SHOCKING NEWS | ಸುಳ್ಯ : ಹಠ ಮಾಡುತ್ತಿದ್ದ ಮಗುವಿಗೆ ಬಿಸಿ ಸಟ್ಟುಗದಲ್ಲಿ ಬರೆ ಹಾಕಿದ ತಾಯಿ

Share the Article

ಕಳವಳಕಾರಿ ಘಟನೆಯೊಂದು ಸುಳ್ಯದಿಂದ ವರದಿಯಾಗಿದೆ. ಹಠ ಮಾಡುತ್ತಿದ್ದ ನಾಲ್ಕು ವರ್ಷ ಪ್ರಾಯದ ಮಗುವಿಗೆ ತಾಯಿಯೇ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ ದಾರುಣ ಘಟನೆ ಸುಳ್ಯದ ನಾವೂರಿನಿಂದ ವರದಿಯಾಗಿದೆ. ಘಟನೆ ಕೆಲ ದಿನಗಳ ಹಿಂದೆ ನಡೆದಿದೆ, ಈಗ ತಡವಾಗಿ ಬೆಳಕಿಗೆ ಬರುತ್ತಿದೆ.

ಏನೂ ಅರಿಯದ ಕಂದಮ್ಮನನ್ನು ಸಟ್ಟುಗ ಬಿಸಿ ಮಾಡಿ ಸುಟ್ಟ ತಾಯಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿ ಹೆತ್ತಮ್ಮನೇ ಕಾರ್ರ್ಯ ಮೆರೆದಿದ್ದಾಳೆ. ಮಗು ಹಠ ಮಾಡಿತು ಎನ್ನುವ ಕಾರಣಕ್ಕೆ, ಕರುಣೆಯಿಲ್ಲದೆ ಎಳೆಯ ಚರ್ಮಕ್ಕೆ ಬರೆ ಇಟ್ಟ ತಾಯಿಯ ಕ್ರೌರ್ಯ ಕಂಡು ಸ್ಥಳೀಯರು ಆ ಸುದ್ದಿಯನ್ನು ಹೊರಕ್ಕೆ ಹೇಳಿದ್ದಾರೆ.

ಬರೆ ಹಾಕಿದ ಬಿಸಿಗೆ ಮಗುವಿನ ಕೆನ್ನೆ ಸುಟ್ಟು ಹೋಗಿದೆ. ಮಗುವಿನ ತೋಳು ಭಾಗದಲ್ಲಿ ಅಂಗೈ ಅಗಲದಷ್ಟು ಭಾಗದ ಮಾಂಸ ಬೆಂದು ಕಿತ್ತು ಬಂದಿದೆ. ಸ್ವಂತ ಅಮ್ಮ ಯಾಕೆ ಈ ರೀತಿ ಕ್ರೂರಿಯಾದಳು ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

ಆರು ದಿನಗಳ ಹಿಂದೆ ಈ ಘಟನೆ ನಡೆದಿದೆಯೆನ್ನಲಾಗಿದ್ದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಗ ಅವರು ನೀಡಿದ ಮಾಹಿತಿಯ ಆಧಾರದಲ್ಲಿ, ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆಯವರು ಆ ಮನೆಗೆ ಧಾವಿಸಿದ್ದಾರೆ. ಅಲ್ಲಿ ಪರಿಶೀಲನೇ ಕಾರ್ಯ ನಡೆದಿದೆ. ಈಗ ಮಗುವನ್ನು ಸಿ.ಡಿ.ಪಿ.ಒ. ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಸಿಗಬೇಕಾಗಿದೆ.

Leave A Reply