ಪ್ರಭಾಸ್ ಮದುವೆಯಾಗಲೇಬಾರದು – ಶಾಕಿಂಗ್ ಭವಿಷ್ಯ ಹೇಳಿದ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ

ದಕ್ಷಿಣ ಸಿನಿ ರಂಗದ ಹ್ಯಾಂಡ್ಸಂ ಆಂಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಬಾಹುಬಲಿ ಖ್ಯಾತಿಯ ನಟ ಎಲ್ಲರಿಗೂ ಅಚ್ಚುಮೆಚ್ಚು. ಇಂತಿಪ್ಪ ನಟ ಪ್ರಭಾಸ್ ಇನ್ನೂ ಮದುವೆ ಆಗಿಲ್ಲ. ಈ ಪ್ರಶ್ನೆ ಅಭಿಮಾನಿಗಳ ಮನಸ್ಸಲ್ಲಿ ಖಂಡಿತಾ ಇದೆ. ಹಣ, ಸಿನಿಮಾ, ಖ್ಯಾತಿ ಇದ್ದರೂ, ಎಲ್ಲಕ್ಕಿಂತ ಮಿಗಿಲಾಗಿ, ಬೆಟ್ಟದಷ್ಟು ಪ್ರೀತಿ ಕೊಡುವ ನಟನಿಗೆ ಸೆಲೆಬ್ರೆಟಿ ಜ್ಯೋತಿಷಿಯಾದ ವೇಣುಸ್ವಾಮಿ ಅವರು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಹೌದು ನಟ ಪ್ರಭಾಸ್ ಮದುವೆ ಅಗುವುದೇ ಬೇಡ ಎಂದು ಹೇಳಿದ್ದಾರೆ. ಅಲ್ಲದೆ ಪ್ರಭಾಸ್ ಜೀವನ ಮದುವೆಯಾದರೆ ಯಾವ ರೀತಿ ಆಗಬಹುದು ಎಂದು ಉದಾಹರಣೆ ಕೂಡ ಕೊಟ್ಟಿದ್ದಾರೆ.

 

‘ಈ ಜಾತಕ ಲಕ್ಷದಲ್ಲಿ ಒಬ್ಬರಿಗೆ ಇರುತ್ತದೆ. ಸೂರ್ಯ ಚಂದ್ರ ಶುಕ್ರ ಬುಧ ಗ್ರಹಗಳ ಕಾಂಬಿನೇಷನ್‌ನಿಂದ ಪ್ರಭಾಸ್‌ಗೆ ರಾಜಯೋಗವಿದೆ. ಹಾಗಾಗಿ ಸಾಕಷ್ಟು ಖ್ಯಾತಿ ಗಳಿಸುತ್ತಾರೆ ಪ್ರಭಾಸ್. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಸರು ಬರುತ್ತದೆ ಆದರೆ ಮತ್ತೆರಡು ಗ್ರಹಗಳಿಂದ ಸಮಸ್ಯೆ ಎದುರಾಗುತ್ತದೆ’ ಎಂದಿದ್ದಾರೆ.

ಆದರೆ ನಾಲ್ಕು ಗ್ರಹದಿಂದ ರಾಜಯೋಗ ಸಿಕ್ಕರೂ ಗುರು-ಶನಿ ಗ್ರಹಗಳ ಕಾರಣದಿಂದ ಆ ರಾಜಯೋಗವನ್ನು ಅನುಭವಿಸಲು ಸಾಧ್ಯವಾಗದಂತೆ ಆಗುತ್ತದೆ. ಒಳ್ಳೆಯ ಯೋಗ ಬಂದಾಗಲೇ ಪ್ರಭಾಸ್‌ಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಕಿಡ್ನಿ, ಲಿವರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿ ಸಮಸ್ಯೆ ಪ್ರಭಾಸ್‌ಗೆ ಎದುರಾಗಲಿದೆ. ಪ್ರಭಾಸ್ ಜಾತಕದಲ್ಲಿ ಮದುವೆಗೆ ಸಂಬಂಧಿಸಿ ಸಮಸ್ಯೆ ಇದೆ. ಮದುವೆ ಆಗದೇ ಇರುವುದು, ಮದುವೆ ತಡವಾಗುವುದು, ಅಥವಾ ಮದುವೆ ನಂತರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಮದುವೆ ನಂತರ ಗಂಡ-ಹೆಂಡತಿ ನಡುವೆ ಸಮಸ್ಯೆ ಶುರುವಾಗಬಹುದು. ಆರೋಗ್ಯ ಸಮಸ್ಯೆ ಮುಖ್ಯವಾಗಿ ಕಾಡಬಹುದು’ ಎಂದು ವೇಣುಸ್ವಾಮಿ ಹೇಳಿದ್ದಾರೆ.

ಪ್ರಭಾಸ್ ಎಂಬ ನಟ ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ಇಷ್ಟ. ಹಾಗಾಗಿ ಜಾತಕದಲ್ಲಿ ಈ ಸಮಸ್ಯೆ ಇರುತ್ತದೆ. ಪರಿಹಾರ ಮಾಡಿಸಿಕೊಂಡರೆ ಪ್ರಭಾಸ್‌ಗೆ ಒಳ್ಳೆಯದಾಗುತ್ತದೆ’ ಎಂಬ ಪರಿಹಾರದ ಮಾರ್ಗ ಹೇಳಿದ್ದಾರೆ.

Leave A Reply

Your email address will not be published.