ ಬಾಲ್‌ಸ್ಟರ್‌ ಎಂದು ನಾಮಕರಣ ಮಾಡಲಾಗಿದೆ.

ಈಗ ಈ ಮುತ್ತಜ್ಜಿಯ 100ನೇ ವರ್ಷವನ್ನು ವಿಜೃಂಭಣೆಯಿಂದ ಆಚರಿಸಲು ಕುಟುಂಬಸ್ಥರು ರೆಡಿಯಾಗಿದ್ದಾರೆ. ಶತಕ ಬಾರಿಸಿರುವ ಅಜ್ಜಿಯ ಸೌಭಾಗ್ಯಕ್ಕೆ ಈ ವಿಜೃಂಭಣೆ ಅಗತ್ಯ ಅಲ್ಲವೇ ?

Leave A Reply

Your email address will not be published.