ಹಿಂಗಾರು ಮಳೆ ಕಡಿಮೆ, ರೋಗ ರುಜಿನ ಹೆಚ್ಚಳ, ರಾಜಕೀಯ ಪಕ್ಷ ಇಬ್ಭಾಗ – ಕೋಡಿ ಮಠ ಶ್ರೀಯಿಂದ ಮತ್ತೊಂದು ಭಯಾನಕ ಭವಿಷ್ಯ

ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಇಂದು ಅವರು ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಜೀಣೋರ್ದ್ಧಾರವಾಗುತ್ತಿರುವ ಶ್ರೀ ಕುಮಾರ ಕಂಪಿನ ಸಿದ್ಧವೃಷಭೇಂದ್ರ ಕತೃ ಗದ್ದುಗೆಯ ಶಿಲಾಮಯ ಕಟ್ಟಡದ ಕಾಮಗಾರಿಯನ್ನು ಬುಧವಾರ ವೀಕ್ಷಿಸಿ, ಕತೃ ಗದ್ದುಗೆಯ ದರ್ಶನ ಪಡೆದ ನಂತರ ಕೋಡಿ ಮಠ ಶ್ರೀ ಭವಿಷ್ಯ ನುಡಿದಿದ್ದಾರೆ.

 

ಶ್ರೀಗಳು ಹೇಳುವ ಪ್ರಕಾರ ” ನಾಡಿನಲ್ಲಿ ಹಿಂಗಾರು ಮಳೆ ಕಡಿಮೆಯಾಗಲಿದೆ. ಹಾಗೂ ಅಕಾಲಿಕ ಮಳೆಯಾಗಲಿದೆ. ಅಷ್ಟು ಮಾತ್ರವಲ್ಲದೇ, ರೋಗ ರುಜಿನಗಳು ಕೂಡಾ ಕಾಣಿಸಿಕೊಳ್ಳಲಿವೆ. ಮತಾಂಧತೆಯಿಂದಾಗಿ ಧಾರ್ಮಿಕ ಸಂಘರ್ಷಗಳು ನಡೆಯುತ್ತಿದ್ದು ನೈಜ ಜ್ಞಾನದ ಕೊರತೆಯೇ ಕಾರಣ “ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಇದರ ನಂತರ, “ಮಠದಲ್ಲಿ ಪಂಚಾಗ್ನಿ ಮಾಡುವ ಸಂದರ್ಭದಲ್ಲಿ ಅಗ್ನಿಕುಂಡ ಒಡೆದು ಗಾಯ ಮಾಡಿತು, ಪೂರ್ಣ ಪ್ರಮಾಣದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಾಡಿನಲ್ಲಿ ಬೆಂಕಿ ಅನಾಹುತ ಸಂಭವಿಸುವ ಲಕ್ಷಣವಿದೆ, ಕಾರ್ತಿಕ ಮಾಸದಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಲಿದೆ. ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಇಬ್ಭಾಗವಾಗುವ ಸಂಭವವಿದೆ. ಶುಭಕೃತ ನಾಮಸಂವತ್ಸರ ದೇಶದಲ್ಲಿ ಅಶುಭವನ್ನುಂಟು ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Leave A Reply

Your email address will not be published.